
ಬಳ್ಳಾರಿ : ಬುಡ ಕಾರ್ಯಾಲಯದ ಮೇಲೆ ಲೋಕಾಯುಕ್ತ ದಾಳಿ
ಬುಡ ಕಮಿಷನರ್ ಸಮೇತ ಸಿಬ್ಬಂದಿ ಬಂಧನ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 26- ಬಳ್ಳಾರಿ ನಗರ ಅಭಿವೃದ್ಧಿ ಪ್ರಾಧಿಕಾರ ಕಾರ್ಯಕ್ಕೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ಬಳ್ಳಾರಿ ನಗರ ಅಭಿವೃದ್ಧಿ ಪ್ರಾಧಿಕಾರ ( ಬು ಡಾ ) ಆಯುಕ್ತ ರಮೇಶ್ ವಟಗಲ್ 5 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ, ನಗದು ಸಮೇತ ಬಂದಿಸಲಾಗಿದೆ.
ಈರೇಶ್ ಎಂಬ ವ್ಯಕ್ತಿ ತನ್ನ 20 ಎಕರೆ ಜಮೀನಿ ಲೇಔಟ್ ಅಭಿವೃದ್ಧಿ ಸಲವಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅದಕ್ಕೆ ಅನುಮೋದನೆ ನೀಡಲು ವಿಳಂಬ ಮಾಡಿ ಲಂಚ ನೀಡಿದರೆ ಮಾತ್ರ ಅನುಮೋದನೆ ನೀಡಲಿದೆ ಎಂದು ಮಾತುಕತೆ ನಡೆಸಿದ್ದರು.
ಈ ಬಗ್ಗೆ ಈರೇಶ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ಎಂದು ಪ್ರಕರಣ ದಾಖಲಿಸಿಕೊಂಡು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ, ನಗರ ಯೋಜನಾ ಸದಸ್ಯ ಕಲ್ಲಿನಾಥ್ 6 ಲಕ್ಷ ರುಪಾಯಿ ಲಂಚದ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ, ಅದೇ ರೀತಿಯಾಗಿ ಬುಡ ನಗರ ಯೋಜನಾ ಸಹಾಯಕಿ ಯಶಸ್ವಿನಿ ಮೂರು ಲಕ್ಷ ಲಂಚ ನೀಡಬೇಕೆಂದು ಬೇಡಿಕೆ ಇಟ್ಟಿದ್ದ ಸಮಾಚಾರ, ಅದೇ ರೀತಿಯಾಗಿ ಫೋನ್ ಪೇ ನಲ್ಲಿ 10 ಸಾವಿರ, ಲಂಚದ ಹಣ ಪಡೆದ ಬುಡ ಮ್ಯಾನೇಜರ್ ನಾರಾಯಣ, ಫೋನ್ ಪೇ ನಲ್ಲಿ 20,000 ಪಡೆದು 60 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಕೇಸ್ ವರ್ಕರ್ ಶಂಕರ್, ಖಾಜಾಹುಸೇನ್ ಜೂನಿಯರ್ ಇಂಜಿನಿಯರ್ ಫೋನ್ ಪೇ ಮೂಲಕ 20,000 ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇವರನ್ನು ವಿಚಾರಣೆಗಾಗಿ ಬಾಂಧಿಸಲಾಗಿದೆ.