
ಮದ್ಯ ಸಾಗಾಣಿಕೆ: ವ್ಯಕ್ತಿಯ ಬಂಧನ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೦೭- ನಗರದ ರೈಲ್ವೇ ಸ್ಟೇಷನ್‍ನ ಪ್ಲಾಟ್‍ಫಾರ್ಮ್ ನಂ:02 ರಲ್ಲಿರುವ ವಾಟರ್ ಟ್ಯಾಂಕ್ ಹತ್ತಿರ ಭಾನುವಾರ ಶೋಧನೆ ನಡೆಸುತ್ತಿರುವ ಸಮಯದಲ್ಲಿ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಪ್ರದ್ದಟೋರು ಗ್ರಾಮದ ದಸ್ತಗಿರಿ ಎನ್ನುವ ವ್ಯಕ್ತಿಯು ಒಟ್ಟು 27.150 ಲೀ (40 ಬಾಟಲಿಗಳು) ಗೋವಾ ರಾಜ್ಯದಲ್ಲಿ ಮಾರಾಟಕ್ಕಿರುವ ಮದ್ಯವನ್ನು 02 ಟ್ರಾವೆಲ್ ಬ್ಯಾಗ್‍ಗಳಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವ ಸಮಯದಲ್ಲಿ ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಅಪರಾಧ ಮಾಹಿತಿ ಬ್ಯೂರೋದ ಅಬಕಾರಿ ನಿರೀಕ್ಷಕ ತುಕರಾಮ್ ನಾಯ್ಕ ಅವರು ತಿಳಿಸಿದ್ದಾರೆ.
ಹೊಸಪೇಟೆ ವಿಭಾಗ ಅಬಕಾರಿ ಜಂಟಿ ಆಯುಕ್ತ ಬಾಲಕೃಷ್ಣ ಹಾಗೂ ಬಳ್ಳಾರಿ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಮಂಜುನಾಥ.ಎನ್ ಅವರ ನಿರ್ದೇಶನದಂತೆ ಇಲಾಖೆ ಸಿಬ್ಬಂದಿಯೊಂದಿಗೆ ಖಚಿತ ಮಾಹಿತಿ ಮೇರೆಗೆ ದಸ್ತಗಿರಿ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.