
ಬಳ್ಳಾರಿ ಲೈಟಿಂಗ್ ಮತ್ತು ಸೌಂಡ್ ಅಸೋಸಿಯೇಷನ್ ನಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 01- ಕರ್ನಾಟಕ ರಾಜ್ಯದ ರಾಜ್ಯೋತ್ಸವ ಆಚರಣೆಯನ್ನು ಹಿಂದೂ ನಗರದ ನಾನಾ ಭಾಗಗಳಲ್ಲಿ ಸಡಗರದಿಂದ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಆಚರಿಸಲಾಯಿತು.
ಬಳ್ಳಾರಿ ಲೈಟಿಂಗ್ ಮತ್ತು ಸೌಂಡ್ ಸಿಸ್ಟಮ್ ಅಸೋಸಿಯೇಷನ್ ಅದ್ಹರದಲ್ಲಿ ನಗರದ ಮುಖ್ಯ ರಸ್ತೆಗಳಲ್ಲಿ ಎಪಿಎಂಸಿಯಿಂದ ರಾಯಲ್ ಸರ್ಕಲ್ ಮತ್ತು ಡಿಸಿ ಕಾಂಪೌಂಡ್ ಇತರ ಭಾಗಗಳಲ್ಲಿ ರಾಜ್ಯದ ಧ್ವಜವನ್ನು ಕೈಯಲ್ಲಿ ಹಿಡಿದು ದೇಶಭಕ್ತಿ ಗೀತೆಗಳನ್ನು ಹಾಡುತ್ತಾ ವಿಜೃಂಭಣೆಯಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಸಂಘದ ವತಿಯಿಂದ ಅನ್ನದಾನ ಕಾರ್ಯಕ್ರಮ ಕೂಡ ನಡೆಯಿತು. ಸಂಘದ ಅಧ್ಯಕ್ಷ ಪಿ.ಮಾರುಫ್, ಉಪಾಧ್ಯಕ್ಷ ಗುರುನಾಥ ಭಟ್ಟ, ಗೌರವಾಧ್ಯಕ್ಷ, ಎಚ್ ಶಿವಬಸಪ್ಪ, ಖಜಾಂಜಿ ನಜೀರ್, ಸಂಘದ ಸದಸ್ಯರು ಶ್ರೀನಿವಾಸ ನಾಗರಾಜು ರಮೇಶ ಮೌಲ ಓಬಳೇಶ, ಜಾಕೀರ್ ನೀಲಕಂಠ, ಪೀರ ಮತ್ತು ಇತರರು ಉಪಸ್ಥಿತರಿದ್ದರು.