
ಬಳ್ಳಾರಿ: ವಿ.ವಿ.ಯ 5 ವಿದ್ಯಾರ್ಥಿನಿಯರು ಉನ್ನತ ಶ್ರೇಣಿ ಪಡೆದಿದ್ದಾರೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,8- ಬಳ್ಳಾರಿ ವಿ.ವಿ. ಸಂಘದ ವಿಜಯನಗರ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 05 ವಿದ್ಯಾರ್ಥಿನಿಯರು 2022-23 ನೇ ಸಾಲಿನಲ್ಲಿ ನಡೆದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ನಡೆಸಿದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿವಿಧ ವಿಭಾಗದ ಪರೀಕ್ಷೆಗಳಲ್ಲಿ ರಾಂಕ್ ಗಳನ್ನು ಪಡೆದಿದ್ದು ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಮತ್ತು ಮಹಾವಿದ್ಯಾಲಯಕ್ಕೆ ಗೌರವ ತಂದಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ರಾಂಕ್ ಪಡೆದ ಎಲ್ಲಾ ವಿದ್ಯಾರ್ಥಿನಿಯರಿಗೆ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಾಮನ ಗೌಡ, ಉಪಾಧ್ಯಕ್ಷ ಅಲ್ಲಂ ಚನ್ನಪ್ಪ, ಕಾರ್ಯದರ್ಶಿಗಳಾದ ಶ್ರೀ ಗುರುಸಿದ್ಧಸ್ವಾಮಿ, ಸಹಕಾರ್ಯದರ್ಶಿಗ ದರೂರು ಶಾಂತನಗೌಡ, ಖಜಾಂಚಿ ಗೋನಾಳ ರಾಜಶೇಖರ ಗೌಡ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಅಸುಂಡಿ ಬಿ ನಾಗರಾಜಗೌಡ, ಆಡಳಿತ ಮಂಡಳಿ ಸಧಸ್ಯರಾದ ಎಸ್ ವಿನಾಯಕ, ಎನ್.ಎಸ್. ರೇವಣಸಿದ್ದಪ್ಪ, ವೀರೇಶ್ ಜವಳಿ, ಜಿ.ವೀರೇಶ್, ಬಿ.ಸಿ.ಸುರೇಶ್, ಜಿ.ಅಮರೇಗೌಡ, ಪ್ರಾಚಾರ್ಯ ಟಿ.ಸುಭಾಷ್ ಮತ್ತು ಮಹಾವಿದ್ಯಾಲಯದ ಸಮಸ್ತ ಬೋಧಕ, ಬೋಧಕೇತರ ಸಿಬ್ಬಂದಿ ಹಾಗು ವಿದ್ಯಾರ್ಥಿಗಳು ಯಾಂಕ್ ಪಡೆದ ವಿದ್ಯಾರ್ಥಿನಿಯರನ್ನು ಅಭಿನಂದಿಸಿದ್ದಾರೆ.