WhatsApp Image 2024-07-08 at 11.37.10 AM

ಬಳ್ಳಾರಿ : ಸೌರಭ ದಾಸ ಸಾಹಿತ್ಯ ವಿದ್ಯಾಲಯದ ಪರೀಕ್ಷೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 8- ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಶ್ರೀ ಸತ್ಯನಾರಾಯಣ ದೇವಾಲಯದ ಸಭಾಂಗಣದಲ್ಲಿ ಭಾನುವಾರ ಸೌರಭ ದಾಸ ಸಾಹಿತ್ಯ ವಿದ್ಯಾಲಯದ ಪರೀಕ್ಷೆಗಳು ನಡೆದವು.

ವಿಶ್ವ ಮಧ್ವ ಮಹಾ ಪರಿಷತ್ತಿನ ಅಂಗ ಸಂಸ್ಥೆಯಾದ ಸೌರಭ ದಾಸ ಸಾಹಿತ್ಯ ವಿದ್ಯಾಲಯದ ವತಿಯಿಂದ ಆಯೋಜಿಸಿದ್ಧ ಪರೀಕ್ಷೆಯಲ್ಲಿ, ದಾಸ, ದಾಸನಿಧಿ, ದಾಸಶ್ರೀ, ದಾಸರತ್ನ, ದಾಸ ಶಿರೋಮಣಿ, ದಾಸರತ್ನ ಮತ್ತು ದಾಸಸಾಗರ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆದರು.

ಪಂ. ಪ್ರಣವಾಚಾರ್ ಅವರು ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡುವ ಮೂಲಕ ಪರೀಕ್ಷೆಗೆ ಚಾಲನೆ ನೀಡಿದರು. ಬಳ್ಳಾರಿ ನಗರದ ಸೌರಭ ದಾಸ ಸಾಹಿತ್ಯ ವಿದ್ಯಾಲಯದ ಸಂಚಾಲಕಿ ಸೌಭಾಗ್ಯ ಕಾವಿ ಅವರು ಪರೀಕ್ಷೆ ಉಸ್ತುವಾರಿ ವಹಿಸಿದ್ದರು.

ನಂತರ ಮಾತನಾಡಿದ ಅವರು, ಕಳೆದ 2017 ರಲ್ಲಿ ಶ್ರೀಮದುತ್ತರಾಧಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಅವರಿಂದ ಪ್ರತಿಷ್ಠಾಪಿತಗೊಂಡ ಸೌರಭ ದಾಸ ಸಾಹಿತ್ಯ ವಿದ್ಯಾಲಯವು, ದಾಸ ಸಾಹಿತ್ಯದ ಸಾಹಿತ್ತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವದರೊಂದಿಗೆ, ಪ್ರಮುಖವಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ.

ಶ್ರೀ ಜಗನ್ನಾಥದಾಸರು ರಚಿಸಿದ ಶ್ರೀಮದ್ ಹರಿಕಥಾಮೃತಸಾರ ಗ್ರಂಥದ ಮೂಲಕ ಬದುಕಿನ ಸಾಧನೆಯ ದಾರಿಯನ್ನು ತೋರ್ಪಡಿಸುತ್ತದೆ.

ರಾಮಾಯಣ, ಮಹಾಭಾರತ ದಂತಹ ಮಹತ್ವದ ಗ್ರಂಥಗಳನ್ನು ಪರಿಚಯಿಸುವ ಮೂಲಕ ಜೀವನಾವಶ್ಯಕವಾದ ಸದ್ಗುಣಗಳನ್ನು ವಿದ್ಯಾಲಯ ಬೋಧಿಸುತ್ತಿದೆ. ಸೌರಭ ದಾಸ ಸಾಹಿತ್ಯ ವಿದ್ಯಾಲಯವು ಪಂ. ಪ್ರಮೋದಾಚಾರ್ ಪೂಜಾರ್ ಹನುಮಸಾಗರ ಅವರ ಸಾರಥ್ಯದಲ್ಲಿ ಹಾಗೂ ಅನೇಕ ವಿದ್ವಾಂಸರ ಸಹಕಾರದೊಂದಿಗೆ ಜ್ಞಾನ ಪ್ರಸಾರ ಮಾಡುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.

ಸುಮಾರು ಮಹಿಳೆಯರು ನಿಗಧಿತ ಸಮಯಕ್ಕೆ ಹಾಜರಾಗಿ ಯಾವುದೇ ಗೊಂದಲಗಳಿಲ್ಲದೇ ಪರೀಕ್ಷೆ ಬರೆದರು.

ಇದಕ್ಕೂ ಮುನ್ನ ಮಹಿಳೆಯರಿಂದ ಸಾಮೂಹಿಕ ಭಜನೆ ನಡೆಯಿತು.

Leave a Reply

Your email address will not be published. Required fields are marked *

error: Content is protected !!