
ಬಸವ ಜ್ಯೋತಿ ತರುವ ಕಾರ್ಯಕ್ರಮಕ್ಕೆ ಚಾಲನೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 8- ಬಸವೇಶ್ವರನಗರದಲ್ಲಿರುವ ರಾಷ್ಟ್ರೀಯ ಬಸವದಳ ಸಭಾಮಂಟಪದಲ್ಲಿ ಇಂದು ಕಳೆದ 15 ವರ್ಷದಿಂದ ಆಚರಿಸುತ್ತಿದ್ದ ಬಸವ ಜ್ಯೋತಿ ಕಾರ್ಯಕ್ರಮಕ್ಕೆ ಎಂದು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ಮಾಡಲಾಯಿತು.
ಸತತ 15 ವರ್ಷಗಳಿಂದ, ಸಮಾಜದ ಮುಖಂಡರಾದ ದರೂರು ಶಾಂತನಗೌಡ ನೇತೃತ್ವದಲ್ಲಿ ಕೂಡಲಸಂಗಮದಿಂದ ಬಳ್ಳಾರಿಯ ತರಲಾಗುವುದು.
ಶುಕ್ರವಾರ ಬಸವ ಜಯಂತಿ ಅಂಗವಾಗಿ ಸೌಹಾರ್ದತೆಯ ಬಸವ ಜ್ಯೋತಿಯನ್ನು ಮೋತಿ ವೃತ್ತದಲ್ಲಿರುವ ಬಸವ ಪುತ್ತಳಿಗೆ ಪೂಜೆ ಸಲ್ಲಿಸಿ ಬಸವೇಶ್ವರ ನಗರದಲ್ಲಿರುವ ರಾಷ್ಟ್ರೀಯ ಬಸವದಳದವರೆಗೆ ಮೆರವಣಿಗೆ ಮೂಲಕ ತರಲಿದ್ದು , ಈ ಸಂದರ್ಭದಲ್ಲಿ ಲಿಂಗಾಯತ ಸಮಾಜದ ಮುಖಂಡರೆ ಎಲ್ಲರೂ ಒಟ್ಟಾಗಿ ಸೇರಿ ಸಮಾನತೆ ಕಾಯಕ್ಕೆ ನಿಷ್ಠೆ ಸೌಹಾರ್ದ ಸಮಾಜವನ್ನು ಕಟ್ಟಲು ಹಾಗೂ ಮುಂದಿನ ಪೀಳಿಗೆಗೆ ಶರಣರ ಪರಂಪರೆಯನ್ನು ಅರ್ಥೈಸುವ ಕೆಲಸದಲ್ಲಿ ಭಾಗಿಯಾಗಲಿದ್ದಾರೆ.
ಕಾರ್ಯಕ್ರಮದಲ್ಲಿ ಲಿಂಗಾಯತ ಸಮಾಜದ ಮುಖಂಡರಾದ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಿಷ್ಟಿ, ರುದ್ರಪ್ಪ, ಮೀನಳ್ಳಿ ಚಂದ್ರಶೇಖರ್ ಗೌಡ, ಗೋನಾಳ್ ರಾಜಶೇಖರ್ ಗೌಡ, ಬ್ಯಾಲ ಚಿಂತೆ ಶಿವಶಂಕರಗೌಡ, ಜಿನ್ ಬಸವರಾಜ, ವಿಜಯಕುಮಾರ್ ರಾಷ್ಟ್ರೀಯ ಬಸವದಾಳದ ರವಿಶಂಕರ್ ಮೊದಲಾದವರು ಉಪಸ್ಥಿತರಿದ್ದರು.