01 TVR 01

 ಬಸವಣ್ಣನವರ ಅನುಭವ ಮಂಟಪ  ಮಾದರಿ

  ಶರಣ ಸಾಹಿತ್ಯ ಪರಿಷಸ್ತಿ ಪ್ರಧಾನ ಸಮಾರಂಭ

ಕರುನಾಡ ಬೆಳಗು ಸುದ್ದಿ

ತಾವರಗೇರಾ, ೦೧- ಸಮಾಜದ ಶೋಷಿತ ಸಮುದಾಯವನ್ನು ಒಂದು ಕಡೆ ಸೇರಿಸಿ ಶಕ್ತಿ, ಜ್ಞಾನ ತುಂಬುವ ಉದ್ದೇಶದಿಂದ ೧೨ನೇ ಶತಮಾನದಲ್ಲಿ ಬಸವಣ್ಣನವರು ಸೂಚಿಸಿ ಸಮುದಾಯವನ್ನು ಉದ್ಧಾರ ಮಾಡುವುದಕ್ಕಾಗಿ ಅನುಭವ ಮಂಟಪ ನಿರ್ಮಿಸಿದ್ದರು  ಎಂದು ಕಪತಗುಡ್ಡ ನಂದಿ ವೇರಿ ಸಂಸ್ಥಾನ ಮಠದ ಶಿವಕುಮಾರ ಮಹಾಸ್ವಾಮೀಜಿ  ಹೇಳಿದರು.

ಅವರು   ಪಟ್ಟಣದ ಮೌನೇಶ್ವರ ದೇವಸ್ಥಾನದಲ್ಲಿ ಭಾನುವಾರ ಜಾಗತಿಕ ಲಿಂಗಾಯತ ಮಹಾಸಭಾ ವೇದಿಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಶರಣ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ವಚನ ಕಂಠಪಾಠ ಬರೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಸವಣ್ಣನವರು ಹಲವಾರು ಸಮಾಜಕ್ಕೆ ವಚನಗಳ ಕೊಡುಗೆಗಳನ್ನು ನೀಡಿದ್ದು, ಪಟ್ಟಣದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಇಂತಹ ವಿಶೇಷವಾದ ಕಾರ್ಯಕ್ರಮ ಏರ್ಪಡಿಸಿದ್ದು,ಶರಣರ ವಚನಗಳನ್ನು ಬರೆದು ಉತ್ತಮ ಜ್ಞಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.  ವಚನ ಕಂಠಪಾಠ ಬರೆಯುವ ಸ್ಪರ್ಧೆ ಜಿಲ್ಲೆ, ತಾಲೂಕು, ರಾಜ್ಯದಲ್ಲಿ ಮೊದಲ ನಡೆಸಲಾಗಿದೆ. ಇದರಿಂದ ಶರಣರ ಸಾಹಿತ್ಯ ಸಂಸ್ಕೃತಿ ಹೆಚ್ಚು ವಿಸ್ತಾರವಾಗಲು ಸಾಧ್ಯವಾಗಲಿದೆ ಎಂದರು.

ಸ್ಪರ್ಧೆ ನಿರ್ವಹಣೆಯ ಮಾಡಿದ್ದ ಕಿರಣ ಸರನಾಡಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ನಟರಾಜ್ ಸೋನಾರ್, ಕಸಾಪ ತಾಲೂಕ ಘಟಕದ ನಿಕಟ ಪೂರ್ವ ಅಧ್ಯಕ್ಷ ರವೀಂದ್ರ ಬಾಕಳೆ, ಸಾಹಿತಿ ಶೇಖರಗೌಡ ಸರನಾಡಗೌಡ ಮಾತನಾಡಿದರು. ವೇದಿಕೆಯಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು.

ನಂತರ ವಚನ ಕಂಠಪಾಠ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದ ೯ ಮತ್ತು ೧೦ನೇ ತರಗತಿಯ ವಿಭಾಗದ ಮೂವರು ಮತ್ತು ೮ನೇ ತರಗತಿ ವಿಭಾಗದ ಮೂವರು, ಐದು ಮತ್ತು ಆರನೇ ತರಗತಿಯ ಮೂವರು ಹಾಗೂ ೧೫ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಯಿತು.  ಸಾಹಿತಿ ಶೇಖರಗೌಡ ಸರನಾಡಗೌಡರ, ಲಿಯೊ ಯುಥ್ ಕ್ಲಬ್ ಗೌರವಾಧ್ಯಕ್ಷ ನಾರಾಯಣಗೌಡ ಮೆದಿಕೇರಿ, ಬಸಪ್ಪ ಗಡಿಗಿ, ಶರಣಬಸಪ ಬ್ಯಾಲಿಹಾಳ, ಕಸಾಪ ಹೋಬಳಿ ಘಟಕದು ಸದಸ್ಯರು, ಶರಣ ಸಾಹಿತ್ಯ ಪರೀಷತು ಸದಸ್ಯರು ಮತ್ತು ಸಾಹಿತ್ಯಾಸಕ್ತರು, ಶಿಕ್ಷಣ ಪ್ರೇಮಿಗಳು, ಶಿಕ್ಷಣ ಇಲಾಖೆಯ ವಿವಿಧ ಶಾಲೆಗಳ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು. ಹನಮಂತಪ್ಪ ಶಿರವಾದ ಸ್ವಾಗತಿಸಿದರು. ಸೋಮಲಿಂಗಪ ತುರ್ವಿಹಾಳ ನಿರೂಪಿಸಿದರು.

 

 

 

Leave a Reply

Your email address will not be published. Required fields are marked *

error: Content is protected !!