
ಬಾಲ ಕಲಾವಿದರು ಸ್ಟಾರ್ ನಟರಾಗಲಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 1೫- ಬಿಸರಳ್ಳಿಯ ಗ್ರಾಮೀಣ ಪ್ರತಿಭೆಗಳಾದ ಪ್ರೀತಮ್ಮ ಕೊಪ್ಪದ ಪ್ರತಿಕ್ ಕೊಪ್ಪದ್ ಬಾಲ ಕಲಾವಿದರು ಮುಂದೇ ಸ್ಟಾರ್ ನಟರಾಗಿ ಮೀಂಚಲಿ ಎಂದು ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ್ ಹೇಳಿದರು.
ಅವರು ಶುಕ್ರವಾರದಂದು ಕೊಪ್ಪಳದ ಲಕ್ಷ್ಮೀ ಚಿತ್ರಮಂದಿರದಲ್ಲಿಓ ನನ್ನ ಚೇತನ ಚಲನಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕೊಪ್ಪಳ ಎರಡನೆ ಗಾಂದಿನಗರ ವೇಂದು ಹೆಸರು ಮಾಡಿದೆ ಹಿಂದೇ ಖಾದ್ರಿಅವರು ಸೇರಿದಂತೆ ಅನೇಕರು ಕೊಪ್ಪಳದವರು ಚಲನಚಿತ್ರ ವಿತರಕರಾಗಿ ಚಿತ್ರರಂಗಕ್ಕೆ ಸೇವೆಸಲ್ಲಿಸಿದ್ದಾರೆ, ಕೊಪ್ಪಳಕ್ಕು ಹಾಗೂ ಚಿತ್ರರಂಗಕ್ಕು ಅವಿನಭಾವ ಸಂಭಂದವಿದೆ ಎಂದರು.
ಇಲ್ಲಿ ಹಲವಾರು ಚಲನಚಿತ್ರ , ಕಿರು ಚಿತ್ರ ನಿರ್ಧೇಶಕರು ಹಾಗೂ ನಿರ್ಮಾಪಕರು ಹಾಗೂ ಕಲಾವಿದರಿದ್ದು ನೆಲೆಸಿದ ಕಲಾವಿದರ ನಾಡಾಗಿದೆ, ಚಲನ ಚಿತ್ರ ಕಲೆ, ಸಂಗಿತ ಹಾಗೂ ಸಾಹಿತ್ಯದ ತವರೂರು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಬಸವರಾಜ ಕೊಪ್ಪಳ ಕಲಾವಿದ ಬಿಡಾಗಿದೆ ಜಿಲ್ಲೆಯ ಪ್ರತಿಬೆಗಳನ್ನು ಬೆಳೆಸುವ ಜವಾಬ್ದಾರಿ ಜನರ ಮೇಲಿದೆ , ಪ್ರತಿಯಬ್ಬರ ಚಲನಚಿತ್ರ ವಿಕ್ಷೀಸಿ ಇತರರನ್ನು ಕರೆತನ್ನಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾತನಡಿದ ನಿರ್ಮಾಪಕ ದೀಪಕ್ ಎರಡನೆ ಗಾಂದಿ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಚಿತ್ರ ವಿಕ್ಷಿಸಿ ಬೆಂಬಲಿಸಉವಂತೆ ಮನವಿ ಮಾಡಿದರು.
ಜಿಲ್ಲೆಯ ಬಿಸರಳ್ಳಿಯ ಗ್ರಾಮೀಣ ಪ್ರತಿಭೆಗಳಾದ ಪ್ರೀತಮ್ಮ ಕೊಪ್ಪದ. ಪ್ರತಿಕ್ ಕೊಪ್ಪದ್ ಪೂರ್ಣ ಪ್ರಮಾಣದ ನಾಯಕರಾಗಿ ನಟೆಸಿರುವ ಓ ನನ್ನ ಚೇತನ ಚಲನಚಿತ್ರ ಕೊಪ್ಪಳದ ಲಕ್ಷ್ಮೀ ಚಿತ್ರಮಂದಿರದಲ್ಲಿ ಕನ್ನಡ ರಾಜೋತ್ಸವ ಪ್ರಶಸ್ತಿ ಉರಸ್ಕೃತೆ ಹುಚ್ಚಮ್ಮ ಉದ್ಘಾಟಿಸುವ ಮೂಲಕ ಬಿಡುಗಡೆ ಗೊಂಡಿತು.
ಸನ್ಮಾನ ಈ ಸಂದರ್ಭದಲ್ಲಿ ಕನ್ನಡ ರಾಜೋತ್ಸವ ಪ್ರಶಸ್ತಿ ಉರಸ್ಕೃತೆ ಹುಚ್ಚಮ್ಮ ಚಿತ್ರ ಕಲಾವಿದರಾದ ಪ್ರತೀಕ ಹಾಗೂ ಪ್ರೀತಮ್ಮ್ ಕೊಪ್ಪದ ಸೇರಿದಂತೆ ಕಲಾವದರಿಗೆ ಸೇರಿದಂತೆ ಅನೇಕರುಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಗರದ ಗಣ್ಯರಾದ ಬಸವರಾಜ ಬೊಳ್ಳೂಳಿ, ಕ್ಷೇತ್ರ ಶಿಕ್ಷಣ ಅಧಿಕಾರಿ ಶಕ್ರಯ್ಯ ಕೆ,ಎಸ್. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಶರನಗೌಡ ಪಾಟೀಲ್, ಶಿಕ್ಷಕ ಹನುಮಂತಪ್ಪ ಚಲವಾದಿ, ವಿಕಲ ಚೇತನರ ನೌಕರರ ಸಂಘದ ಅಧ್ಯಕ್ಷ ಬೀರಪ್ಪ ಅಂಗಡಿ, ನಿವೃತ್ತ ಶಿಕ್ಷಕರಾದ ಗವಿಸಿದ್ದಪ್ಪ ಕೊಪ್ಪಳ,ವಿರೇಶ ಮಹಾಂತಯ್ಯಮಠ, ಮಹಾಂತೇಶ ಮೈನಳ್ಳಿ,ನ್ಯಾಯವಾದಿಗಲ ಸಂಘದ ಅಧ್ಯಕ್ಷ ಎ,ವಿ,ಕನವಿ,ಬಿಸರಳ್ಳಿ ಗ್ರಾ,ಪಂ ಅದ್ಯಕ್ಷ ರವಿ ಪಾಟೀಲ್,ಮಂಜುನಾಥ ಅಂಗಡಿ, ಬಸವರಾಜ ಕಾಮಲಾಪೂರ, ಶಿವಕುಮಾರ ಕುಕನೂರ, ಮಾರುತೇಶ ಅಂಗಡಿ, ಮಂಜುನಾಥ ಕೊಪ್ಪದ್ ಇತರರು ಇದ್ದರು.
https://www.youtube.com/@KarunadaBelagu