
ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 2- ನಗರದ ಬಿಜೆಪಿ ಮುಖಂಡರುಗಳು ಹಾಗೂ ಮಾಜಿ ನಗರಸಭೆ ಸದಸ್ಯರುಗಳಾದ ಶಿವಪ್ಪ ಕೋಣಂಗಿ,ಅಮರ್ ಕಲಾಲ್, ದತ್ತಣ್ಣ ವೈದ್ಯ ರವರು ಹಾಗೂ ಬಿಜೆಪಿ ಕೊಪ್ಪಳ ತಾಲ್ಲೂಕ ಘಟಕದ ಮಾಜಿ ಅಧ್ಯಕ್ಷರು ಮುತ್ತುಸ್ವಾಮಿ ನರೇಗಲ್ಮಠ ರವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಹಾಗೂ ಸನ್ಮಾನ್ಯ ಶಾಸಕರ ಅಭಿವೃದ್ಧಿ ಕಾರ‍್ಯಗಳನ್ನು ಮೆಚ್ಚಿ ಇಂದು ಸನ್ಮಾನ್ಯ ಶಾಸಕರು ಕೆ.ರಾಘವೇಂದ್ರ ಹಿಟ್ನಾಳ ರವರ ಸಮ್ಮುಖದಲ್ಲಿ ಸಾಂಕೇತಿಕವಾಗಿ ಕಾಂಗ್ರೆಸ್ ಪಕ್ಷ ಸರ‍್ಪಡೆಯಾದರು. ಮುಂದಿನ ದಿನಗಳಲ್ಲಿ ತಮ್ಮೊಂದಿಗೆ ಹಲವಾರು ಕರ‍್ಯರ‍್ತರನ್ನು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸರ‍್ಪಡೆಗೊಳಿಸಲಿದ್ದಾರೆ.
ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯ ಅರುಣ ಅಪ್ಪುಶೆಟ್ಟಿ, ಮುಖಂಡರಾದ ಅಜ್ಜಪ್ಪ ಸ್ವಾಮಿ, ವಿಜಯಕುಮಾರ, ಶಿವಣ್ಣ ಪೌಲಿಶೆಟ್ರ, ವಿಜಯಕುಮಾರ ಎಡವೆ, ಯುವ ಮುಖಂಡ ಕೆ. ಸೋಮಶೇಖರ ಹಿಟ್ನಾಳ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇನ್ನಿತರರು ಉಪಸ್ಥಿತರಿದ್ದರು.