
ಬೆಳಗಾವಿ ಮಹಿಳೆ ಮೇಲೆ ಅಮಾನವೀಯ ಹಲ್ಲೆ ಪ್ರಕರಣ ಸಂತ್ರಸ್ತ
ಮಹಿಳೆಯ ಕುಟುಂಬಕ್ಕೆ ಸರ್ಕಾರದಿಂದ ಜಮೀನು ಮಂಜೂರು
ಕರುನಾಡ ಬೆಳಗು ಸುದ್ದಿ
ಬೆಳಗಾವಿ, ೧೬- ಬೆಳಗಾವಿ ಮಹಿಳೆ ಮೇಲೆ ಅಮಾನವೀಯ ಹಲ್ಲೆ ಪ್ರಕರಣ ಸಂತ್ರಸ್ತ ಮಹಿಳೆಯ ಕುಟುಂಬಕ್ಕೆ ಸರ್ಕಾರ 2.03 ಎಕರೆ ಜಮೀನು ಮಂಜೂರು ಮಾಡಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾಹಿತಿನೀಡಿದ್ದು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಡಗಗಳ ಅಭಿವೃದ್ಧಿ ನಿಗಮದಿಂದ ವಿಶೇಷ ಪ್ರಕರಣ ಎಂದು ಪರಿಗಣಿಸಿ ಜಮೀನು ಮಂಜೂರು ಮಾಡಿದೆ.ಈಗಾಗಲೇ ಸಿಎಂ 5 ಲಕ್ಷ ಪರಿಹಾರ ಘೋಷಣೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದಿಂದಲೂ 50 ಸಾವಿರ ಪರಿಹಾರ ಘೋಷಣೆ ಮಾಡಿದೆ.
ಕಡ್ಡಾಯ : ಇನ್ನು ನೊಂದ ಸಂತ್ರಸ್ತ ಮಹಿಳೆ ಭೇಟಿಗೆ ಅನುಮತಿ ಕಡ್ಡಾಯ ಹೈಕೋರ್ಟ್ ಆದೇಶದಂತೆ ಸಂತ್ರಸ್ತ ಮಹಿಳೆ ಭೇಟಿಗೆ ಅನುಮತಿ ಕಡ್ಡಾಯ ಮಾಡಿದೆ. ಸಂತ್ರಸ್ತ ಮಹಿಳೆಯನ್ನು ಅವಳ ಕುಟುಂಬದ ಸದಸ್ಯರು ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರು ಮಾತ್ರ ಬೇಟಿಗೆ ಅವಕಾಶ ಬೇರೆ ಯಾವುದೇ ವ್ಯಕ್ತಿ ಅಥವಾ ಸಂಘಟನೆಯವರು ಮಹಿಳೆಯನ್ನು ಬೇಟಿಯಾಗಬೇಕಾದಲ್ಲಿ ಅನುಮತಿ ಪಡೆಯಬೇಕು ನೊಂದ ಮಹಿಳೆ ಮತ್ತು ವೈದ್ಯಾಧಿಕಾರಿಗಳ ಲಿಖಿತ ಅನುಮತಿಯೊಂದಿಗೆ ಮಾತ್ರ ಭೇಟಿಗೆ ಅವಕಾಶ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಎಸ್.ಎನ್ ಸಿದ್ದರಾಮಪ್ಪ ಪ್ರಕಟಣೆಯಲ್ಲಿ ಮಾಹಿತಿ