
ಬೇಸಿಗೆಯಲ್ಲಿ ಕುಡಿಯುವ ನೀರುನ ಸಮಸ್ಯೆ ಆಗದಂತೆ, ಕ್ರಮವಹಿಸಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,2- ಮುಂಬರುವ ಬೇಸಿಗೆ ದಿನಗಳಲ್ಲಿ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎಲ್ಲಿಯೂ ಕಾಣದಂತೆ ಮಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಆದೇಶ ನೀಡಿದರು.
ಇಂದು ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಮಾವೇಶದಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ, ಈ ವರ್ಷ ಪ್ರಾರಂಭದಿಂದಲೇ ಬೇಕಾದಂತಹ ಮಳೆ ಅಭಾವದ ಕಾರಣ ಅಂತರ್ಜಲ ಕುಸಿದಿದೆ. ಹಾಗಾಗಿ ಎಲ್ ಎಲ್ ಸಿ ಕಾಲುವೆ ನೀರಿನ ಸರಬರಾಜು ಹಳ್ಳಿಗಳ ಕುಡಿಯುವ ನೀರಿಗಾಗಿ, ಬಿಡಲಾಗುತ್ತಿದೆ ಎಂದರು. ಅದಕ್ಕಾಗಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕೆಂದು ತಾಕಿದು ನೀಡಿದರು.
ಗ್ರಾಮಗಳಲ್ಲಿರುವ ಕೆರೆಗಳನ್ನು ತುಂಬಿಸುವುದು ಮತ್ತು ಓವರ್ ಹೆಡ್ ಟ್ಯಾಂಕ್ ನೀರು ಸ್ಟಾಕ್ ಇಡುವುದು, ಎಲ್ ಎಲ್ ಸಿ ಕಾಲುವೆಗಳಲ್ಲಿ ಬಿಟ್ಟ ನೀರನ್ನು ರೈತರು ಬೆಳೆಗೆ, ಇತರ ಉದ್ದೇಶಗಳಿಗೆ ಬಳಸಿದಂತೆ ಕೇವಲ ಕುಡಿಯುವ ನೀರಿಗೆ ಉಪಯೋಗಿಸಬೇಕೆಂದು ಹೇಳಿದರು. ಪ್ರಸ್ತುತ ಅಲ್ಲಿ ಪುರಕೆರೆಯಲ್ಲಿ 7.5 ಮೀಟರ್ ನೀರು ಸ್ಟಾಕ್ ಇದೆ ಎಂದು ಸಭೆಗೆ ಅಧಿಕಾರಿಗಳು ತಿಳಿಸಿದರು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ವಿವಿಧ ವಿಭಾಗಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.