
ಬ್ರಿಟಿಷ್ ರಿಗೆ ಸಿಂಹ ಸ್ಪಪ್ನವಾಗಿದ. ವೀರರಾಣಿ ಕಿತ್ತೂರು ಚೆನ್ನಮ್ಮ ಮಲ್ಲಪ್ಪ ಬಂಗಾರಿ (ದಳಪತಿ)
ಯಲಬುರ್ಗಾ 23 – ಕನ್ನಡ ನಾಡಿನ ವೀರ ವನಿತೆ. ಶೌರ್ಯ. ಸ್ವಾಭಿಮಾನದ ಪ್ರತೀಕ. ಬ್ರಿಟಿಷ್ ರಿಗೆ ಸಿಂಹ ಸ್ಪಪ್ನದಂತೆ ಕಾಡಿದ ವೀರ ರಾಣಿಕಿತ್ತೂರು ರಾಣಿ ಚೆನ್ನಮ್ಮ ಎಂದು ಪಂಚಮಸಾಲಿ ಹಿರಿಯ ಮುಖಂಡ ಮಲ್ಲಪ್ಪ ಬಂಗಾರಿ ದಳಪತಿ ಅವರು ಹೇಳಿದರು.
ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಜಯಂತಿ ಆಚರಣೆಯ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು. ನಾಡಿನ ಜನತೆಗೆ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿಯ ಶುಭಾಶಯಗಳು.ನಮ್ಮ ದೇಶಗೋಸ್ಕರ ಹೋರಾಡಿದ ದಿಟ್ಟ ವೀರರಾಣಿ. ಬ್ರಿಟಿಷ್ ರನ್ನು ಸೆದಬಡಿದ ಪರಾಕ್ರಮಿ. ಎಂದರು ಇಂದಿನ ಯುವಕರು ಅವರ ತತ್ವ ಆದರ್ಶಗಳನ್ನು ನಾವು ನೀವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುಬೇಕು.ಎಂದು ಹೇಳಿದರು. ನಂತರ ಪಂಚಾಯಿತಿಯ ಸಿಬ್ಬಂದಿ ಸಂಗಮೇಶ ಎಂ. ಬಿ. ಮಾತನಾಡಿ.
“ಇಡಿಯಾದರೆ ಬದುಕುವೆವು ,ಬಿಡಿಯಾದರೆ ಸಾಯುವೆವು ” ಎಂಬ ಒಗ್ಗಟ್ಟಿನ ಮಂತ್ರ ಘೋಷಿಸಿ ನಾಡು-ನುಡಿಯ ರಕ್ಷಣೆಗಾಗಿ ಬ್ರಿಟೀಷರ ವಿರುದ್ಧ ದಿಟ್ಟತನದಿಂದ ಹೋರಾಡಿದ ಅವರ ಸಾಹಸ-ಪರಾಕ್ರಮ ನಾಡಿನ ಎಲ್ಲ ಜನತೆಗೆ ಪ್ರೇರಣೆಯಾಗಿದೆ.
ಬ್ರಿಟಿಷರನ್ನು ಸದೆಬಡಿದು ವಿಜಯದ ಕಹಳೆ ಮೊಳಗಿಸಿದ ವೀರ ರಾಣಿ, ಕನ್ನಡ ನಾಡಿನ ವೀರ ಮಹಿಳೆಯರಲ್ಲಿ ಅತ್ಯಂತ ಪರಾಕ್ರಮಿ ವೀರ ಮಹಿಳೆ. ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ. ಉಪಾಧ್ಯಕ್ಷ. ಸವ೯ ಸದಸ್ಯರು ಗ್ರಾಮದ ಸಮಾಜದ ಮುಖಂಡರು ಮತ್ತು ಹಿರಿಯರು ಯುವಕರು ಹಾಗು ಇತರರು ಭಾಗವಹಿಸಿದರು.