
ಮಹರ್ಷಿ ಕಣ್ವರು
ವಸಂತ ಪಂಚಮಿ ( ಜನ್ಮೊತ್ಸ ನಿಮಿತ್ತ) 2024 ಬುಧವಾರ ಫೇಬ್ರವರಿ 14
ಋಗ್ವೇದದ ಮಂತ್ರ ದಾಷ್ಠಾರಂ, ಯಾಜ್ಞವಲ್ಕ್ಯ ಸ್ಯಾದಿ ಶಿಷ್ಯಂ, ಜ್ಞಾನ ನಿಧಿಂ ಕಣ್ವ ಮುನಿಯಂ ತಂ ವಂದೇ ಭಕ್ತಿ ಪೂರ್ವಕಂ, ಸಮಸ್ತ ದೋಷದುರಾಯ ಮೋಕ್ಷಮಾರ್ಗೈಕ ಗುರವೇ, ವಿದ್ಯಾವಾರೀಧಿ ಕಣ್ವಾಯ ವೇದಬೋದಾಯತೇ ನಮಃ,
ಋಗ್ವೇದಕ್ಕೆ ಮಂತ್ರ ಕೊಟ್ಟವರು, ಯಾಜ್ಞವಲ್ಕ್ಯ ರ ಶಿಷ್ಯರು, ಜ್ಞಾನದ ನಿಧಿಯು, ಸಮಸ್ತ ದೋಷವನ್ನು ಸ್ಮರಣೆ ಮಾತ್ರದಿಂದಲೇ ಪರಿಹರಿಸುವವರು,ವಿದ್ಯೆಯ ಸಾಗರವಾಗಿರುವವರು, ವೇದ ಭೋದಿಸಿದ ಮುನಿಗೆ ನಮ್ಮ ಭಕ್ತಿ ಪೂರ್ವಕ ನಮಸ್ಕಾರ.ಶ್ರೀ ಕಣ್ವರು ಘೋರಮಹರ್ಷಿ ಮತ್ತು ಕೇಶಿನಿ ದಂಪತಿಗಳ ಸುಪುತ್ರರು,
ಶ್ರೀ ಕಣ್ವರು ಶ್ರೀ ಯಾಜ್ಞವಲ್ಕ್ಯ ರ ಶಿಷ್ಯರು ಬೋಧಾಯನರ ತಂದೆಯವರು,ಶ್ರೀ ಕಣ್ವರು ಅವರು ಶಿಷ್ಯರು ಮತ್ತು ಮಕ್ಕಳು ಸೇರಿ ಋಗ್ವೇದದ ೧೧೦೦ಕ್ಕು ಹೆಚ್ಚು ಮಂತ್ರ ದಾಷ್ಠಾರರಾದರು,ಕಣ್ವ ಶಾಖಾಪ್ರವರ್ತಕರು,
ಕಣ್ವಾಶ್ರಮಂ, ತತೋ ಗಚ್ಚೇಚ್ಛ್ರೇಜುಷ್ಟುಂ ಲೋಕಪೂಜಿತ್,ಧ ರ್ಮಾರಣ್ಯಂ ಹಿ ತತ್ಪುಣ್ಯಮಾದ್ಯಂ ಚ ಭರತರ್ಷಭ,ಯತ್ರಪ್ರವಿಷ್ಟಮಾತ್ರೋ ವೈ ಸರ್ವಪಾಪೈಃ ಪ್ರಮುಚ್ಯತೇ,
ಕಣ್ವಾಶ್ರಮವು ಅನಾದಿಯಾದುದು, ಕಣ್ವ ಮಹರ್ಷಿಗಳ ಸಂಪರ್ಕದಿಂದ ಆ ಆಶ್ರಮ ವಿರುವ ಅರಣ್ಯವೆಂದೆ ಹೆಸರಾಗಿದೆ, ಕಣ್ವ ಆಶ್ರಮ ದರ್ಶನದಿಂದಲೆ ಮಾನವನು ಸಕಲಪಾಪಗಳಿಂದ ವಿಮುಕ್ತನಾಗುತ್ತಾನೆ ಯೆಂದು ಮಹಾಭಾರತ ವರ್ಣಿಸುತ್ತದೆ.
ಕಣ್ವರ ಶ್ರಮದಲ್ಲಿ ಆಹಾರ ನಿಯಮದಿಂದ ಇದ್ಸು ಜಿತೇಂದ್ರಿಯನಾಗಿ ಪಿತೃಗಳ-ದೇವತೆಗಳ ಅರ್ಚನೆ ಮಾಡುವವರಿಗೆ ಇಷ್ಟಾರ್ಥ ಸಿದ್ದಿಸುವುದು,
ಕಣ್ವ ಆಶ್ರಯ ಸಂದರ್ಶನಮಾತ್ರತದಲ್ಲೆ ಹಲವು ಯಾಗ ಮಾಡಿದ ಫಲ ವಾಗುವುದೆಂದು ಮಹಾಭಾರತ ವನಪರ್ವದಲ್ಲಿ ಉಲ್ಲೇಖ ಇದೆ,ಮಾಹಾತ್ಮರಾದ ಕಣ್ವರು ಯಾಜ್ಞವಲ್ಕ್ಯರ ಪ್ರಥಮ ಶಿಷ್ಯರು, ಭೋದಾಯನರ ತಂದೆಯವರೂ ಆಗಿದ್ದಾರೆ.ವರ್ಷಗಳಕಾಲ ಅಖಂಡ ತಪಾಚರಣೆ ಮಾಡುತ್ತಿದ್ದರು,
ಒಮ್ಮೆ ಪಾಂಡವರು ಒಂದು ನೇರಳೆಹಣ್ಣನ್ನು ತಂದಾಗ ಭಗವಾನ್ ಕೃಷ್ಣನು ಇದು ಮಾಹಾಮಹಿಮರಾದ ಮಹರ್ಷಿ ಕಣ್ವರ ಫಲ ಅವರು ಒಂದು ವರ್ಷಕ್ಕೆ ಒಂದು ಫಲಸ್ವೀಕರಿಸಿ ತಪಸ್ಸನ್ನು ಆಚಾರಿಸುವರೆಂದು ಹೇಳುತ್ತಾನೆ,
ನಮ್ಮ ದೇಶಕ್ಕೆ ಭಾರತ ಎಂದು ಹೇಸರು ಬರಲು ಕಾರಣವಾದ ಭರತ ಕಣ್ವರ ಆಶ್ರಮದಲ್ಲಿ ಜನಿಸಿದ್ದು,ಅವರ ತಪ್ಪಸ್ಸಿನ ಪ್ರಭಾವ ಅಲ್ಲಿ ಸಮಸ್ತ ಅರಣ್ಯಕ್ಕೆ ವ್ಯಪಿಸಿತ್ತು, ಪರಸ್ಪರ ವಿರೋದ ವಿರುವ ಪ್ರಾಣಿಗಳು ಅಲ್ಲಿ ಸ್ನೇಹ ದಿಂದ ಇರುತ್ತಿದ್ದವು,
ಕಣ್ವರ ಆಶ್ರಮ ಗಳು ಭಾರತದ ದಾದ್ಯಂತ ಇವೆ ಕರ್ನಾಟಕದ ಸೊಗಲ, ಕಣ್ಣಕುಪ್ಪೆ, ಶಿವಗಂಗೆ, ಅಬ್ಬುರು, ದೊಡ್ಡಮಳುರು, ಕುಡಲುರು, ಕಣ್ಣುರು ಮತ್ತು ತೆಲೆಂಗಾಣದ ಬಿಚುಪಲ್ಲಿ, ಆಂದ್ರಪ್ರದೇಶದ ಕೊನಮಲ್ಲೆಶ್ವೆ, ಮದನಪಲ್ಲಿ, ಪಂಚಕೋನ
ಕೆರಳದ ಕಣ್ವತೀರ್ಥ, ವರ್ಕಲ,ಮಹಾರಾಷ್ಟ್ರದ ನಾಸಿಕ, ಕನಳಾದ ಟಿಟವಾಳ,ಉತ್ತರಖಂಡದ ಮಾಲಿನಿದಿ ತಟದಲ್ಲಿರುವ ಕಣ್ವ ಘಾಟದಲ್ಲಿ ಸೆರಿದಂತೆ ಭಾರತದ ಮುಲೆಮುಲೆ ಯಲ್ಲಿ ಇದೆ.
೪ ವೇದಗಳಲ್ಲಿ ಸಹಸ್ರಾರು ಶಾಖೆ ಗಳಿದ್ದರು ಲಕ್ಷಾಂತರ ವರ್ಷಗಳನಂತರ ಉಳಿದ ಕೇಲವೆ ಶಾಖೆಗಳಲ್ಲಿ ನಮ್ಮದು ಒಂದು ಅದಕ್ಕೆ ಶ್ರೀ ಯಾಜ್ಞವಲ್ಕ್ಯ ರ ಹಾಗು ಶ್ರೀ ಕಣ್ವರ ತಪ್ಪಸ್ಸಿನ ಫಲವೆ ಕಾರಣ,ಯಲ್ಲ ಶಾಖಿಯರು ತಮ್ಮ ಶಾಖೆ ಸೂತ್ರಕಾರರ ವೇದಗಳ ಮಾಹಿತಿ ಮರೆತಾಗಲು ಕಣ್ವರು ಲಕ್ಷೋಪಲಕ್ಷ ವರ್ಷಗಳಕಾಲ ಸತ್ ಸಂಪ್ರದಾಯ ಉಳಿಸಿಕೊಂಡ ಹೆಮ್ಮೆ ಕಣ್ವರದು ಕಾರಣ ಗರ್ವದಿಂದ ಹೇಳಿ ನಾವುಕಣ್ವರು.
ಕಣ್ವರು ತಪ್ಪಸ್ಸು ;ಒಮ್ಮೆ ಕಣ್ವ ಮಹರ್ಷಿಗಳು ಆಳವಾದ ತಪ್ಪಸ್ಸು ಮಾಡುವಾಗ ಅವರಮೆಲೆ ವಾಲ್ಮೀಕ ಬೇಳೆದು ಕಣ್ವರ ಶಿರದಲ್ಲಿ ಬೇಳೆದ ಬಿದಿರನ್ನು ನೊಡಿ ಅದನ್ನು ವಿಶ್ವಕರ್ಮನಿಗೆ ಕೊಟ್ಟು ಪಿನಾಕ, ಶಾರ್ಜ್ಗಿ ಮತ್ತು ಗಾಂಢೀವ ಎಂಬ ಅಪರೂಪದ ೩ ಬಿಲ್ಲುಗಳನ್ನು ಮಾಡಿದನು ಬಳಿಕ ಬ್ರಹ್ಮನು ಅವುಗಳನ್ನು ಶಿವನಿಗೆ ಕೊಟ್ಟನು ಶಿವನು ಶ್ರೀ ಕೃಷ್ಣನ ತಪಸ್ಸಿಗೆ ಮೆಚ್ಚಿ ಶಾರ್ಜ್ಗವನ್ನುಬಕೃಷ್ಣನಿಗೆ ಘಾಂಡಿವ ವನ್ನು ಅರ್ಜುನನಿಗೆ ಕೊಟ್ಟು ೭ ಹೆಡೆಗಳ್ಳುಳ್ಳ ಆಕಾರದ ಸಕಲ ಜೀವರಾಶಿಗಳನ್ನು ರಕ್ಷಿಸುವ ಪಿನಾಕ ವನ್ನು ತಾನೆ ಧರಿಸಿ ಪಿನಾಕಿ ಎಂದು ಕರೆಸಿಕೊಂಡನು.
ಕಣ್ವರ ಮಹಿಮೆಯು ಸ್ಕಂದ ; ಶೈವ,ಕೂರ್ಮ,ಆದಿತ್ಯ,ಭವಿಷ್ಯೊತ್ತರ,ಮಾಹಾಭಾರತ ಹೀಗೆ ವೇದವ್ಯಾಸರನ್ನು ಹೊರತು ಪಡಿಸಿದರೆ ಅತೀಹೆಚ್ಚು ಪುರಾಣಗಳಲ್ಲಿ ಇರುವವರು ಶ್ರೀ ಯಾಜ್ಞವಲ್ಕ್ಯರು ಮತ್ತು ಕಣ್ವರು ಮಾತ್ರ,
ಅಂಗೀಅರಸ ಗಣದಲ್ಲಿ ಕಣ್ವ ಗೋತ್ರಕ್ಕೆ ಮೂಲ ಪುರುಷ ಕಣ್ವ ಮಹರ್ಷಿಗಳು.ತೆಲಗು ಭಾಷೆಗೆ ವ್ಯಕರಣ ಕೊಟ್ಟವರು ಕಣ್ವರುಬ ಹಳಷ್ಟು ಬ್ರಾಹ್ಮಣರು ಶಾಖಾ/ ವೇದ ಬ್ರಷ್ಟರಾಗಿರಲು ನಾವು ಇನ್ನು ವೇದ ಶಾಖೆ ಸೂತ್ರಕಾರನ್ನು ಗೌರವಿಸುವ ಹೆಮ್ಮೆ ಇಂದ ಹೇಳುವ ಸಂಪ್ರದಾಯ ಉಳಿಸಿದ್ದಕ್ಕಾಗಿ ಮಹರ್ಷಿಗಳಿಗೆ, ಹೀರಿಯರಿಗೆ ಋಣಿಗಳಾಗಬೇಕಾಗಿದೆ.
ಯಾವುದೆ ಸನಾತನ( ಹಳೆಯದೊ) ಯಾವುದು ಅವಿಚ್ಚಿನ್ನ( ನಿರಂತರ ) ವಾಗಿರುವುದೊ ಅದೇ ಶ್ರೇಷ್ಠ ಎಂಬ ಹಿದೂತ್ವದ ನಂಬಿಕೆ ಯಂತೆ, ಸನಾತನ ಪರಂಪರೆ ಸನಾತನ ಮಹರ್ಷಿಗಳನ್ನ ವೇಧ ಶಾಖಾ ಪರಂಪರೆ ಉಳಿಸಿ ಗೌರವಿಸುವ ಹೊಣೆ ಪ್ರತಿ ಧರ್ಮಾಭಿಮಾನಿಗಳಮೆಲೆ ಇದೆ.
ಮಾಹಾಭಾರತದ ಕಾಲಘಟ್ಟದಲ್ಲಿ ಭಗವಾನ ಕೃಷ್ಣ ಇವರನ್ನು ಅತ್ಯಂತ ಗೌರವ ನೊಡಿದ್ದಾನೆ, ಇಂದಿಗೂ ಭಾರತದಾದ್ಯಂತ ಕಣ್ವ ಶಾಖಿಯರು ಕಣ್ವ ಮಹರ್ಷಿ ಭಕ್ತರು ಅಪಾರ ಸಂಖ್ಯಯಲ್ಲಿ ಇದ್ದು ಶುಕ್ಲ ಯಜುರ್ವೇದ ಪಾಠಶಾಲೆಗಳು ಇವೆ.