
ಭವ್ಯ ಭಾರತದ ಭವಿಷ್ಯಕ್ಕೆ ರಾಜಶೇಖರ ಹಿಟ್ನಾಳ್ ಬೆಂಬಲಿಸಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 20- ತಾಲೂಕು ಅರಳಿಗನೂರು ಗ್ರಾಮದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣಾ ಪ್ರಚಾರ ಕಾಂಗ್ರೆಸ್ ಅಭ್ಯರ್ಥಿ ಕೆ ರಾಜಶೇಖರ ಹಿಟ್ನಾಳ್ ಅವರ ಪರವಾಗಿ ಮತದಾರರಲ್ಲಿ ಶಾಸಕ ಬಿ ಎಂ ನಾಗರಾಜ ಅವರು ಮತ ಯಾಚಿಸಿದರು.
ಭವ್ಯ ಭಾರತ ಭವಿಷ್ಯಕ್ಕೆ ಕಾಂಗ್ರೆಸ್ ಗೆ ಬೆಂಬಲಿಸುವ ಮೂಲಕ ಲಕ್ಷಾಂತರ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಅವರು ಮತದಾರರಲ್ಲಿ ಮನವಿ ಮಾಡಿದರು ಕಾಂಗ್ರೆಸ್ ದೇಶದಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಜನಪರ ಯೋಜನೆ ಐದು ಗ್ಯಾರಂಟಿ ಕಾರ್ಯಕ್ರಮದಂತೆ ರಾಷ್ಟ್ರ ಮಟ್ಟದಲ್ಲಿಯೂ ಬಡಜನರ ಬದುಕು ಹಸನ ಗೊಳ್ಳುವಂತೆ ಮಾಡಲು ಮತ್ತು ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಕಾಂಗ್ರೆಸ್ ಪರವಾಗಿ ಕೆಲಸ ಮಾಡುವಂತೆ ಮತ್ತು ಕಾಂಗ್ರೆಸ್ ಗೆ ಶಕ್ತಿ ತುಂಬುವ ಕೆಲಸ ತಾವೆಲ್ಲ ಮಾಡುತ್ತಿದ್ದೀರಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಆರ್ಥಿಕವಾಗಿ ಸದೃಢವಾಗಬೇಕು ಎಂಬ ಕಾಂಗ್ರೆಸ್ಸಿನ ಉದ್ದೇಶ ಇಡೀ ದೇಶದ ಬಡತನ ನಿರ್ಮೂಲನೆಗಾಗಿ ಕಾಂಗ್ರೆಸ್ ಶ್ರಮಿಸುತ್ತಿದೆ ದೇಶದ ಅಭಿವೃದ್ಧಿ ಕೇವಲ ಒಬ್ಬ ವ್ಯಕ್ತಿಯಿಂದ ಮಾತ್ರ ಸಾಧ್ಯವಿಲ್ಲ ತಾವೆಲ್ಲರೂ ಕೈಜೋಡಿಸಿದಾಗ ಮಾತ್ರ ಯೋಜನೆ ಸಹಕಾರ ಗೊಳ್ಳಲಿದೆ ಜನಪರವಾಗಿರುವ ಕಾಂಗ್ರೆಸ್ ಈ ಬಾರಿ ರಾಜ್ಯದಲ್ಲಿ ಮತ್ತು ದೇಶದಲ್ಲಿ ಹೆಚ್ಚಿನ ಸ್ಥಾನ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿ ಮಾತನಾಡುತ್ತಿದ್ದರು.
ಚುನಾವಣೆ ಪ್ರಚಾರ ಕಾರ್ಯದಲ್ಲಿ ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಚೂಕ್ಕಬಸವನ ಗೌಡ, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕಾಂಗ್ರೆಸ್ ಮುಖಂಡರು, ತೆಕ್ಕಲಕೋಟೆ ಮಲ್ಲಿಕಾರ್ಜುನ ಬಾಲಪ್ಪ ಜಮೀನ್ದಾರ್, ಸೈಯದ್ ಮೋಹಿದ್ದೀನ್ ಖಾದ್ರಿ, ಗೊರವರ ಕೊಡ್ಲೆ ಮಲ್ಲಿಕಾರ್ಜುನ, ಶ್ರೀನಿವಾಸ್, ಮರಿ ರಾಜೇಗೌಡ, ಶ್ರೀನಿವಾಸ, ಸಿರುಗುಪ್ಪ ನಗರ ಸಭಾ ಸದಸ್ಯರಾದ ಕಾಯಿಪಲ್ಲೆ ಆರ್ ನಾಗರಾಜ, ಬಿ ವೆಂಕಟೇಶ್, ಹೆಚ್ ಗಣೇಶ್, ಬಿ ಎಂ ಅಪ್ಪಾಜಿ ನಾಯಕ, ಕೋಟಿ ರೆಡ್ಡಿ, ಪವನ್ ಕುಮಾರ್, ಪ್ರಮುಖ ಮುಖಂಡರು ವೆಂಕೋಬ ಮೂಕಪ್ಪ, ವೀರಭದ್ರಗೌಡ, ಮಲ್ಲಿಕಾರ್ಜುನ ಗೌಡ, ಶಿವನಗೌಡ, ಧರ್ಮನ ಗೌಡ, ವಿ ಎನ್ ಮಾರೇಶ, ಅರಳಿಗನೂರು ಗ್ರಾಮದ ಅನೇಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡು ಕೊಪ್ಪಳ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರ ಪರವಾಗಿ ಮನೆ ಮನೆ ತೆರಳಿ ಮತ ಯಾಚಿಸಿ ಅವರನ್ನು ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಮತದಾರರಲ್ಲಿ ಮತ ಯಾಚಿಸುತ್ತಿದ್ದರು.