
ಭಾರತ ಅದ್ಭುತಗಳನ್ನು ನಿರಂತರ ಸಾಧಿಸುತ್ತದೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,25- ಪ್ರಾಚೀನದಿಂದಲೂ ಭಾರತೀಯರು ಅದ್ಭುತಗಳನ್ನು ಸಾಧಿಸುತ್ತಾ ಬಂದಿದ್ದಾರೆ ಎಂದು ಡಾಕ್ಟರ್ ಅಮರನಾಥ್ ಮುನಿಯಪ್ಪ ಹೇಳಿದರು.
ಅವರು ನಗರದ ಆರ್ ವೈ ಎಂ ಈಸಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಆನ್ ಅಡ್ವಾನ್ಸಸ್ ಇನ್ ಮೆಕಾನಿಕಲ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಅನುವಂಶಿಕ ಜೀನ್ಸ್ ನಲ್ಲಿ ನವೀನ್ ನತೆ ಉತ್ತಮ ಕೆಲಸಗಳನ್ನು ಮಾಡುವ ಕೌಶಲ್ಯಗಳು ಅಡಗಿವೆ ಎಂದರು.
ಮೆಕಾನಿಕಲ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶಗಳಿವೆ ಅಲ್ಲದೆ ತಂತ್ರಜ್ಞಾನದ ಭವಿಷ್ಯ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸಿ ಅಳವಡಿಕೆಯಾಗುತ್ತದೆ ಎಂದರು. ಇದರಿಂದ ಡಿಸಿಷನ್ ಮೇಕಿಂಗ್ ಸಂಕೀರ್ಣ ಪ್ರಕ್ರಿಯೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಸುಲಭವಾಗುತ್ತದೆ ಎಂದರು.
ಮಹಾವಿದ್ಯಾಲಯದ ಅಧ್ಯಕ್ಷ ಅಲ್ಲಂ ಚನ್ನಪ್ಪ, ಮೆಕಾನಿಕಲ್ ವಿಭಾಗದ ಮುಖ್ಯಸ್ಥ ಡಾಕ್ಟರ್ ಕೋರಿ ನಾಗರಾಜ್, ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥ ಡಾಕ್ಟರ್ ತಿಮ್ಮನಗೌಡ, ಈ ಕಾನ್ಫರೆನ್ಸ್ ನ ಸಂಯೋಜಕ ಸಿಬ್ಬಂದಿ ಡಾಕ್ಟರ್ ಕೊಂಡೆಕಲ್ ಮಂಜುನಾಥ ಡಾಕ್ಟರ್ ಸೋಮನಾಥ ಸ್ವಾಮಿ ಡಾಕ್ಟರ್ ವಿರುಪಾಕ್ಷಗೌಡ, ವಿಎಂಆರ್ ಹಿರೇಮಠ್ ಡಾಕ್ಟರ್ ತೋಟಪ್ಪ ಚಿತ್ರಕಿ, ಡಾಕ್ಟರ ಹಿರೇಗೌಡರ ಎರ್ರನಗೌಡರು, ಡಾಕ್ಟರ್ ಚೇತನ್ ಡಾಕ್ಟರ್ ದೊಡ್ಡ ಬಸನಗೌಡ ಡಾಕ್ಟರ್ ಕೊಟ್ಟರೆ ಎಸ್ ಉಮಾದೇವಿ ಪ್ರವೀಣ್ ಜೋಶಿ ಗಿಡಿಯಂಜಿ ಇನ್ನಿತರರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.