WhatsApp Image 2024-03-25 at 12.50.11 PM (1)

ಭೋವಿ ಸಮಾಜದ ರಾಜ್ಯ ಯುವ ಘಟಕ ಕಾರ್ಯದರ್ಶಿಯಾಗಿ ರಾಮು ಪೂಜಾರ ಆಯ್ಕೆ

ಕರುನಾಡ ಬೆಳಗು ಸುದ್ದಿ
ಕೊಪ್ಪಳ,25- ಕರ್ನಾಟಕ ರಾಜ್ಯ ಭೋವಿ ಮಹಾಸಭೆ  ರಾಜ್ಯ ಯುವ ಘಟಕ ಕಾರ್ಯದರ್ಶಿಯಾಗಿ ಕೊಪ್ಪಳ ನಗರದ ರಾಮು ಪೂಜಾರ ಅವರನ್ನು  ನೇಮಕ ಮಾಡಲಾಗಿದೆ.
ಇವರು ಸುಮಾರು ವರ್ಷಗಳಿಂದ ಸಮಾಜದ ಸಂಘಟನೆ, ಸಮಾಜ ಸೇವೆ ಹಾಗೂ ಅಭಿನವ ನ್ಯೂ ಡ್ಯಾನ್ಸ್ ಅಕಾಡೆಮಿ. ಸಂಸ್ಥೆಯ ನೃತ್ಯ ಸಂಯೋಜಕರಾಗಿ ಕಾರ್ಯ ನಿರವಹಿಸುತಿದ್ದು ಇವರಿಗೆ ರಾಜ್ಯ ಪ್ರಶಸ್ತಿ ಜೊತೆಗೆ ಹಲವು ಪ್ರಶಸ್ತಿಗಳು ಲಭಿಸಿವೆ.
  ರಾಮು ಪೂಜಾರ ಅವರನ್ನು   ಕರ್ನಾಟಕ ರಾಜ್ಯ ಭೋವಿ  ಮಹಾಸಭೆಗೆ ನೇಮಕ ಮಾಡಿ  ಸಂಸ್ಥಾಪಕರಾದ ಆರ್.ಮುನಿರಾಜ ಮತ್ತು ಯುವ ಘಟಕ ರಾಜ್ಯಧ್ಯಕ್ಷರಾದ ವೈ ಶಂಕರ.ಯ ನೇಮಕ ಮಾಡಿದ ಆದೇಶ ಪತ್ರ ನೀಡಿದ್ದಾರೆ.
ರಾಮು ಪೂಜಾರ ಕೊಪ್ಪಳ ನಗರದ ಭೋವಿ ಸಮಾಜದ ಸಂಘಟನೆಯಲ್ಲಿ, ಕಲ್ಯಾಣ ಕರ್ನಾಟಕ ಮಾಧ್ಯಮ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದು ರಾಜ್ಯ ಸಮಾಜದ ಸಂಘಟನೆಗಾಗಿ  ರಾಜ್ಯದ ಯುವ ಘಟಕ ಕಾರ್ಯಗಳನ್ನು ಸುಸಂಬದ್ಧವಾಗಿ ಭೋವಿ ಸಮಾಜಕ್ಕೆ ಶ್ರಮಿಸಿದ ಇವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!