
ಮಂಗಳೂರು ಗ್ರಾಮಕ್ಕೆ ಬೈಪಾಸ್ ರಸ್ತೆ
ಕರುನಾಡ ಬೆಳಗು ಸುದ್ದಿ
ಕುಕನೂರು,೧೪- ತಾಲ್ಲೂಕಿನ ಮಂಗಳೂರು ಗ್ರಾಮದ ಜನರ ಬಹುದಿನದ ಬೇಡಿಕೆಯಾಗಿರುವ ಗ್ರಾಮಕ್ಕೆ ಬೈಪಾಸ್ ರಸ್ತೆ ಮಂಜೂರಾಗಿದೆ.
ರಸ್ತೆ ನಿರ್ಮಾಣ ಮಾಡಲು ಅಗತ್ಯವಿರುವ ಭೂಮಿಯ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಗೆ ರಾಜ್ಯ ಸರ್ಕಾರ ₹3.80 ಕೋಟಿ ಹಣ ಸಹ ಮಂಜೂರು ಮಾಡಿ ಆದೇಶ ಸರ್ಹೊಕಾರ ಆದೇಶ ಹೊರಡಿಸಿದೆ. ಭೂ ಸ್ವಾಧೀನ ಪರಿಹಾರ ನೀಡಲು ಅನುದಾನ ನೀಡುವಂತೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಕೋರಿದ್ದ ಹಿನ್ನಲೆಯಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಣ ಬಿಡುಗಡೆಗೊಳಿಸಿದ್ದಾರೆ.
ಸರ್ಕಾರ ಭೂ ಸ್ವಾಧೀನದ ಪರಿಹಾರಧನ ಪಾವತಿ ಹಾಗೂ ನ್ಯಾಯಾಲಯ ಪ್ರಕರಣಗಳ ಪಾವತಿಗೆ ಸಂಬಂಧಿಸಿದ ಬಿಲ್ಲುಗಳನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಆದ್ಯತೆ ಮೇರೆಗೆ ಪಾವತಿ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಿದ್ದಾರೆ.