
ಮಮತೆ ತೊಟ್ಟಿಲು ಸದುಪಯೋಗಪಡಿಸಿಕೊಳ್ಳಿ : ನ್ಯಾ. ಸದಾನಂದ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 4- ಮಕ್ಕಳನ್ನು ಎಲ್ಲಂದರಲ್ಲಿ ಬಿಸಾಡಬೇಡಿ-ಸಂರಕ್ಷಣೆಗೆ-ಕೈಜೋಡಿಸಿ ಎಂದು ಒಂದನೇ ಹೆಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರಾದ ಸದಾನಂದ ನಾಗಪ್ಪ ನಾಯ್ಕ ಹೇಳಿದರು.
ಅವರು -ನಗರದ ಬಸ್ ನಿಲ್ದಾಣ ಆವರಣದಲ್ಲಿ ತಾಲೂಕ ಕಾನೂನು ಸೇವಾ ಸಮಿತಿ,ವಕೀಲರ ಸಂಘ,ಜಿಲ್ಲಾ ಮಕ್ಕಳ ಆರೋಗ್ಯ ರಕ್ಷಣಾ ಘಟಕ,ಸಮಾಜ ಕಲ್ಯಾಣ,ಶಿಶು ಅಭಿವೃದ್ದಿ ಇಲಾಖೆ,ತಾಲೂಕ ಪಂಚಾಯತ,ನಗರಸಭೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಮತೆ ತೊಟ್ಟಿಲು ಕಾರ್ಯಕ್ರಮ ಉದ್ಘಾಟಸಿ
ಮಾತನಾಡಿ ಭಗವದ ಗೀತೆ,ಗರುಡ ಪುರಾಣದಲ್ಲಿ ತಿಳಿಸಿದಂತೆ ಮಾನವ ಜನ್ಮ ಶ್ರೇಷ್ಠವಾಗಿದ್ದು. ಪ್ರತಿಯೋಬ್ಬರಿಗೂ ಜೀವಿಸುವ ಹಕ್ಕು ಇರುತ್ತದೆ.
ಮಕ್ಕಳ ಪೋಷಣೆ ಮತ್ತು ರಕ್ಷಣೆ ಮಾಡುವುದಕ್ಕಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ,ಬಾಲಕರ ಬಾಲ ಮಂದಿರ,ಬಾಲಕೀಯರ ಬಾಲ ಮಂದಿರ ಎಲ್ಲಾ ಇಲಾಖೆಗಳಿಂದಲೂ ಮಕ್ಕಳರಕ್ಷಣೆಗೆ ಆದ್ಯತೆ ಮಾಡಲಾಗುವುದು ಎಂದರು.
ಹಿರಿಯ ಸಿವಿಲ್ ನ್ಯಾಯಾಧಿಶ ರಮೇಶ ಗಾಣಿಗೇರ,ಪ್ರಧಾನ ಸಿವಿಲ್ ನ್ಯಾಯಾಧಿಶೆ ಶ್ರೀಮತಿ ಶ್ರೀದೇವಿ ದರಬಾರೆ,ಹೆಚ್ಚುವರಿ ಸಿವಿಲ್ ನ್ಯಾಯಾಧಿಶ ನಾಗೇಶ ಪಾಟೀಲ,ಪೋಲಿಸ ಉಪವಿಭಾಗಧಿಕಾರಿ ಸಿದ್ದಲಿಂಗಪ್ಪ ಗೌಡ ಪಾಟೀಲ,ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಮುಸಾಲಿ ಮಾತನಾಡಿ ಚಿಕ್ಕ ಮಕ್ಕಳಗಳನ್ನು ಮುಳ್ಳಿನ ಕಂಟೆಯಲ್ಲಿ ಎಲ್ಲಾ ಅನಾಥಸ್ಥಳಗಳಲ್ಲಿಬಿಸಾಡಬೇಡಿ ಸರಕಾರ ಯೋಜನೆಯಾದ ಮಮತೆ ತೊಟ್ಟಿಲು ಕಾರ್ಯಕ್ರಮ ಮಾಡಿರುವುದು ಮಕ್ಕಳನ್ನು ಇದರಲ್ಲಿ ಹಾಕಿ ಸಂರಕ್ಷಣೆಗೆ ಮುಂದಾಗಿ ಎಂದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ಪ್ರವಿಣ ಹೇರೂರ,ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಮಮತೆ ತೊಟ್ಟಿಲು ಬಗ್ಗೆ ವಿವರಿಸಿದರು.
ಹೆಚ್.ಎನ್ ಕುಂಬಾರ ವಕೀಲ,ಟಿಬಿ ಕೋಲ್ಕಾರ ವಕೀಲ ಮಮತೆ ತೊಟ್ಟಿಲು ದಾನ ನೀಡಿದರು.
ಈ ಸಂದರ್ಭದಲ್ಲಿ ಗ್ರೇಡ-2 ತಹಶೀಲ್ದಾರ ಮಹಾಂತಗೌಡ,ತಾಲೂಕ ಆರೋಗ್ಯ ಅಧಿಕಾರಿ ಡಾ.ಗೌರಿಶಂಕರ ಚಿತ್ರಕಿ, ಕ್ಷೇತ್ರ ಶಿಕ್ಷಣ ಇಲಾಖೆಯ ರಾಘವೇಂದ್ರ, ವಕೀಲರ ಸಂಘದ ಕಾರ್ಯದರ್ಶಿ ಹೆಚ್.ಎಂ.ಮಂಜುನಾಥ, ಎಸ್.ಎನ್.ನಾಯಕ ವಕೀಲ, ಕೆಎಸ್.ಆರ್.ಟಿಸಿಯ ಶಿವನಗೌಡ ಮುಂತಾದವರು ಉಪಸ್ಥಿತರಿದ್ದರು.