
ಮಕ್ಕಳ ಸಾಹಿತ್ಯ ಸಂಭ್ರಮ ಮೂರು ದಿನಗಳ ಕಾಲ ಮಕ್ಕಳ ಸಂಭ್ರಮಾಚರಣೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,25- ಪ್ರತಿ ಮಕ್ಕಳಲ್ಲಿರುವ ಸೃಜನಾತ್ಮಕ ಚಟುವಟಿಕೆಗಳನ್ನು ಗುರುತಿಸಲು ಮಕ್ಕಳ ಸಾಹಿತ್ಯ ಸಂಭ್ರಮ ಅವಶ್ಯಕವೆಂದು ತಹಶೀಲ್ದಾರ್ ಬಸವರಾಜ ತೆನ್ನಳ್ಳಿ ಅವರು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಇಲಾಖೆ, ಜಿಪಂ, ತಾಪಂ, ಶಾಲಾ ಶಿಕ್ಷಣ ಇಲಾಖೆ, ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಹಯೋಗದಲ್ಲಿ ತಾಲೂಕಾ ಮಟ್ಟದ ಮುಧೋಳ, ಹಿರೇಮ್ಯಾಗೇರಿ, ಕರಮುಡಿ, ಸಂಕನೂರು ಗ್ರಾಪಂಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಮುಧೋಳ ಗ್ರಾಮದ ಶತಮಾನೋತ್ಸವ ಶಾಲಾ ಅವರಣದಲ್ಲಿ ನಡೆದ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಜೀವನದಲ್ಲಿ ಸಾಧಿಸುವ ಗುರಿ ಮುಖ್ಯ. ಓದುವ ವಿಷಯಗಳ ಅಂಶಗಳನ್ನು ವಿದ್ಯಾರ್ಥಿಗಳು ಗ್ರಹಿಸುವಂತಾಗಬೇಕು. ವಿದ್ಯಾರ್ಥಿಗಳಲ್ಲಿ ಸ್ಪರ್ಧೆ ಮುಖ್ಯವಲ್ಲ. ಬದಲಾಗಿ ಅವರು ನೀಡುವ ಪ್ರತಿಭಾ ಪ್ರದರ್ಶನವೇ ಮುಖ್ಯ ಮಕ್ಕಳಲ್ಲಿ ಸ್ವಚ್ಚ ಮನಸ್ಸಿದೆ. ಈ ವೇದಿಕೆಗಳ ಮೂಲಕ ತಮ್ಮ ಕಲೆ, ಸಾಹಿತ್ಯ ಸೇರಿದಂತೆ ಇನ್ನಿತರ ಚಟುವಟಿಕೆಗಳ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸುವಂತೆ ತಿಳಿಸಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಫ್.ಎಂ.ಕಳ್ಳಿ ಮಾತನಾಡಿ, ವಿದ್ಯಾರ್ಥಿಗಳು, ಯುವ ಜನರಲ್ಲಿ ಸಾಹಿತ್ಯದ ಆಸಕ್ತಿ ಕಡಿಮೆಯಾಗುತ್ತಿದೆ. ಪುಸ್ತಕ ಓದುವ ಹವ್ಯಾಸ ಕ್ಷೀಣಿಸುತ್ತಿದೆ. ಇಂಥ ಸಂದರ್ಭದಲ್ಲಿ ಇಲಾಖೆ ಮಕ್ಕಳ ಸಾಹಿತ್ಯ ಸಂಭ್ರಮ ಜಾರಿಗೆ ತರುವ ಮೂಲಕ ಅವರಲ್ಲಿ ಅಡಗಿರುವ ಎಲ್ಲಾ ಪ್ರತಿಭೆಗಳನ್ನು ಇಂಥ ವೇದಿಕೆಗಳ ಮೂಲಕ ತೋರಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ ಎಂದರು.
ತಾಪಂ ಇಓ ಸಂತೋಷ ಪಾಟೀಲ್, ತಾಪಂ ಸಹಾಯಕ ನಿರ್ದೇಶಕರು, ಸಂಕನೂರು ಪಿಡಿಓ ಫಕ್ಕೀರಪ್ಪ ಕಟ್ಟಿಮನಿ ಭಾರತ ಜ್ಞಾನ ವಿಜ್ಞಾನ ಸಮಿತಿಯ ವೈ.ಬಿ.ಮೇಟಿ, ಸಿಆಕ್ಷೆ ಶಾಂತಪ್ಪ ಜುಮ್ಮನವರ್, ಖಾದರಭಾಷ, ಬಾದಶಾಹ ಮತ್ತು ಇತರರು ಕಾರ್ಯಕ್ರಮ ಕುರಿತು ಮಾತನಾಡಿದರು.
ಮಕ್ಕಳು ತಮ್ಮ ತಮ್ಮ ಕಲೆಗಳನ್ನು ಪ್ರದರ್ಶಿಸಿದರು. ಗಂಗಮ್ಮ, ಶ್ಯಾಮೀದಸಾಬ ಮುಲ್ಲಾ, ಗ್ರಾಮ ಪಂಚಾಯಿತಿ ಪಿಡಿಓಗಳಾದ ಬಸವರಾಜ ಕಿಳ್ಳಿಕ್ಯಾತರ, ವೀರಭದ್ರಪ್ಪ ಮೂಲಿಮನಿ, ರತ್ನಮ್ಮ ಗುಂಡನವರ್, ಗ್ರಾಪಂ ಅಧ್ಯಕ್ಷರು ಮಮತಾಜಾ ಬೇಗಂ ಹಿರೇಮನಿ, ಕಲ್ಲಿನಾಥ ಲಿಂಗನ್ನವರ್, ನಾಗಮ್ಮ ತಳವಾರ, ಕಳಕಪ್ಪ ವೀರಾಪೂರು ಹಾಗೂ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಕೆ ಎಚ್ ಪಿ ಟಿ ಸದಸ್ಯರು, ಸೇರಿದಂತೆ ಶಿಕ್ಷಕ ವರ್ಗ, ಗ್ರಾ.ಪಂ.ಸಿಬ್ಬಂದಿಗಳು ಮತ್ತು ಇತರರು ಭಾಗವಹಿಸಿದ್ದರು