
ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಸಿ – ಶಂಕ್ರಯ್ಯ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೦೯- ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಸಬೇಕು, ನಮ್ಮ ಕರ್ತವ್ಯಗಳನ್ನು ಅರಿತು ಪಾಠ ಬೋಧನೆ ಮಾಡಬೇಕು ಮಕ್ಕಳ ಅಚ್ಚು ಮೆಚ್ಚಿನ ಶಿಕ್ಷಕರಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಯ್ಯ ಟಿ ಎಸ್ ಹೇಳಿದರು.
ಅವರು ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ 2022-2023 ನೇ ಸಾಲಿನಲ್ಲಿ ನೇಮಕಗೊಂಡ ನೂತನ ಶಿಕ್ಷಕರಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಗಾರದಲ್ಲಿ ಮಾತನಾಡಿದರು.
ಶಿಕ್ಷಕರು ಪಾಠದ ಜೋತೆಗೆ ಜೊತೆಗೆ ಇಲಾಖೆಯ ಕರ್ತವ್ಯಗಳು ಹಾಗೂ ಆಡಳಿತಾತ್ಮಕ ವಿಷಯವನ್ನು ಕುರಿತ ಸವಿಸ್ತಾರವಾಗಿ ನೂತನ ಶಿಕ್ಷಕರಿಗೆ ತಿಳಿಸಿದರು ,ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಾರುತಿ ಮ್ಯಾಗಳಮನಿ ಮಾತನಾಡಿ ಶೈಕ್ಷಣಿಕ ಕಾರ್ಯಗಾರ ಹಮ್ಮಿಕೊಂಡಿರುವುದು ನಮ್ಮೆಲ್ಲರಿಗೂ ಹೆಮ್ಮೆ ವಿಷಯ ಕಾರ್ಯ ಕ್ಷಮತೆ,ಕಾರ್ಯವೈಕರಿ ಅರಿತುಕೊಳ್ಳುವುದು ಮಹತ್ವವಾಗಿದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಪ್ರಕಾಶ್ ತಗಡಿಮನಿ, ಕಚೇರಿಯ ಸಿಬ್ಬಂದಿ ಮಿನಾಜುದ್ದೀನ್,ಪದವೀಧರ ಶಿಕ್ಷಕರ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷರು ಹಾಗೂ ಕೊಪ್ಪಳ ತಾಲೂಕ ಅಧ್ಯಕ್ಷ ಶ್ರೀಕಾಂತ ಮಟ್ಟಿ, ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ಹೋಳಿ ಬಸಯ್ಯ, ಪ್ರಧಾನ ಕಾರ್ಯದರ್ಶಿ ಬಾಳಪ್ಪ ಕಾಳೆ, ನೌಕರರ ಸಂಘದ ಕಾರ್ಯಧ್ಯಕ್ಷ ಶಿವಪ್ಪ ಜೋಗಿ,ಪದವೀಧರ ಶಿಕ್ಷಕರ ಸಂಘದ ತಾಲೂಕ ಪ್ರಧಾನ ಕಾರ್ಯದರ್ಶಿ ರಮೇಶ್ ಹಳ್ಳಿ ಉಪಾಧ್ಯಕ್ಷ ಮಂಜಪ್ಪ ಕೇಸಲಾಪುರ, ಬಸವರಾಜ ಕೋಮಲಾಪುರ,ನಫೀಜ್ ಕಾನ್ ಪಠಾಣ್ ಹಾಗೂ ನೂತನವಾಗಿ ನೇಮಗೊಂಡ ಶಿಕ್ಷಕರಿದ್ದರು ಎಂದು ಮಾರುತಿ ಮ್ಯಾಗಳಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.