
ಮಗು ಕಾಣೆ : ಪತ್ತೆಗೆ ಸಹಕರಿಸಲು ಮನವಿ
ಕರುನಾಡ ಬೆಳಗು ಸುದ್ದಿ
ವಿಜಯನಗರ,26- ಹೊಸಪೇಟೆಯ ಜಂಡಾಕಟ್ಟಿ ಹತ್ತಿರದ ರಾಣಿಪೇಟೆ 1ನೇ ಕ್ರಾಸ್ನ ನಿವಾಸಿ ಅರವಿಂದ ಪಾಲ್ ಅವರ ಪುತ್ರ ಆಶೀಶ್ ಅರವಿಂದ್ ಪಾಲ್ ಎಂಬ ಮಗು ಕಾಣೆಯಾದ ಬಗ್ಗೆ ಹೊಸಪೇಟೆ ರೈಲ್ವೆ ಪೊಲೀಸ್ ಠಾಣೆಯಲ್ಲಿ (ಗುನ್ನೆ ನಂ:48/2024 ಕಲಂ: 363 ಐ.ಪಿ.ಸಿ ಅಡಿ) ಪ್ರಕರಣ ದಾಖಲಾಗಿದೆ.
ಚಹರೆ: ಕಾಣೆಯಾದ ಮಗು 14 ವರ್ಷದವನಾಗಿದ್ದು, 8ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. 4.8 ಅಡಿ ಎತ್ತರ, ಸಾಧಾರಣ ಮೈ ಕಟ್ಟು, ಕೋಲು ಮುಖ, ಗೋಧಿ ಮೈಬಣ್ಣ ಹೊಂದಿರುತ್ತಾನೆ. ಕಾಣೆಯಾದಾಗ ಸ್ಕೂಲ್ ಯುನಿಫಾರ್ಮನ್ನು (ಕೆಂಪು, ನೀಲಿ, ಬಿಳಿ ಮಿಶ್ರಿತ ಬಣ್ಣದ ಶರ್ಟ್ ಮತ್ತು ಕೆಂಪು ಬಣ್ಣದ ಪ್ಯಾಂಟ್) ಧರಿಸಿರುತ್ತಾನೆ.
ಕಾಣೆಯಾದ ಈ ಮಗುವಿನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆ ದೂ.08394-224033, ಮೊ.9480805745, ಡಿಎಸ್ಪಿ ಹೊಸಪೇಟೆ ಅವರ ದೂ.08394-224204, ಪಿಎಸ್ಐ ಪಟ್ಟಣ ಪೊಲೀಸ್ ಠಾಣೆ: 9480805751, ಎಸ್ಪಿ ಅವರ ದೂ.08394-200202 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.