1

 ದಾನದದಲ್ಲಿ ಶ್ರೇ಼ಷ್ಠದಾನ ಮತದಾನ

ಮತದಾರರ ಕೈಬಿಸಿ ಕರೆಯುತ್ತಿವೆ ಮಟ್ಟಗಟ್ಟೆಗಳು

ಸಂತೋಷ ಬಿ ದೇಶಪಾಂಡೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ 06- ಎರಡನೆ ಹಂತದ ಲೋಕಸಭಾ ಚುನಾವಣೆಯಲ್ಲಿ ಮತದಾರರು ಸಂಭ್ರಮದಿಂದ ಪಾಲ್ಗೊಳ್ಳಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ದು ಮತದಾರರನ್ನು ಕೈಬಿಸಿ ಕರೆಯುತ್ತಿರುವ ಮಟ್ಟಗಟ್ಟೆಗಳು ಅಲಂಕೃತ ಗೊಂಡು ಮತದಾರರನ್ನು ಕೈಬಿಸಿ ಕರೆಯುತ್ತಿವೆ.

ಕೊಪ್ಪಳ ಲೋಕಸಬೆಯಲ್ಲಿ ಜಿಲ್ಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಐದು ಸಖಿ, ಐದು ಅಂಗವಿಕಲರ, ಐದು ಯುವ ಮತದಾರರ ಮತ್ತು ಐದು ಮಾದರಿ ಮತಗಟ್ಟೆಗಳನ್ನು ನಿರ್ಮಿಸಿರುವ ಜಿಲ್ಲಾಡಳಿತ ಮತದಾರರನ್ನು ಸೆಳೆಯಲು ವಿಶೇಷ ಮತಗಟ್ಟೆಗಳನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿದೆ.

ಅಲಂಕಾರದಲ್ಲಿ ಸ್ಥಳೀಯ ಸ್ಮಾರಕಗಳು ಹಾಗೂ ಅಲ್ಲಿನ ಕಲಾಕೃತಿಗಳನ್ನು ಚಿತ್ರಗಳ ಮೂಲಕ ಬಿಡಿಸಿ ಮತದಾರರನ್ನು ಆಕರ್ಷಿಸಲಾಗುತ್ತಿದೆ. ಮತಗಟ್ಟೆಗಳ ಗೋಡೆಗಳ ಮೇಲೆ ‘ನಮ್ಮ ಮತ ನಮ್ಮ ಹಕ್ಕ “ ಸೇರಿದಂತೆ ಅನೇಕ ಸಂದೇಶಗಳನ್ನು ಬರೆಯಲಾಗಿದೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಮುಧೋಳದಲ್ಲಿ ಮಾದರಿ ಸಖಿ ಮತಗಟ್ಟೆ ಕೇಂದ್ರದಲ್ಲಿ ‘ಪ್ರತಿಶತ ಮತದಾನ ಇದುವೇ ನಮ್ಮ ವಾಗ್ದಾನ’ ಎಂದು ಬರೆಯಲಾಗಿದ್ದು, ಕೂಲಿ ಕಾರ್ಮಿಕ ಮಹಿಳೆ, ಕ್ರೀಡಾಸಾಧಕಿ, ವೈದ್ಯೆ, ಟೇಲರ್‌ ಹೀಗೆ ಮಹಿಳೆ ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿಕೊಂಡ ಚಿತ್ರಗಳನ್ನು ಬಿಡಿಸಲಾಗಿದೆ.

ನಂ 1– ಕಳೆದಭಾರಿ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ. 70ರಷ್ಟು ಮತದಾನವಾಗಿತ್ತು, ಗ್ರಾಮೀಣ ಪ್ರದೇಶದ 424 ಮತ್ತು ನಗರ ಪ್ರದೇಶದ 186 ಮತಗಟ್ಟೆಗಳಲ್ಲಿ ಶೇ. 70ಕ್ಕಿಂತಲೂ ಮತದಾನವಾಗಿದ್ದರಿಂದ ಇವುಗಳನ್ನು ಕೇಂದ್ರೀಕರಿಸಿ ಈ ಬಾರಿ ಜಿಲ್ಲಾ ಪಂಚಾಯಿತಿ ಸ್ವೀಪ್ ಚಟುವಟಿಕೆಗಳನ್ನು ನಡೆಸಿ ವಿವಿಧ ಜಾಗೃತಿ ನಡೆಸಿ ಮತದಾನ ಜಾಗೃತಿಯಲ್ಲಿ ರಾಜ್ಯದಲ್ಲಿ ನಂ 1 ಸ್ಥಾನದಲ್ಲಿದೆ.

ಮತದಾರರ ಸಂಖ್ಯೆ: ನಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 18,66,397 ಮತದಾರರಿದ್ದು, ಅದರಲ್ಲಿ  ಮಹಿಳಾ ಮತದಾರರ ಸಂಖ್ಯೆಯೇ 9,46,763 ಹೆಚ್ಚಿದೆ.ಜಿಲ್ಲೆಯಲ್ಲಿ ಒಟ್ಟು 1317 ಮತಗಟ್ಟೆಗಳಿದ್ದು, ಅಲ್ಲಿ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ಶೌಚಾಲಯ, ರ್‍ಯಾಂಪ್‌ ವ್ಯವಸ್ಥೆ, ಗಾಲಿ ಖುರ್ಚಿ, 570 ಮತ್ತಗಟ್ಟೆಗಳಲ್ಲಿ ಶಾಮಿಯಾನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಅರಿಗಳು ತಿಳಿಸಿದ್ದಾರೆ.

ಸಿದ್ಧತೆ : ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೨೦೪೫ ಮತಗಟ್ಟೆಗಳಿದ್ದು, ಚುನಾವಣಾ ಕರ್ತವ್ಯಕ್ಕಾಗಿ ೨೪೩೫ ಪಿಆರ್‌ಒ, ೨೪೩೫ ಎಪಿಆರ್‌ಒ, ೪೮೬೯ ಪಿಒ ಹಾಗೂ ೨೪೮ ಎಮ್‌ಒ ಗಳನ್ನು ನೇಮಕ ಮಾಡಲಾಗಿದೆ. ಮೇ ೦೬ ರಂದು ಮತದಾನ ಸಿಬ್ಬಂದಿಗಳು ಮಸ್ಟರಿಂಗ್ ಕೇಂದ್ರಗಳಿAದ ಮತಗಟ್ಟೆಗಳಿಗೆ ತೆರಳಲಿದ್ದಾರೆ. ಮತದಾನ ಸಿಬ್ಬಂದಿಗಳ ಆರೋಗ್ಯದ ದೃಷ್ಟಿಯಿಂದ ಎಲ್ಲಾ ಮಸ್ಟರಿಂಗ್ ಕೇಂದ್ರಗಳಲ್ಲಿ ಹೆಲ್ತ್ ಶೆಲ್ಟರ್‌ಗಳನ್ನು ಸ್ಥಾಪಿಸಲಾಗುವುದು. ಪ್ರತಿ ಮತಗಟ್ಟೆಗಳಿಗೆ ಹೆಲ್ತ್ ಕಿಟ್‌ಗಳನ್ನು ಸರಬರಾಜು ಮಾಡಲಾಗಿದೆ. ಮಸ್ಟರಿಂಗ್ ಕೇಂದ್ರಗಳಲ್ಲಿ ಮತ್ತು ಮತದಾನದ ದಿನದಂದು ಮತದಾನ ಸಿಬ್ಬಂದಿಗಳು ಕೆಲಸ ನಿರ್ವಹಿಸಲಿದ್ದಾರೆ.

ಚುನಾವಣೆ ಸಂಬಂಧ ೪೯೯೦ ಬ್ಯಾಲೆಟ್ ಯುನಿಟ್‌ಗಳು, ೨೬೫೭ ಕಂಟ್ರೋಲ್ ಯುನಿಟ್‌ಗಳು ಹಾಗೂ ೨೭೫೫ ವಿವಿಪ್ಯಾಟ್‌ಗಳು ಸೇರಿದಂತೆ ವಿದ್ಯುನ್ಮಾನ ಮತಯಂತ್ರಗಳನ್ನು ಉಪಯೋಗಿಸಲಾಗುತ್ತಿದೆ. ಮತದಾನ ಕರ್ತವ್ಯಕ್ಕಾಗಿ ೨೭೧ ಕೆ.ಎಸ್.ಆರ್.ಟಿ.ಸಿ ಬಸ್‌ಗಳು, ೧೧೫ ಕ್ರೂಸರ್‌ಗಳು ಹಾಗೂ ೮೬ ಮಿನಿ ಬಸ್ ಹಾಗೂ ಇತರೆ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಒಟ್ಟು ೨೦೪೫ ಮತಗಟ್ಟೆಗಳಿದ್ದು, ಅದರ ಪೈಕಿ ೭೬ ಮತಗಟ್ಟೆ ಸ್ಥಳಗಳಲ್ಲಿ ಕೇಂದ್ರ ಸಶಸ್ತç ಪೊಲೀಸ್ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ೨೪೮ ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸರ್ವರ್‌ಗಳನ್ನು ನೇಮಕ ಮಾಡಲಾಗಿದೆ. ೧೦೨೪ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

 

ಸೆಕ್ಷನ್ ೧೪೪ ಜಾರಿ: ಶಾಂತಿಯುತ ಹಾಗೂ ನ್ಯಾಯಸಮ್ಮತ ಮತದಾನದ ಉದ್ದೇಶದಿಂದ ಮೇ ೦೫ ರ ಸಂಜೆ ೦೬ ಗಂಟೆಯಿAದ ಮೇ ೦೭ ರ ರಾತ್ರಿ ೧೨ ಗಂಟೆಯವರೆಗೆ ಕೊಪ್ಪಳ ಜಿಲ್ಲೆಯಾದ್ಯಂತ ಶುಷ್ಕ ದಿನಗಳೆಂದು ಘೋಷಣೆ ಮಾಡಲಾಗಿದೆ. ಅದರೊಂದಿಗೆ ಮೇ ೦೫ ರ ಸಾಯಂಕಾಲ ೦೬ ಗಂಟೆಯಿAದ ಮೇ ೦೮ ರ ಬೆಳಿಗ್ಗೆ ೦೬ ಗಂಟೆಯವರೆಗೆ ಭಾರತ ದಂಡ ಪ್ರಕ್ರಿಯೆ ಸಂಹಿತೆ ಕಲಂ ೧೪೪ರ ಅಡಿಯಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿರುತ್ತದೆ ಹಾಗೂ ಈ ಅವಧಿಯಲ್ಲಿ ಐouಜ Sಠಿeಚಿಞeಡಿ ಗಳ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!