dfe872d0-07c8-465a-b876-2d8a61ab17c7

ಮಾಲಾ ಬಡಿಗೇರ ಅವರ ಪ್ರಬಂಧ ಸಂಕಲನ

ಮನದಾಳ ಪುಸ್ತಕ ಬಿಡುಗಡೆ

ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೧೭- ಕೃಷಿ ವಿಸ್ತರಣಾ ಕೇಂದ್ರದ ಸಭಾಂಗಣದಲ್ಲಿ ಶಕ್ತಿ ಶಾರದೆಯ ಮೇಳ ಹಾಗೂ ಬೆರಗು ಪ್ರಕಾಶನ ಭಾಗ್ಯನಗರ ಸಹಯೋಗದಲ್ಲಿ ನಡೆದ ಸಾಹಿತಿ, ಮಾಲಾ ಬಡಿಗೇರ ಅವರ ಪ್ರಬಂಧ ಸಂಕಲನ ಮನದಾಳ ಲೇಖಕಿಯ ಶಿಷ್ಯ ಬಳಗದಿಂದ ಬಿಡುಗಡೆಗೊಂಡು ವಿಶೇಷತೆ ಅನ್ನಿಸಿತು.
ಪುಸ್ತಕ ಕುರಿತು ಮನದಾಳದ ಮಾತುಗಳನ್ನು ಶಿಲ್ಪಾ ಮ್ಯಾಗೇರಿ ಮನದಾಳದ ಚಿತ್ರಣವನ್ನು ಬಿಚ್ಚಿಟ್ಟರು. ನಂತರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾಹಿತಿ ಈರಪ್ಪ ಕಂಬಳಿ ಕೊಪ್ಪಳ ಜಿಲ್ಲೆಯ ಭಾಷೆ ಕುರಿತ ಆಡು ಭಾಷೆ ಹೇಳುವ ಮೂಲಕ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.

ಮನದಾಳದ ಕುರಿತು ಮಾತನಾಡಿದ ಕಂಬಳಿ ಅವರು ಭಾಷೆ ಮತ್ತು ದೇಹದ ಭಾಷೆ ಕುರಿತು ಮನದಾಳದಿಂದ ಹಂಚಿಕೊಂಡರು. ಕೊಪ್ಪಳ ಭಾಗದ ಸಾಹಿತ್ಯಿಕ ನೆನಪು ನುಡಿದರು. ಲೇಖಕಿ ಮಾಲಾ ಬಡಿಗೇರ ಅವರು ಮಾತನಾಡುತ್ತಾ ಬದುಕಿನ ಏರು ಪೇರು ಕಂಡುಂಡ ಅನುಭವ ಹಂಚಿ ಕೊಂಡಿರುವೆ ಎಂದು ಮನದಾಳದ ಅಭಿಮತವನ್ನು ಬಿಚ್ಚಿಟ್ಟರು.

ಅಧ್ಯಕ್ಷತೆ ವಹಿಸಿದ್ದ ಹಗರಿಬೊಮ್ಮನಹಳ್ಳಿಯ ಸಾಹಿತಿ, ಉಪನ್ಯಾಸಕರಾದ ಶ್ರೀಮತಿ ಸುಧಾ ಚಿದಾನಂದಗೌಡ ಅವರು ಮಾತನಾಡುತ್ತಾ ಮಹಿಳೆಯರು ತಮ್ಮ ಜೀವನವನ್ನು ಸಾಗಿಸುವ ರೀತಿ ನಿಜಕ್ಕೂ ಮೌಲಿಕ ಸಾರವಾಗಿದೆ. ತಾಳ್ಮೆ ಬದುಕಿನ ದಿಕ್ಕನ್ನೇ ಬದಲಿಸುತ್ತದೆ. ಬರಹ ಜೀವನದ ಸತ್ವಗಳನ್ನು ಬಿಂಬಿಸುತ್ತದೆ.
ಈ ಸಂದರ್ಭದಲ್ಲಿ ಡಿ.ಎಂ.ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.

Leave a Reply

Your email address will not be published. Required fields are marked *

error: Content is protected !!