
ತೆಕ್ಕಲಕೋಟೆ : ಮನೆ ಯೊಂದರಲ್ಲಿ 50 ಗ್ರಾಂ ಚಿನ್ನಾಭರಣ ಕಳ್ಳತನ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 24- ತಾಲೂಕು ತೆಕ್ಕಲಕೋಟೆ ಪಟ್ಟಣದ 6ನೇ ವಾರ್ಡ್ ನಿವಾಸಿ ಎಮ್ ಹೊನ್ನೂರ್ ಸಾಬ್ ಎಂಬುವವರ ಮನೆಯಲ್ಲಿ ಶನಿವಾರ 50 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ.
ಬೇರೆ ಊರಿಗೆ ತೆರಳಿದ್ದ ಎಮ್ ಹೊನ್ನೂರ್ ಸಾಬ್ ಮರಳಿ ಮನೆಗೆ ಬಂದಾಗ ಚಿನ್ನಾಭರಣ ಕಳ್ಳತನ ವಾಗಿರುವುದು ಗೊತ್ತಾಗಿದ್ದು ತೆಕ್ಕಲಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು ಬೆರಳಚ್ಚು ತಜ್ಞರು ಶ್ವಾನ ದಳದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಸುಂದರೇಶ್ ಪಿಎಸ್ಐ ಶಾಂತಿಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.