
ಮರಿಯಮ್ಮನಹಳ್ಳಿ : ಪ.ಪಂ. ಯೋಜನಾ ನಿರ್ದೇಶಕರ ಧಿಡೀರ್ ಭೇಟಿ
ಕರುನಾಡ ಬೆಳಗು ಸುದ್ದಿ
ಮರಿಯಮ್ಮನಹಳ್ಳಿ, 26- ಪಟ್ಟಣ ಪಂಚಾಯಿತಿಯಲ್ಲಿ ನಮೂನೆ 3ಕೊಡಲು ಅಧಿಕಾರಿಗಳು ಜನರನ್ನು ಸತಾಯಿಸುತ್ತಿದ್ದಿದ್ದು ವಾಡಿಕೆಯಾಗಿತ್ತು.
ಮಂಗಳವಾರ ಸಂಜೆ 6:00ಗಂಟೆ ಸುಮಾರಿಗೆ ಜಿಲ್ಲೆಯ ಯೋಜನಾನಿರ್ದೇಶಕರಾದ ಮನೋಹರ್ ಅವರು ಪಂಚಾಯಿತಿಗೆ ಧಿಡೀರನೆ ಭೇಟಿನಿಡಿ ಅಧಿಕಾರಿಗಳ ಕಾರ್ಯ ವೈಖರಿಗಳಬಗ್ಗೆ ಮಾಹಿತಿ ಪಡೆದರು.
ಪಂಚಾಯಿತಿಯಲ್ಲಿನ ವಿವಿಧ ಕೆಲಸಗಳಿಗೆ ಆವರಣದಲ್ಲಿ ಕಾಯುತ್ತಿದ್ದವರನ್ನು ಮಾತನಾಡಿಸಿ ಸಮಸ್ಯೆಗಳನ್ನು ಆಲಿಸಿ, ನೆರೆದಿದ್ದ ಕೆಲವರು ಫಾರಂ 3ಗಾಗಿ ಕಾಯುತ್ತಿದ್ದೇವೆ ಹಲವು ತಿಂಗಳಿನಿಂದ ಸತಾಯಿಸುತ್ತಿದ್ದಾರೆ ಎಂದು ಹೇಳಿದರು.
ನಿರ್ದೇಶಕರು ಕೂಡಲೇ ಕಡತ ತರಿಸಿಕೊಂಡು ಪರಿಶೀಲಿಸಿ ಸ್ಥಳದಲ್ಲೇ ಫಾರಂ-3 ಕೊಡಿಸಿದರು.
ಜನರನ್ನು ಸತಾಯಿಸಬೇಡಿ ಅರ್ಜಿಕೊಟ್ಟ ಕೂಡಲೇ ಅವದಿಯೊಳಗೆ ಕೆಲಸ ಮಾಡಿಕೊಡಿ, ಜನರನ್ನು ನೆಮ್ಮದಿಯಿಂದ ಬದುಕಲು ಬಿಡಿ, ಅರನ್ನು ಕಛೇರಿಗೆ ಅಲೆದಾಡಿಸಬೇಡಿ ಧಾಖಲೆ ಪರಿಶೀಲಿಸಿ ಕೂಡಲೇ ಫಾರಂ-3 ಕೊಡಿ ಮತ್ತು ಅದಕ್ಕಾಗಿ ಹೆಚ್ಚಿನ ಹಣ ಪಡೆಯಬೇಡಿ ಎಂದು ಸಿಬ್ಬಂದಿಗಳಿಗೆ ತಿಳಿಸಿದರು.
ಯಾರಾದರೂ ನಿಮ್ಮನ್ನು ಅಲೆದಾಡಿಸಿ ಸತಾಯಿಸಿದರೆ ನಮ್ಮನ್ನು ಸಂಪರ್ಕಿಸಿ ಎಂದು ಸಂಪರ್ಕ ಸಂಖ್ಯೆಯನ್ನು ಕೊಟ್ಟರು. ಅಲ್ಲದೇ ಫಾರಂ-3 ಗಾಗಿ ಹೆಚ್ಚಿನ ಹಣ ಕೊಡಬೇಕಿಲ್ಲ ಯಾರಾದರೂ ಕೇಳಿದರೆ ನಮಗೆ ತಿಳಿಸಿ ಎಂದು ಜನರಿಗೆ ಹೇಳಿದರು. ಅಲ್ಲದೇ ಪಟ್ಟಣದಲ್ಲಿನ ಲೇಔಟ್ ಗಳಿಗೆ ಫಾರಂ -3ಕೊಡದಿರುವ ಬಗ್ಗೆ ಚರ್ಚಿಸಿದರು ಅವುಗಳಿಗೂ ಕೊಡಲು ಮುಖ್ಯಧಿಕಾರಿಗೆ ಸೂಚಿಸಿದರು.
ಮುಖ್ಯಧಿಕಾರಿಗೆ ಶ್ಲಾಘನೆ : ನೆರೆದಿದ್ದವರು ಹಿಂದಿನ ಮುಖ್ಯಧಿಕಾರಿಗಳು ಫಾರಂ-3 ಕೊಡಲು ಮೀನಾಮೇಶ ಮಾಡುತ್ತಿದ್ದರು. ಪಟ್ಟಣ ಪಂಚಾಯಿತಿಯಿಂದ ನಮ್ಮ ನಿವೇಶನಗಳಿಗೆ ಫಾರಂ-3 ಪಡೆಯುವುದೇ ಒಂದು ದೊಡ್ಡ ಸಾಧನೆ ಯಾಗಿತ್ತು. ತುಂಬಾ ವಿಳಂಬ ಮಾಡಿ ಹಣಕ್ಕಾಗಿ ಜನರನ್ನು ಪಂಚಾಯಿತಿಗೆ ಅಲೆದಾಡಿಸುತ್ತಿದ್ದರು. ಈಗಿರುವ ಮುಖ್ಯಧಿಕಾರಿಗಳು ಯಾರೇ ಬಂದರೂ ಸ್ಪಂದಿಸುತ್ತಿದ್ದಾರೆ ಫಾರಂ-3ಕೊಡಲು ಹಣದ ಬೇಡಿಕೆಇಡದೇ, ಅಲೆದಾಡಿಸದೆ, ನಿಯಮಗಳ ಪ್ರಕಾರ ಧಾಖಲೆಗಳು ಸರಿ ಇರುವವರಿಗೆ ಕೊಡುತ್ತಿದ್ದಾರೆ ಎಂದು ಶ್ಲಾಗಿಸಿದರು.
ಈ ಸಂಧರ್ಭದಲ್ಲಿ ನೆರೆದಿದ್ದ ನಾಗರಿಕರು ಮತ್ತು ಪಟ್ಟಣ ಪಂಚಾಯಿತಿ ಸದಸ್ಯೆರು ಇದ್ದರು.