
ಮಹಿಳಾ ಮತದಾರರನ್ನು ಕಾಂಗ್ರೆಸ್ ಬ್ಲಾಕ್ ಮೇಲ್ ಮಾಡುತ್ತಿದೆ : ಮಂಜುಳಾ ಕರಡಿ
ಕರುನಾಡ ಬೆಳಗು ಸುದ್ದಿ
ವಿಜಯನಗರ,28- ಕಾಂಗ್ರೆಸ್ ನ ಸಿದ್ದ ರಾಮಯ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆ ಗಳನ್ನು ತಂದು ಈಗ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಲ್ಲಿ 2000 ನೀಡುತ್ತಿದ್ದು ಅದಕ್ಕಾಗಿ ಲೋಕಸಭೆ ಚುನಾವಣೆಗೆ ಕಾಂಗ್ರೇಸ್ ಗೆ ವೋಟು ಹಾಕಬೇಕು ಇಲ್ಲದಿದ್ದರೆ 2000 ಹಣ ಹಾಕುವುದನ್ನು ನಿಲ್ಲಿಸಿತ್ತೇವೆ ಅನ್ನುವ ಬ್ಲಾಕ್ಮೇಲ್ ಮಹಿಳೆಯರ ಮೇಲೆ ಮಾಡುತ್ತಿದ್ದಾರೆ ಎಂದು ಬಿಜೆಪಿಯ ಮಹಿಳಾ ಮೋರ್ಚಾ ರಾಜ್ಯಾದ್ಯಕ್ಷೆ ಮಂಜುಳಾ ಕಾಂಗ್ರೇಸ್ ನ್ನು ಟೀಕಿಸಿದರು.
ಹೊಸಪೇಟೆಯ ಪಟೇಲ್ ನಗರ ಕಚೇರಿಯಲ್ಲಿ ವಿಜಯನಗರ ಜಿಲ್ಲಾ ಮಹಿಳಾ ಮೋರ್ಚಾ ವಿಶೇಷ ಸಭೆಯಲ್ಲಿ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಂಜುಳಾ ಮಾತನಾಡಿ ರಾಜ್ಯ ಪ್ರವಾಸದಲ್ಲಿದ್ದೇನೆ ಈಗ ಅರ್ಧ ರಾಜ್ಯ ಪ್ರವಾಸ ಮುಗ್ದಿದೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಎಲ್ಲಾ ಪದಾಧಿಕಾರಿಗಳು ಮಂಡಲದ ಮಹಿಳಾ ಪದಾಧಿಕಾರಿಗಳು ಜಾಗೃತ ಮಾಡುವ ಕೆಲಸ ಮಾಡುತ್ತಿದ್ದೇವೆ ಮತ್ತು ಮೋದಿಜಿ ನಾರಿ ಶಕ್ತಿ 33ರಷ್ಟು ವಿಧಾನಸಭೆ ಮತ್ತು ಲೋಕಸಭೆಯಲ್ಲಿ 33% ಬಿಲ್ ಪಾಸ್ ಮಾಡಿದ್ದಾರೆ ಎಂದರು.
ನರೇಂದ್ರ ಮೋದಿಜಿ ಜನಪರ ಅಭಿವೃದ್ಧಿ ಯೋಜನೆಗಳು ಉಜ್ಜಲ್ ಯೋಜನೆ ಕಿಸಾನ್ ಸನ್ಮಾನ ಯೋಜನೆ ಶೌಚಾಲಯಗಳು ಜನೌಷಧಿಗಳು ಪಡಿತರ ಅಕ್ಕಿ ಆಯುಷ್ಮಾನ್ ಕಾರ್ಡ್. ಮನೆ ಮನೆಗೆ ಹಾಕಿಸುವ ಕೆಲಸ ಕೇಂದ್ರ ಸರ್ಕಾರ ಜನರಿಗೆ ಮುಟ್ಟಿಸುವ ಕೆಲಸ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ.
2000 ಮಹಿಳೆಯರಿಗೆ ದಾರಿ ತಪ್ಪಿಸುವ ಕೆಲಸ ಕಾಂಗ್ರೆಸ್ ಮಹಿಳಾ ವೋಟನ್ನು ಹೈಜೆಕ್ ಮಾಡುವ ಷಡ್ಯಂತರ ಮಾಡಿದೆ ಸಚಿವ ಸಂತೋಷ್ ಲಾಡ್ ಅವರ ಕಾರ್ಯಕ್ರಮ ಒಂದರಲ್ಲಿ ಹೇಳುತ್ತಾರೆ ಮೋದಿ ಸರ್ಕಾರ ಸಾಲ ಮಾಡಿದೆ ಅಂತ ಹೇಳಿದ್ದಾರೆ ಆದರೆ 10ನೆಯ ರಾಂಕ್ ಇದ್ದಂತ ಭಾರತವನ್ನು ಐದನೇ, 5ನೇರಾಂಕ್ ತಂದವರು ಮೋದಿಜಿಯವರು ಮತ್ತು ರಸ್ತೆ ಅಭಿವೃದ್ಧಿ ಒಂದೇ ಭಾರತ್ ರೈಲ್ವೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ ದೇಶದ ರಕ್ಷಣೆಗೆ ಮೋದಿಜಿಗೆ ಮತ್ತೊಮ್ಮೆ ಈ ದೇಶದ ಪ್ರಧಾನಿ ಮಾಡಬೇಕಾಗಿದೆ ಹೇಳಿದರು.
ನಾನು ಮೋದಿಜಿ ಪರಿವಾರ ಅನ್ನುವ ಪ್ರವಾಸದಲ್ಲಿ ಕ್ಯಾಂಪೇನ್ ಮಾಡುತ್ತಿದ್ದೇವೆ 140 ಕೋಟಿ ಜನ ಇದ್ದಾರೆ ಈ ಪರಿವಾರದ ಜೊತೆಗೆ ದೇವೇಗೌಡರು ಮತ್ತು ಎಸ್ಎಂ ಕೃಷ್ಣ ಹಾಗೂ ಕಾಂಗ್ರೆಸ್ ಪಕ್ಷದ ನೆಹರು ಕುಟುಂಬದ ಹಿರಿಯ ಸೊಸೆ ಮೇನಕಾ ಗಾಂಧಿ ಕೂಡ ಮೋದಿ ಪರಿವರ್ತನೆ ಜೊತೆಯಲ್ಲಿದ್ದಾರೆ ಮುಂಬರುವ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಕನಿಷ್ಠ 6.7 ಲಕ್ಷ ಅಲ್ಪಸಂಖ್ಯಾತರ ವೋಟುಗಳಿವೆ, ಇದನ್ನು ಒಂದೆಡೆ ಸೇರಿಸಬೇಕು ಮತ್ತೊಂದು ಬ್ಲಾಕ್ ಮೇಲ್ ತಂತ್ರ ಏನೆಂದರೆ ಕಾಂಗ್ರೆಸ್ ಸರ್ಕಾರ ವಾಮಮಾರ್ಗದ ಮೂಲಕ ಅನುಸರಿಸುತ್ತಿದೆ ಇದನ್ನು ಬಲವಾಗಿ ಖಂಡಿಸುತ್ತೇವೆ.
ಈ ಸರ್ಕಾರ ಪಿ ಎಫ್ ಐ ಅನ್ನುವ ನಿಷೇಧಿಸಿದ ಸಂಘಟನೆ ಜೊತೆಗೆ 2013 ಚುನಾವಣೆ ಗೆಲ್ಲುವಂತ ಒಪ್ಪಂದ ಸಿದ್ದರಾಮಯ್ಯ ಸರ್ಕಾರ ಮಾಡಿಕೊಂಡಿದ್ದಾರೆ ಎಂದು ಮಂಜುಳಾ ಅವರು ಆರೋಪ ಮಾಡಿದ್ದಾರೆ.
ಆರುಂಡಿ ಸುವರ್ಣ ನಾಗರಾಜ್, ಕೆಎಸ್.ರಾಘವೇಂದ್ರ, ಶಂಕರ್ ಮೇಟಿ, ಸೌಮ್ಯ, ಪ್ರಿಯಾಂಕ ಕುಮಾರಿ, ಕುಮಾರಿ ಲತಾ, ಕವಿತಾ, ಶಾಂತಮ್ಮ, ಪುಷ್ಪ ಜಗದೀಶ್, ಮಹಿಳಾ ಮೋರ್ಚಾದ ಎಲ್ಲ ಪದಾಧಿಕಾರಿಗಳು ಮಂಡಲ ಮಹಿಳಾ ಪದಅಧಿಕಾರಿಗಳು ಉಪಸ್ಥಿತರಿದ್ದರು