
ಮಹಿಳೆಯರ ಸ್ವಾವಲಂಬನೆ ಬದುಕಿಗೆ ಗ್ಯಾರಂಟಿ ಯೋಜನೆ ಶ್ರೀರಕ್ಷವಾಗಿದೆ : ಶಾಸಕ ಕೆ ರಾಘವೇಂದ್ರ ಹಿಟ್ನಾಳ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ,2- ಅಳವಂಡಿ ಹಾಗೂ ಹಿರೇ ಸಿಂದೋಗಿ ಗ್ರಾಮದಲ್ಲಿ ಇಂದು ನಡೆದ ನೂತನ ಶಾಲಾ ಕೊಠಡಿ ಉದ್ಘಾಟನೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಂಪೌಂಡ್ ನಿರ್ಮಾಣ ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆಯಲ್ಲಿ ಪಾಲ್ಕೊಂಡು ಬಳಿಕ ಮಾತನಾಡಿದರು.
ರಾಜ್ಯದ ಗ್ಯಾರಂಟಿ ಯೋಜನೆಗಳು ಸರ್ಕಾರ ರಚನೆಯಾಗಿ 8 ತಿಂಗಳಗಳ ಅವಧಿಯಲ್ಲಿ ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪುತ್ತಿರುವುದು ಸಹಿಸದ ಬಿಜೆಪಿ ಅವರು ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗುತ್ತಿದೆ ಎಂದು ಹೇಳುತ್ತಿರುವವರು ಇಂದು ಈ ಫಲಪ್ರದ ಯೋಜನೆಗಳನ್ನು ನೋಡಿ ಮೋದಿ ಗ್ಯಾರಂಟಿಗಳನ್ನು ನೀಡುತ್ತಿರುವುದು ಮುಂದಾಗಿದೆ.
ಸುಳ್ಳಿನ ಬಿಜೆಪಿ ಸರ್ಕಾರವು ರಾಜ್ಯ ಮತ್ತು ರಾಷ್ಟ್ರದ ರೈತರ 15,000 ಸಾಲವನ್ನು ಸಹ ಮನ್ನಾ ಮಾಡಲಿಕ್ಕೆ ಆಗಲಿಲ್ಲ ಹಿಂದೂಗಳ ಹಬ್ಬಕ್ಕೆ ಮೂರು ಸಿಲಿಂಡರ್ ಉಚಿತವಾಗಿ ನೀಡುತ್ತೇವೆ ಎಂದು ವಾಗ್ದಾನ ಮಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯವರು ಸುಳ್ಳು ಭರವಸೆ ಈಡೇರಲಿಲ್ಲ ನಮ್ಮ ಗ್ಯಾರಂಟಿಗಳು ಜನಪರ ಕಲ್ಯಾಣಕ್ಕಾಗಿ ಜಾರಿಗೆ ತಂದಿದ್ದು ಈಗಾಗಲೇ ಸ್ತ್ರೀಶಕ್ತಿ ಯೋಜನೆಯಿಂದ 1 ಕೋಟಿ 60 ಲಕ್ಷ ಮಹಿಳೆಯರು ಪ್ರವಾಸ ಕೈಗೊಂಡು ಈ ಯೋಜನೆಯ ಲಾಭವನ್ನು ಪಡೆದಿದ್ದಾರೆ.
ಇದರಿಂದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಸ್ಥಾನಗಳ ಆದಾಯವು 4 ಪಟ್ಟು ಹೆಚ್ಚಾಗಿದ್ದು ಮಹಿಳೆಯರ ಸ್ವಾವಲಂಬನೆ ಬದುಕಿಗೆ ಗ್ಯಾರಂಟಿ ಯೋಜನೆ, ಶ್ರೀರಕ್ಷವಾಗಿದೆ. ರಾಜ್ಯದ ಪ್ರತಿ ಕುಟುಂಬಕ್ಕೂ 5-6 ಸಾವಿರ ಪ್ರತಿ ತಿಂಗಳು ಹಣ ಉಳಿತಾಯವಾಗುತ್ತಿದ್ದು ಸಾವಿರಾರು ಕುಟುಂಬಗಳಿಗೆ ಆಸರೆಯಾಗಿದೆ. ಸಮಾನತೆ ತತ್ವದ ಅಡಿಯಲ್ಲಿ ಸಮಪಾಲು ಸಮಬಾಳು ಎಂಬುದು ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರ
ಗುರಿಯಾಗಿದೆ ಇಂತಹ ಗ್ಯಾರಂಟಿ ಯೋಜನೆಗಳು ದೇಶದಲ್ಲಿ ಪ್ರಥಮ ಮತ್ತು ದೊಡ್ಡ ಯೋಜನೆಗಳಾಗಿವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನಪರ ಜನ ಹಿತಕ್ಕಾಗಿ ಕೆಲಸ ಮಾಡುವ ಪಕ್ಷಕ್ಕೆ ಮತ ನೀಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ ರಾಜಶೇಖರ್ ಇಟ್ನಾಳ್ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ರೆಡ್ಡಿ ಗಲ್ಲಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಾಲಚಂದ್ರ ಸ್ಥಾಯಿ ಸಮಿತಿಯ ಅಧ್ಯಕ್ಷ ವಿರುಪಾಕ್ಷ ಪಲ್ಟನ್ ಮುಖಂಡರಾದ ಭರಮಪ್ಪ ನಗರ ವೆಂಕನಗೌಡ ಹಿರೇಗೌಡ್ರು ಕೇಶವರೆಡ್ಡಿ ಮದ್ನೂರ್ ತಾಳೆಪ್ಪ ಪೂಜಾರಿ ಹೊರಗಡೆ ತೋಟ ಪರ್ಸೆಂಟ್ ಬಿಮ್ಸ್ನಲ್ಲಿ ಪದ್ಮಾವತಿ ಕಂಬಳಿ ಅಂದಾನ ಸ್ವಾಮಿ ಬೆಟಿಗೇರಿ ಮಠ ಇಸ್ಮಾಯಿಲ್ ಹಾಗೂ ಹನುಮರೆಡ್ಡಿ ನಿಂಗಪ್ಪ ಯತ್ನಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಗ್ರಾಮದ ಗುರುಹಿರಿಯರು ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.