9273af21-122c-4cd3-9cd3-1009826475b1

                      ಸ್ವ ಸಹಾಯ ಸಂಘದಿಂದ   ಮಹಿಳೆಯರಿಗೆ ಬದುಕು ಕಟ್ಟಿಕೊಳ್ಳಲು ಕೆಲಸ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ 5 ಮಹಿಳೆಯರು ಸ್ವ ಸಹಾಯ ಸಂಘಗಳಿಂದ ಸಾಲ ಪಡೆದು ಸ್ವಾವಂಭಿ ಜೀವನ ನಡೆಸಲು ತುಂಬಾ ಅನುಕೂಲಕರವಾಗಿದೆ ಅಡುಗೆ ಮನಗೆ ಸಿಮೀತವಾಗಿದ ಮಹಿಳೆಯರಿಗೆ ಬದುಕು ಕಟ್ಟಿಕೊಳ್ಳಲು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಶ್ರಮೀಸುತ್ತಿದೆ ಎಂದು ಷ. ಬ್ರ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಅವರು ಹೇಳಿದರು

ಪಟ್ಟಣದ ಬೇವೋರು ರಸ್ತೆಯಲ್ಲಿ ಬರುವ ಶ್ರೀಸಾಯಿ ಪ್ಯಾಲೇಸ್ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿ ತಾಲೂಕು ಮಟ್ಟದ ಮಹಿಳೆಯರ ವಿಚಾರ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಮನೆಗೆ ಸೀಮಿತವಾಗಿದ್ದ ಸ್ತ್ರೀಯರು ಸಮಾಜದ ಮುಖ್ಯವಾಹಿನಿಗೆ ಕರೆತಂದು ಅಕ್ಷರ,ಆರ್ಥಿಕ ಸಬಲ, ವ್ಯವಹಾರದ ಜ್ಞಾನ ಕಲಿಸುತ್ತಿದೆ. ಈ ಮೂಲಕ ಮಹಿಳೆಯರಿಗೆ ಕುಟುಂಬ ನಿರ್ವಹಣೆ ಜತೆಗೆ ಆಧಾರವಾಗುವ ಕೌಶಲ್ಯ ನೀಡುತ್ತಿದೆ.
ಗ್ರಾಮೀಣ ಭಾಗದ ಸಾವಿರಾರು ಕುಟುಂಬಗಳಿಗೆ ಸಂಸ್ಥೆ ಬೆಳಕಿನ ಹಾದಿ ತೋರುತ್ತಿದೆ ಶ್ರೀ ಧರ್ಮಸ್ಥಳ ಸಂಸ್ಥೆ ಗ್ರಾಮೀಣ ಮಹಿಳೆಯರ ಉನ್ನತಿಗಾಗಿ ಹುಟ್ಟಿಕೊಂಡ ಸಂಸ್ಥೆಯಾಗಿದೆ ಈ ಸಂಸ್ಥೆಯು 2012 ರಲ್ಲಿ ಪ್ರಾರಂಭಗೊಂಡು ತಾಲೂಕಿನಲ್ಲಿ 3700 ಸಂಘಗಳನ್ನು ಹುಟ್ಟುಹಾಕಲಾಗಿದೆ ತಾಲೂಕಿನಲ್ಲಿ ಒಟ್ಟು 32 ಸಾವಿರ ಸದಸ್ಯರನ್ನು ಹೊಂದಿದೆ 2012- ರಿಂದ 2024 ರ ವರಗೆ ಪ್ರತಿ ಮಹಿಳೆಯರು ಉಳಿತಾಯದ ಹಣ 19 ಕೋಟಿ 50 ಲಕ್ಷ ರೂಪಾಯಿ ಉಳಿತಾಯದ ಹಣವಾಗಿದೆ  ಇದನ್ನು ಸ್ವಾವಲಂಬಿ ಜೀವನ ನಿರ್ವಹಿಸಿಕೊಳ್ಳಲು ಮುಂದಾಗಬೇಕೆಂದರು.
ಪಟ್ಟಣ ಪಂಚಾಯತ ಸದಸ್ಯ ಡಾ.ನಂದಿತಾ ದಾನರಡ್ಡಿ ಮಾತನಾಡಿ ಅಂದಿನ ದಿನಗಳಲ್ಲಿ ಮಹಿಳೆಯರು ಹಣ ಪಡೆಯ ಬೇಕಾದರೆ ಪುರುಷರಿಗೆ ಕೈ ಒಡ್ಡಿ ಹಣ ಪಡೆಯುವದಾಗಿತ್ತು ಇಂದು ಸರಕಾರ ಮತ್ತು ಸಂಘ ಸಂಸ್ಥೆಗಳು ಮಹಿಳಾ ಸಬೀಲಿಕರಣಕ್ಕಾಗಿ ಅನೇಕ ಮಹಿಳಾ ಸ್ವ ಸಹಾಯ ಸಂಘಗಳನ್ನು ಪ್ರಾರಂಭಿಸಿರುವದರಿಂದ ಮಹಿಳೆಯರು ಸ್ವ ಸಹಾಯದ ಸಂಘದಿಂದಲೇ ಪುರುಷರು ಸಾಲ ಪಡೆದು ಸಾಲ ತೀರಿಸಿದ್ದಾರೆಂದರೆ ಅದಕ್ಕೆ ಸ್ವ ಸಹಾಯ ಸಂಘಗಳಿಂದ ಮಾತ್ರ ಸಾಧ್ಯ ಪ್ರತಿಯೂಬ್ಬ ಮಹಿಳೆಯರು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕಾಗಿದೆ ಆಂತರಿಕವಾಗಿ ದೈಹಿಕವಾಗಿ ಆದ್ಯಾತ್ಮೀಕವಾಗಿ ನಮ್ಮ ಮಕ್ಕಳ ಬದುಕಿಗೆ ತಾಯಿಯೇ ಪ್ರೇರಣೆ ಮತ್ತು ಒಳ್ಳೇಯ ಮಾರ್ಗದರ್ಶನ ಅತ್ಯವಶ್ಯ ಎಂದು ಹೇಳಿದರು.
ಯಲಬುರ್ಗಾ ಶ್ರೀ ಧರಮುರುಡಿ ಷ. ಬ್ರ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿದ ಅವರು ಮಹಿಳೆಯರು‌ ಒಳ್ಳೇಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ಹಿರಿಮೆಯನ್ನು ಹೆಚ್ಚಿಸುವ ತಾಯಿಯೇ ಮೊದಲ ಗುರು.ಸಂಸ್ಕಾರ ನೀಡಿ ಮಕ್ಕಳಿಗೆ ತಾಯಿ ದೇವತೆಗಳ ಸ್ವರಿಪಿಗಳು.ಈ ದೇಶದಲ್ಲಿ ಸಂಸ್ಕೃತ ಕಲಿಸುವವರೆ ತಾಯಿಯರು ನಿಮ್ಮಿಂದಲೆ ಜಗತ್ತು ಎನ್ನುವ ಕಾರ್ಯಕ್ರಮ ಇದಾಗಿದೆ ನಿಮ್ಮ ಹಣದಿಂದಲೆ ನಿವು ಕಾರ್ಯ ಪ್ರವೃತ್ತಿ ಬೆಳಸಿ ಯೋಜನೆಗಳ ಮೂಲಕ ಜ್ಞಾನ ಕೌಶಲ್ಯತೆ ಬೆಳೆಸಿಕೊಳ್ಳಿ ಸ್ವಾವಲಂಭಿ ಬದುಕು ನಿರ್ಮಿಸಿಕೊಳ್ಳುವದರ ಜೊತೆಗೆ ಇಂದಿನ ಮಹಿಳೆಯರು ಅಬಲೆಯಲ್ಲ ಎಲ್ಲಾ ರಂಗದಲ್ಲಿ ಸಬಲರಾಗಿ ಮುಂದೆ ಬರಬೇಕು .ಮಕ್ಕಳಿಗೆ ಮನೆಯ ಮೊದಲ ಪಾಠಶಾಲೆ ಸಂಸ್ಕಾರದಿಂದಲೆ ಮಕ್ಕಳು ಬದಲಾಗುವರು. ಎಂದು ಹೇಳಿದರು ಪ್ರತಿಯೊಬ್ಬ ಪಾಲಕರು ತಮ್ಮ ತಮ್ಮ ಮಕ್ಕಳಿಗೆ ಒಳ್ಳೆಯ ನಡೆ ನುಡಿ ಸಂಸ್ಕಾರ ಸಂಸ್ಕೃತಿ ಕಲಿಸಬೇಕು ಎಂದು ಹೇಳಿದರು.
ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಕುರಿತು ಸಂಪನ್ಮೂಲ ವ್ಯಕ್ತಿ ಗಂಗಾವತಿ ವಕಿಲರಾದ ರಾಜೇಶ್ವರಿ .ಬಿ.ಎಮ್.ಸುರೇಶ. ಹಾಗೂ ಸ್ವಾವಲಂಬಿ ಜೀವನಕ್ಕೆ ಒಂದು ಸ್ವಯಂ ಉಧ್ಯೋಗದ ಕುರಿತು ಸಂಪನ್ಮೂಲ ವ್ಯಕ್ತಿ ಕುಷ್ಠಗಿಯ ನಟರಾಜ ಸೋನಾರ ಉಪನ್ಯಾಸ ನೀಡಿದರು ಕಾರ್ಯಕ್ರಮದ ಅಧ್ಯಕ್ಷತೆ ಸಂಗಣ್ಣ ಟೆಂಗಿನಕಾಯಿ ಮಹಿಸಿದ್ದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸದಸ್ಯರುಗಳಾದ ಡಾಕ್ಟರ ನಂದಿತಾ ದಾನರಡ್ಡಿ. ವಸಂತ ಭಾವಿಮನಿ, ತಾಲೂಕ ವಕೀಲರ ಸಂಘದ ಮಾಜಿ ಅಧ್ಯಕ್ಷ ಆನಂದ ಉಳ್ಳಾಗಡ್ಡಿ. ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ,ನಾಗೇಶ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಯೋಜನಾಧಿಕಾರಿ ಸತೀಶ್,ಟಿ,ಗಾಂವಕರ್ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಗೀತಾ ಓಲೆಕಾರ . ಮೇಲ್ವಿಚಾರಕಿ ತ್ರೀವೇಣಿ ಭಾವಿಕಟ್ಟಿ ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!