
ಮಹಿಳೆಯರಿಗೆ ಸ್ವಾವಲಂಭಿ ಬದುಕಿಗೆ ಉಚಿತ ಬ್ಯುಟಿಷಿಯನ್ ತರಬೇತಿಗೆ ಚಾಲನೆ
ಕರುನಾಡ ಬೆಳಗು ಸುದ್ದಿ
ವಿಜಯನಗರ,1- ಮಹಿಳೆಯರು ಸ್ವಾವಲಂಬಿಗಾಳಗಲು ತಾಯಮ್ಮ ಶಕ್ತಿಸಂಘಟನೆ ಇಂಧು ಉಚಿತ ಬ್ಯುಟಿಷಿಯನ್ ತರಬೇತಿ ಕಾರ್ಯಾಗಾರವನ್ನು ಪ್ರಾರಂಭಿಸಿದೆ.
ರೈಲ್ವೆ ಸ್ಟೇಷನ್ ರಸ್ತೆ ಯಲ್ಲಿನ ಕೃಷ್ಣಪ್ಯಾಲೇಸ್ ಎದುರುಗಡೆ ಇರುವ ಸಂಕೀರ್ಣದಲ್ಲಿ ಆರಂಭಗೊಂಡ,ಐದು ದಿನಗಳ ತರಭೇತಿ ಶಿಬಿರದಲ್ಲಿ ಇಂದು ಬಳ್ಳಾರಿ ಹಾಗು ವಿಜಯನಗರ ಜಿಲ್ಲೆಯ ವಿವಿದ ಪ್ರದೇಶಗಳಿಂದ ಸುಮಾರು ನಾಲ್ಕುನೂರು ಮಹಿಳೆಯರು ಪಾಲ್ಗೊಂಡಿದ್ದು ಕಂಡು ಬಂದಿತು.
ತರಬೇತಿಯನ್ನು ಮೂರು ಭಾಗಗಳಲ್ಲಿ ವಿಂಗಡಿಸಲ್ಪಟ್ಟಿದ್ದು , ಮೊದಲನೆಯ ಬ್ಯಾಚ್ ಬೆಳಿಗ್ಗೆ 10 ಗಂಟೆಯಿಂದ -12 ರವರೆಗೆ, ಎರಡನೆ ಬ್ಯಾಚ್ 12- ರಿಂದ -2ರವರೆಗೆ , ಮೂರನೆಯದು ಸಂಜೆ 3 ರಿಂದ5 ಗಂಟೆಯವರೆಗೆ ನಡೆಸಲಾಗುತ್ತಿದೆ ಎಂದು ತಾಯಮ್ಮ ಶಕ್ತಿ ಸಂಘದ ಸಂಸ್ಥಾಪಕಿ “ಕವಿತಾ ಸಿಂಗ್” ಪತ್ರಿಕೆಗೆ ತಿಳಿಸಿದರು.
ಬ್ಯುಟಿಷಿಯನ್ ಕ್ಷೇತ್ರದಲ್ಲಿ ಪ್ರಾವಿಣ್ಯತೆ ಪಡೆದಿರುವ ವೀಣಾ, ಪಲ್ಲವಿ , ಶ್ಯಾಮಲಾ, ಮತ್ತು ವಂದನಾ ಇವರುಗಳು ಪ್ರಶಿಕ್ಷಣಾರ್ಥಿಗಳಿಗೆ ಉಚಿತ ತರಬೇತಿ ನೀಡುವಲ್ಲಿ ನೆರವಾಗುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಮಹಿಳೆಯರಿಗಾಗಿ ಹಲವಾರು ತರಭೇತಿಗಳನ್ನು ಪ್ರಾರಂಭಿಸುವುದಾಗಿ ಇದೇ ಸಂಧರ್ಭದಲ್ಲಿ ಉಪಾದ್ಯಕ್ಷೆ ಲಲಿತನಾಯಕ ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಕ್ರಿಯ ಸದ್ಯಸರಾದ ಪರಿಮಳ, ಶೋಭ,ಲಕ್ಷ್ಮಿ ,ರಂಗಮ್ಮ, ಚೆನ್ನಮ್ಮ, ಪೂಜಾ ಇತರರಿದ್ದರು.