2gvt1

ಅಂಜನಾದ್ರಿ ಅಭಿವೃದ್ದಿಗೆ-240ಕೋಟಿ ಮಂಜೂರು
ಮಾ11-12ರಂದು ಆನೆಗೊಂದಿ ಉತ್ಸವ

ಕರುನಾಡ ಬೆಳಗು ಸುದ್ದಿ

ಗಂಗಾವತಿ,2- ತಾಲೂಕಿನ ಅಂಜನಾದ್ರಿ ಅಭಿವೃದ್ದಿಗಾಗಿ ೨೪೦ ಕೋಟಿ ಮಂಜೂರುರಾಗಿದೆ ಎಂದು ಶಾಸಕ ಗಾಲಿ ಜರ್ನಾಧನ ರೆಡ್ಡಿ ಹೇಳಿದರು.

ಅವರು -ನಗರದ ನಗರಸಭೆಯ ಶಾಸಕರ ಕಾರ್ಯಾಲಯದಲ್ಲಿ ಸುದ್ದಿಗೋಷ್ಠೀ ಉದ್ದೇಶಿಸಿ ಮಾತನಾಡಿ ಮಾರ್ಚ ೧೧ಮತ್ತು ೧೨ರಂದು ಆನೆಗೊಂದಿ ಉತ್ಸವ ನಡೆಸಲಾಗುವುದು. ಉತ್ಸವದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವೇರಿಸುವರು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಆಗಮಿಸುವರು, ಚಲನಚಿತ್ರ ಚಿತ್ರ ನಟ ಧ್ರುವ ಸರ್ಜಾ, ಖಾತ್ಯ ಕಲಾವಿದ ಸಂಗಿತ ನಿರ್ದೇಶಕ ಹಂಸಲೇಖ ತಂಡ, ಅರ್ಜುನಜನ್ಯ ಮುಂತಾದವರು ಆಗಮಿಸುವರು. ಸ್ಥಳಿಯ ಕಲಾವಿದರಿಗೆ ಆದ್ಯೆ ನೀಡಲಾಗುವುದು ಎಂದು ತಿಳಿಸಿದರು.

ಆನೆಗೊಂದಿ ಉತ್ಸವಕ್ಕೆ 5ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು ಈಗಾಗಲೇ 2ಕೋಟಿ 50ಲಕ್ಷ ಮಂಜೂರಾಗಿದೆ. 240ಕೋಟಿ ಅಂಜನಾದ್ರಿ ಅಭಿವೃದ್ದಿ- ಕಳೇದ ಬಿಜೆಪಿ ಸರಕಾರದಲ್ಲಿ ಮಂಜೂರಾದ 100ಕೋಟಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ
ಮಂಜೂರಾದ 100ಕೋಟಿ,ಕೆಕೆ ಆರ್ ಡಿಬಿ ಯೋಜನೆಯಡಿ 40 ಕೋಟಿ ಅನುದಾನ ಮಂಜೂರಾಗಿದ್ದು. ತಿರುಮಲಾಪೂರದಿಂದ ಗಂಗಾವತಿ ಸಾಯಿಬಾಬಾ ದೆವಸ್ಥಾನದವರೆಗೆ 2ವೇ ರಸ್ತೆ ಎರಡು ಕಡೆಗಳಲ್ಲಿ ಬಿದಿ ದೀಪ ಹಾಗೂ 67 ಎಕರೆ ಭೂ ಸ್ವಾಧೀನ ಪ್ರಕೀಯೇ, ಯಾತ್ರಿ ನಿವಾಸ ಮುಂತಾದ ಅಭಿವೃದ್ದಿ ಕಾರ್ಯ ಕೈಗೊಳ್ಳಲಾಗುವುದು ಎಂದರು.

ದೇಶದ್ರೋಹಿ ಪ್ರಕರಣ ಕ್ರಮ ಕೈಗೋಳ್ಳಿ : ವಿಧಾನ ಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರ ಮೇಲೆ ಕ್ರಮಜರುಗಿಸಿ ದೇಶದ್ರೋಹ ಮಾಡುವವರ ವಿರುದ್ದ ಕಠೀಣ ಕ್ರಮ ಕೈಗೊಳ್ಳಬೇಕು. ಬೆಂಗಳೂರಿನಲ್ಲಿ ನಡೆದ ಬಾಂಬ ಸ್ಪೋಟ ಪ್ರಕರಣದಲ್ಲಿಭಾಗಿಯಾದವರ ಮೇಲೆ ಕ್ರಮ ಜರುಗಿಸಿ ಮುಂದೆ ಹಿಗಾಗದಂತೆ ನಿಗಾವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಕೆಆರ್ ಪಿಪಿ ರಾಜ್ಯ ಮುಖಂಡ ಮನೋಹರಗೌಡ, ನಗರಸಭೆ ಸದಸ್ಯ ರಮೇಶ
ಚೌಡ್ಕಿ, ವಿರೇಶ ಬಲಕುಂದಿ, ಪಂಪಣ್ಣ ನಾಯಕ, ವಿರೇಶ ಸುಳೆಕಲ್, ಬಾಷಾ,ಸೈಯದ ಅಲಿ, ಜಿಲಾನಿ ಖಾದ್ರಿ, ದುರುಗಪ್ಪ ದಳಪತಿ, ಕೆಆರ್ ಪಿಪಿ ಮಹಿಳಾ ಘಟಕದ ರಾಜೇಶ್ವರಿ, ಚಂದ್ರಹಿರೂರ, ಯಮನೂರ ಚೌಡ್ಕಿ, ನಾಗರಾಜ ಚಳಗೇರಿ, ಕೆಆರ್‌ಪಿಪಿ ಗ್ರಾಮೀಣ ಮಂಡಲ ಅಧ್ಯಕ್ಷ ಜಬ್ಬಲಗುಡ್ಡ ವೆಂಕಟೇಶ, ರಮೇಶ ಹೋಸಮಲಿ, ಸೈಯದ ಮಿರಾ, ಜುಬೇರ ಮುಂತಾದವರು ಉಪಸ್ಥೀತರಿದ್ದರು.

Leave a Reply

Your email address will not be published. Required fields are marked *

error: Content is protected !!