
ಮಾಜಿ ಶಾಸಕ ಎಂಎಸ್ ಸೋಮಲಿಂಗಪ್ಪ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಭೇಟಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 26- ಲೂಕು ಕೇಂದ್ರದ 100 ಹಾಸಿಗೆ ಗಳ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಮಾಜಿ ಶಾಸಕ ಎಂಎಸ್ ಸೋಮಲಿಂಗಪ್ಪ ತಮ್ಮ ಬೆಂಬಲಿಗರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಆಸ್ಪತ್ರೆಯ ಒಳ ರೋಗಿಗಳನ್ನು ಭೇಟಿ ಮಾಡಿ ಚಿಕಿತ್ಸೆಗಳ ಬಗ್ಗೆ ವಿಚಾರಿಸಿದ ಅವರು ಸಾರ್ವಜನಿಕರಿಂದ ಅನೇಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ರೋಗಿಗಳಿಗೆ ಚಿಕಿತ್ಸೆಯಲ್ಲಿ ಆಗುತ್ತಿರುವ ಕುಂದುಕೊರತೆ ಸಾರ್ವಜನಿಕರಿಗೆ ಸರಿಯಾಗಿ ಆಂಬುಲೆನ್ಸ್ ಸೌಲಭ್ಯ ಸಿಗದಿರುವುದು ಉಚಿತ ಎಲ್ಲಾ ಔಷಧಿಗಳು ಲಭ್ಯವಿಲ್ಲದಿರುವುದು ಪದೇಪದೇ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವದು ಇದರ ಬಗ್ಗೆ ತಾಲೂಕ ಆರೋಗ್ಯ ವೈದ್ಯಾಧಿಕಾರಿಗಳಾದ ಡಾ ಬಿ ಈರಣ್ಣ ರೊಡನೆ ಸಮಾಲೋಚನೆ ನಡೆಸಿದರು ತಾಲೂಕಿನ ಅನೇಕ ಕಡೆ ವಾಂತಿ ಭೇದಿ ಪ್ರಕರಣಗಳ ಮಾಹಿತಿ ಬರುತ್ತಿದೆ ಕಾರಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಯಾವುದೇ ತೊಂದರೆ ಆಗದಂತೆ ಎಲ್ಲಾ ವೈದ್ಯರು ಸಿಬ್ಬಂದಿಯರು ಸೇವೆ ನೀಡುವ ಸೂಕ್ತ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ಆಸ್ಪತ್ರೆಯ ಮುಖ್ಯಸ್ಥರಾದ ಆರೋಗ್ಯ ಅಧಿಕಾರಿ ಡಾ ಗುರುನಾಥ ಅವರು ಇದ್ದರು ಬಿಜೆಪಿ ತಾಲೂಕ ಅಧ್ಯಕ್ಷ ಹೆಚ್ಎಂ ಮಲ್ಲಿಕಾರ್ಜುನ ಸ್ವಾಮಿ ಬೆಳಗಲ್ ಬಸವನಗೌಡ ಮೇಕೆಲಿ ವೀರೇಶ ನಗರಸಭಾ ಸದಸ್ಯರಾದ ರಾಮಕೃಷ್ಣ ಮೋಹನ್ ರೆಡ್ಡಿ ಮಹಾದೇವ ವಿಕ್ರಂ ಜೈನ್ ನಟರಾಜ ಮುಖಂಡರಾದ ಗಂಗಾಧರ ಹೆಚ್ ಬಿ ಗಂಗಪ್ಪ ಇದ್ದರು.