IMG-20240626-WA0086

ಮಾದಕ ವಸ್ತುಗಳ ಸೇವನೆಯಿಂದ ದೇಶದ ಬೆಳವಣಿಗೆ ಕುಂಠಿತ : ಜಯಪ್ರಕಾಶ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 26- ಮಾದಕ ವಸ್ತುಗಳು ಸೇವನೆಯಿಂದ ದೇಶದ ಬೆಳವಣಿಗೆಗೆ ಕುಂಠಿತವಾಗುತ್ತದೆ ಎಂದು ಕೊಪ್ಪಳ ನಗರ ಪೋಲಿಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಜಯಪ್ರಕಾಶ ಹೆಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧುವಾರದಂದು ಕಾಲೇಜಿನ ಐಕ್ಯೂಎಸಿ, ರೆಡ್‌ಕ್ರಾಸ್ ಘಟಕಗಳು ಹಾಗೂ ಕೊಪ್ಪಳ ನಗರ ಪೋಲಿಸ್ ಠಾಣೆಯ ಸಹಯೋಗದಲ್ಲಿ ನಡೆದ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣಿಕೆ ತಡೆಯುವ ಕುರಿತು ವಿಶೇಷ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಯುವಜನತೆ ಮಾದಕ ವಸ್ತುಗಳಿಗೆ ಬಲಿಯಾಗಬಾರದು. ಮಾದಕ ಜಾಲಕ್ಕೆ ತುತ್ತಾಬಾರದು. ಚನ್ನಾಗಿ ಓದಬೇಕು. ಕೆಟ್ಟಚಟಕ್ಕೆ ಬಲಿಯಾಗಬಾರದು. ಗಾಂಜ, ಕಡಿತ, ಅಫಿಮದಂತಹ ಕೆಟ್ಟ ಹವ್ಯಾಸಗಳಿಗೆ ಬಲಿಯಾಗಬಾರದು. ನಿಮ್ಮ ಮನೆಯಲ್ಲಿ ಮತ್ತು ಸಾಮಜದಲ್ಲಿ ಮಾದಕ ವಸ್ತಗಳ ನಿಷೇಧದ ಕುರಿತು ಜಾಗೃತಿ ಮೂಡಿಸಬೇಕು. ಕುಡಿಯುವ ವ್ಯಕ್ತಿಗಳು ಮನೆಯಲ್ಲಿ ಹೆಚ್ಚು ದೌರ್ಜನ್ಯಗಳನ್ನು ನಡೆಸುತ್ತಿದ್ದಾರೆ.

ಮಾದಕ ವಸ್ತುಗಳು ಸೇವಿಸಿದರೆ ಕ್ಯಾನ್ಸರ್ ಬರುತ್ತೆ. ಮಾದಕ ವಸ್ತುಗಳನ್ನು ಸೇವಿಸಿ ಸಂಸಾರವನ್ನೆ ಹಾಳು ಮಾಡಿಕೊಳ್ಬೇಡಿ. ಕ್ಷಣಿಕ ಸುಖಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಳ್ಳಬಾರದು. ತಂದೆ ತಾಯಿಗಳು ನಿಮ್ಮ ಮೇಲೆ ಬಹಳ ಆಸೆ ಇಟ್ಟುಕೊಂಡಿದ್ದಾರೆ. ಅವರ ಅಸೆಯನ್ನು ನಿರಾಸೆ ಮಾಡಬೇಡಿ. ಯುವಕರಿಂದ ಮಾತ್ರ ದೇಶ ಬದಲಾವಣೆ ಸಾಧ್ಯ. ಮನೆಯಲ್ಲಿ ತಂದೆ, ಅಣ್ಣ ತಮ್ಮಿಂದಿರು ರಾತ್ರಿ ತಡವಾಗಿ ಬಂದರೆ ಅದನ್ನು ನೀವು ಪ್ರಶ್ನೆ ಮಾಡಬೇಕು. ದೇಶದ ಅತ್ಯುನ್ನತ ಸ್ಥಾನಗಳಲ್ಲಿ ಮಹಿಳೆಯರೇ ಇದ್ದಾರೆ. ಆದ್ದರಿಂದ ನೀವು ಉನ್ನತ ಶಿಕ್ಷಣ ಪಡೆದು ಒಳ್ಳೆಯ ಉದ್ಯೋಗಗಳನ್ನು ಪಡೆದುಕೊಳ್ಳಿರಿ. ಹೆಣ್ಣುಮಕ್ಕಳು ಆಮಿಷಕ್ಕೆ ಒಳಗಾಗಬೇಡಿ. ನಿಮಗೆ ಸಮಸ್ಯೆಗಳು ಬಂದಾಗ ಪೊಲೀಸ್ ಇಲಾಖೆಗೆ ತಿಳಿಸಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ.ಗಣಪತಿ ಲಮಾಣಿ ಅವರು ಮಾತನಾಡಿ, ಮಹಿಳೆಯರಲ್ಲಿ ಪುರಷರನ್ನು ಬದಲಾವಣೆ ಮಾಡುವ ಮತ್ತು ಸಮಾಜ ಪರಿವರ್ತೆನೆ ಮಾಡುವ ಶಕ್ತಿಯಿದ್ದು, ನೀವು ಸಮಾಜದಲ್ಲಿರುವ ಮಾದಕ ಯಸನಿಗಳನ್ನು ಪರಿವರ್ತೆನೆ ಮಾಡಬೇಕು. ಮಾದಕ ವಸ್ತುಗಳನ್ನು ಹೆಚ್ಚು ಸೇವಿಸುವವರು ಅಪರಾಧ ಕೃತ್ಯಗಳನ್ನು ಹೆಚ್ಚಾಗಿ ಮಾಡುವುದಕ್ಕೆ ಪ್ರೇರಪಣೆಯಾಗುತ್ತದೆ.

ಈ ಸಂದರ್ಭದಲ್ಲಿ ಕೊಪ್ಪಳ ಪೋಲಿಸ್ ಇಲಾಖೆಯ ಅಧಿಕಾರಿಗಳಾದ ಉಮೇರಾ ಭಾನು, ಶ್ರೀಶೈಲರಾವ್ ಕುಲಕರ್ಣಿ, ಕಾಲೇಜಿನ ಉಪನ್ಯಾಸಕರಾದ ವಿಠೊಬ, ಡಾ ಪ್ರದೀಪ್‌ಕುಮಾರ, ಡಾ.ನರಸಿಂಹ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ವಿದ್ಯಾಥಿನಿಯರಿಗೆ ಮಾದಕ ವಸ್ತಗಳ ಕುರಿತು ಪ್ರತಿಜ್ಞನ ವಿಧಿ ಭೋಧಿಸಲಾಯಿತು. ಪೋಲಿಸ್ ಇಲಾಖೆಯ ಕರಿಬಸ್ವಪ್ಪ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!