2c136fae-be38-4577-97e1-318669006cc9 (1)

ಯುವತಿಯೊಬ್ಬರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಸ್ಥಳಾಂತರ

 ಮಾನವೀಯತೆ ಮೆರೆದ ಜಿಲ್ಲಾಡಲಿತ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 03-ಕೊಪ್ಪಳ–ಕುಷ್ಟಗಿ ರಸ್ತೆಯ ಹಟ್ಟಿ ಕ್ರಾಸ್‌ ಬಳಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದ ಯುವತಿಯೊಬ್ಬರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಸ್ಥಳಾಂತರ ಮಾಡಿ ಜಿಲ್ಲಾಡಳಿತ ಮಾನವೀಯತೆ ಮೆರೆದಿದೆ.

ಕಳೆಸ 15 ದಿನದ ಹಿಂದೆ ಡಿ. 14ರಂದು ವಾಹನವೊಂದು ಯುವತಿಗೆ ಡಿಕ್ಕಿ ಹೊಡೆದು ಹೋಗಿತ್ತು ಆಂಬುಲೆನ್ಸ್‌ ಸಿಬ್ಬಂದಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಆಸ್ಪತ್ರೆಯ ಸಿಬ್ಬಂದಿಯೇ ಕಾಳಜಿ ವಹಿಸಿ ಚಿಕಿತ್ಸೆ ನೀಡಿದ್ದರೂ ಇಲ್ಲಿಯ ವರೆಗೆ ಪ್ರಜ್ಞೆ ಬಂದಿಲ್ಲಾ.ಕೊಪ್ಪಳ ಗ್ರಾಮೀಣ ಪೊಲೀಸ್‌ ಠಾಣಾ ವ್ಯಾಪ್ತಿಯ ಸಮೀಪ ತನ್ನದು ಯಾವ ಊರು, ಯಾವ ಸ್ಥಳ, ತಮ್ಮವರು ಯಾರು ಎನ್ನುವುದನ್ನು ಹೇಳಲು ಗೊತ್ತಾಗಿರಲಿಲ್ಲ. ಯುವತಿಯ ಬಲಗಡೆ ಕಿವಿಗೆ ಮತ್ತು ಮುಖದ ಭಾಗಕ್ಕೆ ರಕ್ತಗಾಯಗಳಾಗಿರುವುದು ಕಂಡು ಬಂದಿದ್ದು, ಇದುವರೆಗೆ ಪರಿಚಿತರು ಹಾಗೂ ಸಂಬಂಧಿಕರು ಯಾರೂ ಬಂದಿಲ್ಲ. ಆದ್ದರಿಂದ ಪೊಲೀಸರು ಎಂಎಲ್‌ಸಿ ದಾಖಲಿಸಿ ಜಿಲ್ಲಾಡಳಿತ ಮುತುವರ್ಜಿ ವಹಿಸಿ ಚಿಕಿತ್ಸೆ ನೀಡುತ್ತಿದೆ.

ಚಿಕಿತ್ಸೆ ನೀಡಿದರೂ ಪ್ರಜ್ಞೆ ಬಾರದ ಕಾರಣ ಅಂತಿಮವಾಗಿ ಹೆಚ್ಚುವರಿ ಚಿಕಿತ್ಸೆಗಾಗಿ ಬೇರೆ ಕಡೆ ಸ್ಥಳಾಂತರ ಮಾಡಬೇಕಾದ ಅಗತ್ಯವಿದ್ದರೂ ಜವಾಬ್ದಾರಿ ವಹಿಸಿಕೊಳ್ಳುವವರು ಯಾರೂ ಇಲ್ಲದ ಕಾರಣಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು.ಕೊಪ್ಪಳದ ಸಖಿ ಒನ್ ಸ್ಟಾಪ್ ಕೇಂದ್ರದ ಅಡಳಿತಾಧಿಕಾರಿ ಯಮುನಾ ಬೆಸ್ತರ್ ತುರ್ತು ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿ ಯುವತಿಯ ಆರೊಗ್ಯ ವಿಚಾರಿಸಿ ಗುರುತು ಪತ್ತೆ ಮಾಡಲು ಪ್ರಯತ್ನಿಸಿದರೂ ಫಲ ನೀಡಿರಲಿಲ್ಲ. ಬಳಿಕ ಮೇಲಧಿಕಾರಿಗಳ ಸೂಚನೆಯಂತೆ ಧಾರವಾಡದ ಸಖಿ ಒನ್‌ ಕೇಂದ್ರದ ಸಿಬ್ಬಂದಿಗೆ ಮಾಹಿತಿ ನೀಡಿ ಅವರ ಸುಪರ್ದಿಗೆ ಒಪ್ಪಿಸಿದ್ದಾರೆ. ಯುವತಿಯ ಹೆಚ್ಚಿನ ಚಿಕಿತ್ಸೆಗಾಗಿ ಅಧಿಕಾರಿಗಳು ಮೂರು ದಿನಗಳ ಹಿಂದೆಯೇ ಯುವತಿಯನ್ನು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌)ಗೆ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!