
ಮುಂಡರಗಿ ಮತ್ತು ಸಂಗನಕಲ್ಲು ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,25- ಜಿಲ್ಲೆಯ ಮುಂಡರಗಿ ಮತ್ತು ಸಂಗನಕಲ್ಲು ಗ್ರಾಮಗಳಲ್ಲಿ ಮಕ್ಕಳು, ಮಹಿಳೆಯರು ಮತ್ತ ಎಲ್ಲ ವಯೋಮಾನದ ಜನರಿಗೆ ವಿಶೇಷ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತಹೀನತೆಯ ಜನಜಾಗೃತಿ ಕರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬಳ್ಳಾರಿಯ ಪಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕಚೇರಿ ಹಾಗೂ ಸೇವಾ ಮೊಬ್ ಸಹ ಭಾಗಿತ್ವದಲ್ಲಿ ಉಭಯ ಗ್ರಾಮಗಳ ಜನರಿಗೆ ಆರೋಗ್ಯದ ಮಹತ್ವದ ಕುರಿತು ತಜ್ಞವೈದ್ಯರಿಂದ ಜಾಗೃತಿ ಮೂಡಿಸಲಾಯಿತು.
ವಿಶೇಷ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತಹೀನತೆಯ ಜನಜಾಗೃತಿ ಶಿಬಿರದಲ್ಲಿ ಗ್ರಾಮಸ್ಥರಿಗೆ ಸಾಮಾನ್ಯವಾಗಿ ಬಿ.ಪಿ, ಶುಗರ್ ಹಾಗು ರಕ್ತ ತಪಾಸಣೆ ನಡೆಸಿ ಸ್ಥಳದಲ್ಲಿಯೇ ಉಚಿತ ಮಾತ್ರೆಗಳನ್ನು ವಿತರಿಸಲಾಯಿತು.
ಜಿಲ್ಲೆಯಲ್ಲಿ ರಕ್ತಹೀನತೆ ಬಳಲುವರರ ಸಂಖ್ಯೆ ಇದ್ದುದನ್ನು ಗಮನಿಸಿ, ಈ ಕುರಿತು ಹೆಚ್ಚು ಹೆಚ್ಚು ಪೌಷ್ಠಿಕ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಯೋಗ ಮತ್ತು ಪ್ರಾಣಾಯಮ ಮಾಡುವಂತೆ ಗ್ರಾಮಗಳ ಜನರಿಗೆ ಸಲಹೆಗಳನ್ನು ನೀಡಲಾಯಿತು.
ಈ ಶಿಬಿರದಲ್ಲಿ ಆಯಾ ಗ್ರಾಮದ 200ಕೂ ಹೆಚ್ಚು ಜನರು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.
ಈ ಶಿಬಿರದಲ್ಲಿ ಪಿನ್ ಕೇರ್ ಫೈನಾನ್ಸ್ ಬ್ಯಾಂಕಿನ ಮುಖ್ಯಸ್ಥರಾದ ಭೂಪತಿ ರೆಡ್ಡಿ, ಸುರೇಶ್ ಬಾಬು, ಪರಮೇಶ, ಬಸವರಾಜ, ಬಾಲಕೃಷ್ಣ, ಬ್ಯಾಂಕ್ ಸಿಬ್ಬಂದಿಗಳಾದ ಶಿವಾಜಿ, ಭೀಮೇಶ್ ಮತ್ತು ಮನೋಜ್ ಹಾಗೂ ಸೇವಾ ಮೊಬ್ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಗ್ರಾಮದ ಎಲ್ಲ ಸದಸ್ಯರು ಭಾಗವಹಿಸಿದ್ದರು.