WhatsApp Image 2024-03-20 at 11.16.26 AM

ಮುಧೋಳದಲ್ಲಿ ಸಿಬಿಎಸ್ಇ ಪೂರ್ವ ಪ್ರಾಥಮಿಕ ಶಾಲೆ ಪ್ರಾರಂಭ : ಚಂದ್ರು ದೇಸಾಯಿ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ,20- ತಾಲೂಕಿನ ಮುಧೋಳ ಗ್ರಾಮದಲ್ಲಿ ಇರುವ ಶ್ರೀ ತ್ರೀಲಿಂಗೇಶ್ವರ ಪ್ರೌಢಶಾಲೆ ಯಲ್ಲಿ ಪ್ರಸಕ್ತ ವರ್ಷದ ಶೈಕ್ಷಣಿಕ ಸಾಲಿನ ಸಿಬಿಎಸ್ಇ ಆಧಾರಿತ ಎಲ್ ಕೆಜಿ .ಯುಕೆಜಿ. ತರಗತಿಗಳನ್ನು ಶ್ರೀಘ್ರದಲ್ಲಿ ಪ್ರಾರಂಭಿಸಲಾಗುವದು ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುವದು ಎಂದು ಪ್ರೌಢ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಚಂದ್ರು ಹನುಮಂತರಾವ ದೇಸಾಯಿ ಹೇಳಿದರು.

ಈ ವಿಷಯ ಕುರಿತು ತಾಲೂಕಿನ ಮುಧೋಳ ಗ್ರಾಮದ ಶ್ರೀ ತ್ರಿಲಿಂಗೇಶ್ವರ ಪ್ರೌಢಶಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಪ್ರೌಢಶಾಲೆ ಪ್ರಾರಂಭವಾಗಿ 49 ವರ್ಷ ಮುಗಿದ 50 ನೇ ವರ್ಷಕ್ಕೆ ಪಾದ೯ಪಣೆ ಮಾಡುತ್ತಿದ್ದು ಇದರ ಸವಿನೆನಪಿಗಾಗಿ ಆಡಳಿತ ಮಂಡಳಿಯ ನಿಧಾ೯ರದೂಂದಿಗೆ ನ್ಯೊತನವಾಗಿ ಸಿಬಿಎಸ್ಇ ಇಂಗ್ಲಿಷ್ ಮೇಡಿಯಂ ಪೂರ್ವ ಪ್ರಾಥಮಿಕ ಶಾಲೆಯ ಪ್ರಾರಂಭಿಸುವದಕ್ಕೆ ಮುಂದಾಗಿದೆ ಈ ಹಿಂದೆ ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಸಾಕಷ್ಟು ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿ ಇದ್ದಾರೆ ತಾಲೂಕಿನಲ್ಲಿ ಪ್ರೌಢಶಾಲೆ 1975ರಲ್ಲಿ ಪ್ರಾರಂಭವಾಗಿ ಪ್ರಥಮ ಪ್ರೌಢಶಾಲೆಯಾಗಿದೆ ಮತ್ತು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವದರ ಜೊತೆಗೆ ಅನುಭವ ವುಳ ನುರಿತ ಶಿಕ್ಷಕರಿಂದ ಒಳ್ಳೆಯ ಬೋಧನೆ ನೀಡಲಾಗುವದು ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುವದು. ವಿಶಾಲವಾದ ಮೈದಾನವಿದೆ ಮಕ್ಕಳಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವದು ಎಂದು ಹೇಳಿದರು.

ನಂತರ ಆಡಳಿತ ಮಂಡಳಿಯ ಸದಸ್ಯ ಕಾರ್ಯಕ್ರಮ ಕುರಿತು ಡಾ,ಅಂದಾನಯ್ಯ ಶಾಡ್ಲಗೇರಿಮಠ ಮಾತನಾಡಿ, 2024-2025 ನೇ ಸಾಲೀನ ಶೈಕ್ಷಣಿಕ ವರ್ಷದಿಂದ ತ್ರಿಲಿಂಗೇಶ್ವರ ಪ್ರೌಢಶಾಲೆಯ ನೂತನವಾಗಿ ಸಿಬಿಎಸ್ಇ ಇಂಟ್ರನ್ಯಾಶನಲ್ ಪೂರ್ವ ಪ್ರಾಥಮಿಕ ಶಾಲೆಯನ್ನು ಮುಂಬರುವ ಮೇ ತಿಂಗಳಲ್ಲಿ ಪ್ರಾರಂಭಿಸಲಾಗುವದು ಈ ಶಾಲೆ ಪ್ರಾರಂಭಿಸುವದರಿಂದ ಸುತ್ತಮುತ್ತಲಿನ ಗ್ರಾಮಗಳಾದ ಹಿರೇಮ್ಯಾಗೇರಿ,ಸಂಕನೂರು ಶಿರಗುಂಪಿ, ಹೊಸೂರು, ಕಾತ್ರಾಳ, ಕರಮುಡಿ, ತೊಂಡಿಹಾಳ, ಬಂಡಿಹಾಳ ವಿವಿಧ ಗ್ರಾಮಗಳ ಜನತೆಯ ಮಕ್ಕಳಿಗೆ ಅನಕೂಲ ವಾಗಲಿದೆ ಮಕ್ಕಳಿಗೆ ಶಾಲಾ ವಾಹನ ವ್ಯವಸ್ಥೆ ಕಲ್ಪಿಸಿಕೊಡಲಾಗುವದು.

ಪಾಲಕರು ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಶಾಲೆಗೆ ಬೇಕಾದ ಅಗತ್ಯ ಮೂಲ ಭೂತ ಸೌಕರ್ಯಗಳು ಮತ್ತು ಸುಸಜ್ಜಿತವಾದ ಕೊಠಡಿಗಳು ಇವೆ. ಮತ್ತು ಶಿಕ್ಷಕರು ಸೇರಿದಂತೆ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಈ ಭಾಗದ ಬಡಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೂರಯಬೇಕು ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದರು ಮತ್ತು ತಾಲೂಕಿನಲ್ಲಿಯೇ ನಮ್ಮ ಶಾಲೆಯಲ್ಲಿ ಸಿಬಿಎಸ್ಇ ಶಾಲೆ ಪ್ರಾರಂಭವಾಗುವದು ಪ್ರಥಮ ಶಾಲೆಯಾಗಲಿದೆ ಎಂದರು.

ಈ  ಸಂದರ್ಭದಲ್ಲಿ ಪ್ರೌಢ ಶಾಲೆ ಆಡಳಿತ ಮಂಡಳಿಯ ಅಧ್ಯಕ್ಷ ಚಂದ್ರುಶೇಖರ ಹನಮಂತರಾವ್ ದೇಸಾಯಿ ,ಕಾರ್ಯದರ್ಶಿ ಯಲ್ಲಪ್ಪ ಹುನಗುಂದ, ಸದಸ್ಯರಾದ ವೀರಣ್ಣ ಬೆಲ್ಲದ ಇಮಾಮ ಸಾಬ ಹಿರೇಮನಿ, ವಿಶ್ವನಾಥ ಕಮತರ್, ಈಶಪ್ಪ ಜೀವೋಜಿ, ನಿಂಗಪ್ಪ ಹುನಗುಂದ, ಕಳಕಪ್ಪ ಕುರಿ,ಶರಣಪ್ಪ ಪುರ್ತಗೇರಿ ವೀರನಗೌಡ ಗೌಡರ ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!