ಮುರ್ಲಾಪೂರ

ಪುರಾಣ ಮಹಾಮಂಗಳೋತ್ಸವ ಹಾಗೂ ಜಂಗಮೋತ್ಸವ

ಕರುನಾಡ ಬೆಳಗು ಸುದ್ದಿ
ಕೊಪ್ಪಳ,೦೭- ಕೊಪ್ಪಳ ತಾಲೂಕಿನ ಮುರ್ಲಾಪೂರದಲ್ಲಿ ೧೩೩ ನೇ ಶ್ರೀದೇವಿ ಪುರಾಣ ಮಹಾಮಂಗಲೋತ್ಸವ ಹಾಗೂ ಜಂಗಮೋತ್ಸವ ಕಾರ್ಯಕ್ರಮವನ್ನು ಬುಧವಾರ ೦೮.೧೧.೨೦೨೩ ರಂದು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ ೮ ಗಂಟೆಗೆ ಮುಂಡರಗಿಯ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳವರ ಅಡ್ಡಪಲ್ಲಕ್ಕಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ ೧:೦೦ಗಂಟೆಗೆ ಧರ್ಮಸಭೆಯನ್ನು ಹಮ್ಮಿಕೊಳ್ಳಲಾಗಿದೆ. ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು, ಘಟ್ಟಿರೆಡ್ಡಿಹಾಳದ ವೇದಮೂರ್ತಿ ಪಂಚಾಕ್ಷರಯ್ಯ ಹಿರೇಮಠ, ಮುರ್ಲಾಪೂರದ ಟಿ.ಜಿ. ಹಿರೇಮಠ ದಿವ್ಯಸಾನಿಧ್ಯ ವಹಿಸಲಿದ್ದಾರೆ.
ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಉಪನ್ಯಾಸ ನೀಡಲಿದ್ದಾರೆ. ಕೊಪ್ಪಳದ ಶಾಸಕರಾದ ರಾಘವೇಂದ್ರ ಹಿಟ್ನಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದರಾದ ಸಂಗಣ್ಣ ಕರಡಿ, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ. ವಿ. ಚಂದ್ರಶೇಖರ, ಹಿರಿಯ ರಾಜಕಾರಣಿಯಾದ ಪ್ರದೀಪಗೌಡ ಮಾಲಿ ಪಾಟೀಲ, ಪ್ರಥಮ ದರ್ಜೆ ಗುತ್ತಿಗೆದಾರರಾದ ಸುರೇಶ ಭೂಮರೆಡ್ಡಿ, ಮುಂಡರಗಿಯ ಭುವನೇಶ್ವರಿ ವಿದ್ಯಾವರ್ಧಕ ಸಮಿತಿ ಅಧ್ಯಕ್ಷರಾದ ಸಿ.ಬಿ. ಚನ್ನಳ್ಳಿ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ಎಸ್. ಬಿ .ನಾಗರಹಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮಹಾಂತೇಶ ಪಾಟೀಲ, ಕುರುಬರ ಸಮಾಜದ ಕೊಪ್ಪಳ ತಾಲೂಕ ಉಪಾಧ್ಯಕ್ಷರಾದ ಭರಮಪ್ಪ ನಗರ, ತಾಲೂಕ ಪಂಚಾಯತ ಮಾಜಿ ಸದಸ್ಯರಾದ ಶರಣಪ್ಪಗೌಡ ಡಂಬಳ, ಸಿದ್ದಲಿಂಗಸ್ವಾಮಿ ಇನಾಮದಾರ, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾದ ಗುರುಬಸವರಾಜ ಹಳ್ಳಿಕೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವೇದಮೂರ್ತಿ ಪ್ರವೀಣ ಸ್ವಾಮಿ ಹುಲಕಂತಿಮಠ, ವೇದಮೂರ್ತಿ ಕುಮಾರಸ್ವಾಮಿ ಶಾಸ್ತಿçಗಳು ಹಿರೇಮಠ ಪುರಾಣ ಪ್ರವಚನ ಮಾಡಲಿದ್ದಾರೆ. ವೆಂಕಣ್ಣ ವರಕನಹಳ್ಳಿ ಸಂಗೀತ ಸೇವೆ ನೀಡಲಿದ್ದಾರೆ. ಮೌನೇಶ ಬಡಿಗೇರ ತಬಲಾ ಸಾಥ ನೀಡಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!