
ಮೋದಿ ಪ್ರಧಾನಿ ಆಗಲು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ : ಸಂಸದ ಸಂಗಣ್ಣ ಕರಡಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 1- ಮೋದಿ ಅವರ ಕೈ ಬಲಪಡಿಸಲು ನಾವೆಲ್ಲಾ ಶ್ರಮಿಸಬೇಕಿದೆ ನಾನು ಬಿಜೆಪಿ ಯಲ್ಲಿಯೇ ಇರ್ತೇನೆ, ಇಂದಿನಿಂದ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ನಗರದಲ್ಲಿ ಅವರ ನಿವಾಸದಲ್ಲಿ ನಾಧ್ಯಮದವರೊಂದಿಗೆ ಮಾತನಾಡಿದರು.
ನಾನು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲಾ, ಟಿಕೆಟ್ ಸಿಗದ ಹಿನ್ನೆಲೆ ಹಲವು ಸಂದಾನ ಸಭೆಗಳು, ಮಾತುಕತೆ ನಡೆದಿವೆ ಅದು ಸಹಜ, ರಾಜಕಿಯಲ್ಲಿ ಮಾತು ಕಥೆ ನಡಿತಾಯಿರ್ತಾವೆ, ಮುರಿದು ಬಿಳ್ತಾಯಿರ್ತಾವೆ, ಆದ್ರೂ ನಾವು ಒಂದು ಕಡೆ ನಿಲ್ಲಬೇಕು,ಟಿಕೆಟ್ ಮರು ಹಂಚಿಕೆಯಾಗಬೇಕು ಎಂದು ಬೇಡಿಕೆ ಇತ್ತು ಆದರೆ ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಿರುವೆ ಎಂದರು.
ರಾಜ್ಯಸಭಾ ಮೆಂಬರ್ ಹಾಗೂ ಎಮ್ ಎಲ್ಸಿ ಮಾಡುವ ಬೇಡಿಕೆ ಇತ್ತು ಈ ಹಿನ್ನೆಲೆ ಚರ್ಚೆ ಮಾಡಲಾಗಿದೆ, ಈಗ ಮತ್ತೊಮ್ಮೆ ಮಾತನಾಡ್ತಿವಿ ಅಂತ ಹೇಳಿದ್ದಾರೆ ಪಕ್ಷದ ನಾಯಕರ ಹೇಳಿಕೆ ಮೇಲೆ ವಿಶ್ವಾಸ ಮಾಡಬೇಕಿದೆ, ಎಮ್ ಎಲ್ ಸಿ ಹಾಗೂ ರಾಜ್ಯಸಬಾ ಸದಸ್ಯ ಸ್ಥಾನ ನಮ್ಮ ಡಿಮ್ಯಾಂಡ್ ಇದೆ ಅವರು ಭರವಸೆ ನೀಡಿದ್ದಾರೆ ಕಾದು ನೋಡೋಣ ಎಂದರು.
ಟಿಕೆಟ್ ಬದಲಾವಣೆ ಮಾಡೋದು ಕಷ್ಟ ಅಂತ ನಮಗೂ ಗೊತ್ತು,ಎಪ್ರಿಲ್ 2 ಕ್ಕೆ ಅಮಿತ್ ಷಾ ರಾಜ್ಯಕ್ಕೆ ಬಂದಾಗ ಸರಿ ಹೋಗಬಹುದು ಎಂಬ ನಂಬಿಕೆಯಿದೆ
ಇವತ್ತಿನಿಂದ ಬಿಜೆಪಿ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ, ಸಂಜೆ ಕುಷ್ಟಗಿಯಿಂದ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಕ್ಕೆ ಹೋಗ್ತಿನಿ,ಪಕ್ಷಕ್ಕೆ ಬೆಂಬಲಿಸುವಂತೆ ನಮ್ಮ ಬೆಂಬಲಿಗರಿಗೆ ಮನವಿ ಮಾಡ್ತಿನಿ ಎಂದರು.
ನರೇಂದ್ರ ಮೋದಿಯವರನ್ನ ನೋಡಿ ಬಿಜೆಪಿ ಅಭ್ಯರ್ಥಿ ಯನ್ನ ಬೆಂಬಲಿಸುವಂತೆ ಮನವಿ ಮಾಡುವೆ, ಸ್ಥಾನ ಮಾನ ಕೊಡೊದು ಬಿಡೋದು ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು, ಟಿಕೆಟ್ ಸಿಗದ ಹಿನ್ನೆಲೆ ನನಗೆ ಯಾವುದೆ ಅಸಮಾಧಾನ ಇಲ್ಲ, ಜನರು ಪ್ರೀತಿ ವಿಶ್ವಾಸ, ಅಧಿಕಾರ ನೀಡಿದ್ದಾರೆ ನನಗೆ ಆಶಿರ್ವಾದ ಮಾಡಿದ ಜನರಿಗೆ ಋಣಿ ಎಂದರು.