
” ಮೌಂಟ್‌ಅಬು ’’
ಭೂಮಿಯ ಮೇಲಿನ ಸ್ವರ್ಗ
ಕರುನಾಡ ಬೆಳಗು ಸುದ್ದಿ
ರಾಜಸ್ತಾನ ರಾಜ್ಯದ ಮೌಂಟ್‌ಅಬು ಇದೊಂದು ಭೂಮಿಯ ಮೇಲಿನ ಸ್ವರ್ಗ ಎಂದೇ ಹೇಳಬಹುದು ಇದು ವಿಶ್ವವಿಖ್ಯಾತವಾದ ಶಾಂತಿ ಕೇಂದ್ರ, ಗುಜರಾತ್-ರಾಜಸ್ಥಾನ ರಾಜ್ಯಗಳ ಗಡಿಯಲ್ಲಿರುವ ಇದು ಮರುಭೂಮಿ ರಾಜ್ಯವಾದ ರಾಜಸ್ಥಾನದ ಏಕೈಕ ಗಿರಿಧಾಮ. ಇಲ್ಲಿರುವ ನಿಸರ್ಗ ಸೌಂದರ್ಯತೆ ಶ್ರೀಮಂತಿಕೆಯ ರಮಣೀಯತೆ ಬದುಕಿಗೊಂದು ಮೋಹಕತೆಯನ್ನು ತಂದುಕೊಡುವAಥದು ಮೌಂಟ್‌ಅಬು.
ಇನ್ನು ಮೌಂಟ್ ಅಬು ಮಲಯ-ಮಾರುತದಂಥ ತಣ್ಣನೆಯ ಗಾಳಿ ಬೀಸುವ ಗಿರಿಧಾಮ. ಅದು ಜೈವಿಕ ಸೂಕ್ತ ವಲಯ ಗಿರಿಧಾಮವಾದರೂ ಊರು ದೊಡ್ಡದಾಗಿಯೇ ಬೆಳೆದಿದೆ. ಆದರೆ, ನಮ್ಮ ದಕ್ಷಿಣದ ತುದಿಯ ಊಟಿಯಷ್ಟು ಬೆಳೆದಿಲ್ಲ. ಊರು ತುಂಬಾ ಪ್ರಶಾಂತವಾದದು, ಉತ್ತರ ಭಾರತದ ಕಡೆಗೆ ಹೋದರೆ ದಕ್ಷಿಣದವರಿಗೆ ಸ್ವಲ್ಪ ಆಹಾರದ ಸಮಸ್ಯೆ ಕಾಡುವುದುಂಟು ಆದರೆ ನಂತರ ಎಲ್ಲಾ ಹೊಂದಿಕೊಳ್ಳುತ್ತದೆ.
ಕೊಪ್ಪಳದಿಂದ ೩೩ ಜನರ ತಂಡ ಯೋಗಿನಿ ಅಕ್ಕನವರು ಹಾಗೂ ಸ್ನೇಹ ಅಕ್ಕನವರೊಂದಿಗೆ ರಾಜಸ್ಥಾನದ ಮೌಂಟ್ ಅಬುಗೆ ಆರು ಜನ ಪತ್ರಕರ್ತರಾದ ಎಂ.ಸಾದೀಕ್‌ಅಲಿ,ಶಿವರಾಜ್ ನುಗಡೋಣಿ, ಎಚ್.ಎಸ್.ಹರೀಶ್, ಜಿ.ಎಸ್.ಗೋನಾಳ, ಹನುಮಂತ ಹಳ್ಳಿಕೇರಿ, ಮಂಜುನಾಥ ಕೋಳೂರು, ಕೊಪ್ಪಳದ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಶಿವಗಂಗಮ್ಮ ಶಿವರಡ್ಡಿ ಭೂಮಕ್ಕನವರ್, ಕಿಶೋರಿ ಬೂದನೂರ, ಶಿವಲೀಲಾ ಉತ್ತಂಗಿಮಠ, ಪದ್ಮಾವತಿ ಸೇರಿದಂತೆ ಇತರರು ಮೌಂಟ್‌ಅಬುಗೆ ಪ್ರಯಾಣಿಸಲಾಗಿತ್ತು.
ಮೌಂಟ್‌ಅಬುದಲ್ಲಿನ ಶಾಂತಿವನ ನೋಡಲು ಬಹಳ ಸುಂದರವಾದ ಶಾಂತಿ ತಾಣ ಅಲ್ಲಿನ ಪರಿಸರ ಎಂಥವರನ್ನೂ ತಟ್ಟನೇ ಮೋಡಿ ಮಾಡುತ್ತದೆ. ಶಾಂತಿವನ ಅಲ್ಲಿನ ವ್ಯವಸ್ಥೆ, ಅಲ್ಲಿರುವ ಸಿಬ್ಬಂದಿವರ್ಗ ಕಾರ್ಯನಿರ್ವಹಿಸುತ್ತಿರುವ ರೀತಿಯನ್ನು ನೋಡಿದರೆ ಎಂಥವರಿಗೂ ಆಶ್ಚರ್ಯವಾಗುತ್ತದೆ ಇನ್ನು ಅಲ್ಲಿನ ಊಟ-ಉಪಹಾರದ ವ್ಯವಸ್ಥೆ ಕೂಡ ಅಷ್ಟೆ ಅಚ್ಚುಕಟ್ಟಾಗಿದೆ ದಿನವೂ ಸಾವಿರಾರು ಜನರಿಗೆ ಶುದ್ಧ ಸಸ್ಯಾಹಾರ ಸಿದ್ದಪಡಿಸಲಾಗುತ್ತದೆ.
ಇಲ್ಲಿನ ವಿಶೇಷವೆಂದರೆ ಸೌರವಿದ್ಯುತ್ತಿನಿಂದಲೇ ಹೆಚ್ಚಿನ ಕೆಲಸಗಳೆಲ್ಲ ಆಗುತ್ತವೆ ಅಂದರೆ ನೀರು ಕಾಯಿಸುವುದು, ಅಡುಗೆ ಮಾಡುವುದು, ವಿದ್ಯುದ್ದೀಪಗಳು ಝಗಮಗಿಸುವುದು ಎಲ್ಲ! ಇಲ್ಲಿಗೆ ಬಂದ ಪ್ರಯಾಣಿಕರಿಗೆ ಯಾವ ರೀತಿಯಲ್ಲೂ ಕೊರತೆ ಬಾರದಂತೆ ಅಲ್ಲಿನ ಸೇವಾಧಾರಿಗಳ ಕಾರ್ಯವಂತೂ ಶ್ಲಾಘನೀಯ. ಶಾಂತಿವನದಲ್ಲಿರುವ ಡೈಮಂಡ್‌ಹಾಲ್, ತಪಸ್ಯಧಾಮ ಮತ್ತು ಓಂ ಆರ್ಟ್ ಗ್ಯಾಲರಿಗಳು ಆಕರ್ಷಕ, ಡೈಮಂಡ್ ಹಾಲ್‌ನಲ್ಲಿ ೨೦ ಸಾವಿರ ಜನ ಏಕಕಾಲಕ್ಕೆ ಕುಳಿತು ಕಾರ್ಯಕ್ರಮ ವೀಕ್ಷಿಸಬಹುದು.
ಹತ್ತಿರದಲ್ಲೇ ದೊಡ್ಡ ಕಾನ್ಫರೆನ್ಸ್ ಹಾಲ್ ಇದೆ. ‘ಓಂ ಆರ್ಟ್ ಗ್ಯಾಲರಿ’ ಎಂದರೆ, ಅದೊಂದು ಗೋಳಾಕಾರದ ಸುಂದರ ಆಧ್ಯಾತ್ಮಿಕ ಆಲಯ. ಇಲ್ಲಿನ ಇನ್ನೊಂದು ಆಕರ್ಷಕ ಕಟ್ಟಡವೆಂದರೆ ‘ತಪಸದೆಯ ಧಾಮ’. ಇದಿರುವುದು ಕಮಲದ ಹೂವಿನ ಆಕಾರದಲ್ಲಿ,ಸುತ್ತಲೂ ಹುಲ್ಲಿನ ಉದ್ಯಾನ ಬೇರೆ.
ಶಾಂತಿವನ ಎಂಬ ಅರ್ಥವನೇ ಕೊಡುವ ಮೌಂಟ್‌ಅಬುವಿನ ಇನ್ನೊಂದು ತಾಣವೆಂದರೆ, ಪೀಸ್ ಪಾರ್ಕ್, ಇದೊಂದು ಪ್ರಶಾಂತವಾದ ಸ್ಥಳ. ಇಲ್ಲಿ ನಿಸರ್ಗದ ಮೇಲಿರುವ ಎಲ್ಲಾ ರೀತಿಯ ಹೂ-ಗಿಡ-ಬಳ್ಳಿಗಳನ್ನು ಕಾಣಬಹುದು. ೧೨ ಎಕರೆ ವಿಶಾಲವಾದ ಜಾಗದಲ್ಲಿ ಈ ಪಾರ್ಕ್ ಮೈದಾಳಿದೆ.ಇನ್ನು ಸಿರಿಚುಯಲ್ ಮ್ಯೂಸಿಯಂನಲ್ಲಿ ಆಕರ್ಷಕವಾದ, ಬೃಹದವ್ಯ ಪ್ರತಿಮೆಗಳಿವೆ.
ಪಾರದರ್ಶಕವಾದ ದೇದೀಪ್ಯಮಾನ ಚಿತ್ರಪಟಗಳು ಇಲ್ಲಿದ್ದು, ೧೪ ನಿಮಿಷದ ಒಂದು ಲೇಜರ್ ಶೋವನ್ನು ಇಲ್ಲಿ ತೋರಿಸಲಾಗುತ್ತದೆ. ಮೌಂಟ್ ಅಬುವಿನಲ್ಲಿರುವ ಜ್ಞಾನ ಸರೋವರದಲ್ಲಿ ಅನೇಕ ವಿಭಾಗಗಳಿವೆ. ಅವುಗಳಲ್ಲಿ ಶಿಕ್ಷಣ ವಿಭಾಗ, ಸಮಾಜಸೇವಾ ವಿಭಾಗ, ಸುರಕ್ಷಾ ವಿಭಾಗ, ಕಾನೂನು ವಿಭಾಗ, ಚಿಕಿತ್ಸಾ ಕ್ಷೇತ್ರ ವಿಭಾಗ ಇತ್ಯಾದಿ ವಿಭಾಗಗಳಿವೆ. ಜ್ಞಾನ ಸರೋವರ ಎಂಬ ಹೆಸರೇ ಹೇಳುವಂತೆ ಇದೊಂದು ಸುಂದರ ತಾಣ. ಇಲ್ಲಿ ವಿಶಾಲವಾದ ಭೋಜನ ಭವನವಿದೆ. ಅಷ್ಟೇ ಅಲ್ಲದೆ ಡೈಮಂಡ್ ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮಗಳನ್ನು ೧೬ ಭಾಷೆಗಳಿಗೆ ಅನುವಾದಿಸುತ್ತಾರೆ. ಇಲ್ಲಿರುವ ಉನ್ನತ ಅಧ್ಯಯನ ಕೇಂದ್ರದಲ್ಲಿನ ಲೈಬ್ರರಿ ಮತ್ತು ಆಧ್ಯಾತ್ಮಿಕ ಅನುಸಂಧಾನ ಪ್ರಯೋಗಶಾಲೆಗಳು ತಪ್ಪಿಸಿಕೊಳ್ಳಲ್ಲದೇ ನೋಡಬೇಕಾದ ಸ್ಥಳಗಳು, ಇಲ್ಲಿರುವ ಶಾಂತಿ ಭವನವು ತಲೆಯೆತ್ತಿದ್ದು ೧೯೮೩ರಲ್ಲಿ ಇಲ್ಲಿ ಐದು ಸಾವಿರ ಜನರಿಗೆ ಆಸನಗಳ ವ್ಯವಸ್ಥೆ ಇದೆ. ಪ್ರತಿದಿನ ಎಂಟು ಸಾವಿರ ಜನ ದೇಶ-ವಿದೇಶಗಳಿಂದ ಇದನ್ನು ವೀಕ್ಷಿಸಲು ಬರುತ್ತಾರೆ.
ಬ್ರಹ್ಮ ಬಾಬಾ ಅವರ ನೆನಪಿಗೆ ಕಟ್ಟಿರುವ ಶಾಂತಿ ಸ್ತಂಭ ವಿವ್ಯವಾಗಿದ್ದು, ಸನಿಹದಲ್ಲೇ ಹಿಸ್ಟರಿ ಹಾಲ್ ಇದೆ. ಇಲ್ಲಿ ಬಾಬಾ ಅವರು ಮಾಡಿದ ಸಾಧನೆ, ಅವರ ಸಮಯಕ್ಕೆ ಕೊಡುವ ಮಹತ್ವ ಕಾರ್ಯವೈಖರಿಯ ರೀತಿಯನ್ನು ಕಾಣಬಹುದು. ಗುರುಶಿಖರದ ದರ್ಶನದ ನಂತರ ಅಲ್ಲಿ ನಮಗೆ ಕಾಣುವದೆ ನಮ್ಮ ದೇಶದ ಕೊನೆ ಗಡಿ ಪ್ರದೇಶ, ಅಂದರೆ ಪಾಕಿಸ್ತಾನ ಮತ್ತು ಭಾರತದ ನಡುವೆ ಒಂದು ರೇಖೆ ಇದೆ. ಇದಕ್ಕೆ ಇಂಡಿಯಾದ ಲಾಸ್ಟ್ ಬೌಂಡರಿ ಎಂದು ಹೇಳುತ್ತಾರೆ. ಇದನ್ನು ಕಂಡಾಗ ದೇಶ-ದೇಶಗಳ ನಡುವಿನ ಗೆರೆಗಳು ಎಷ್ಟೊಂದು ಅರ್ಥಹೀನ ಎನಿಸುತ್ತದೆ, ಏಕೆಂದರೆ, ಉದ್ಯೋಉದಕ್ಕೆ ಇರುವ ಪ್ರಕೃತಿಯ ಚೆಲುವು ನಮ್ಮನ್ನು ಆವರಿಸಿಕೊಂಡಿರುತ್ತದೆ.
ಈ ಮೌಂಟ್ ಅಬುಗೆ ದಾರಿ : ಕರ್ನಾಟಕದಿಂದ ಮೌಂಟ್‌ಅಬುವಿಗೆ ಹೋಗುವುದು ಕಷ್ಟವೇನಿಲ್ಲ. ಅದರ ಸನಿಹಕ್ಕೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ,ಕೊಪ್ಪಳ, ದಾವಣಗೆರೆ, ತಿಪಟೂರು, ಅರಸೀಕೆರೆ, ಘಟಪ್ರಭಾ, ಲೋಂಡಾ, ಕುಡಚಿ, ಹಾವೇರಿ, ಧಾರವಾಡಗಳಿಂದೆಲ್ಲ ಸಾಕಷ್ಟು ರೈಲುಗಳಿವೆ. ನಮ್ಮ ರಾಜ್ಯದಿಂದ ಅಹಮದಾಬಾದ್, ಪಾಲಂಪುರ್, ಜೈಪುರ, ಅಜ್ಜರ್, ಜೋಧಪುರ ಮುಂತಾದ ಕಡೆಗಳಿಗೆ ಹೋಗುವ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲುಗಳೆಲ್ಲ ಮೌಂಟ್ ಅಬುವಿನ ಅಂಚೆಯೇ ಹೋಗುತ್ತವೆ. ಕೊಪ್ಪಳ ರೈಲನ್ನೇರಿದರೆ ೨೮-೩೦ ಗಂಟೆಗಳ ಕಾಲ ಪ್ರಯಾಣವಾಗುತ್ತದೆ. ಟಿಕೆಟ್ ದರವೂ ತುಂಬಾ ದುಬಾರಿಯೇನಲ್ಲ, ಅದು ಕೈಗೆಟುಕುವ ಹಾಗೆಯೇ ಇದೆ.
ಮೌಂಟ್ ಅಬುಗೆ ಈ ಊರಿನ ಸುತ್ತಮುತ್ತ ಇರುವ ಸ್ಥಳಗಳನ್ನು ನೋಡಲು ಎರಡು ದಿನವಾದರೂ ಬೇಕಾಗುತ್ತದೆ. ಈ ಊರುನ್ನು ನೋಡಿದ ಮೇಲೆ ಹಾಗೆಯೇ ಉತ್ತರಕ್ಕೆ ಹೋದರೆ ಚಿತ್ತೂರ್‌ಗಢ, ಉದಯಪುರ, ಆತ್ಮೀರ್, ಪುಷ್ಕರ, ಜೋಥ್‌ಪುರ, ಜೈಸಲ್ಮೇರ್, ಭರತ್‌ಪುರಗಳನ್ನೆಲ್ಲ ನೋಡಬಹುದು.
೨೦೨೩ರ ವರ್ಷ ಸುಂದರವಾದ ನೆನಪಿಡುವ ವರ್ಷ ಎಂದೇ ಹೇಳಬಹುದು, ಪ್ರತಿಯೊಬ್ಬರು ಜೀವಮಾನದಲ್ಲಿ ಒಮ್ಮೆಯಾದರೂ ಭೂಮಿ ಮೇಲಿನ ಸ್ವರ್ಗ ಮೌಂಟ್‌ಅಬುಗೆ ಹೋಗಿ ಜೀವನ ಪಾವನ ಮಾಡಿಕೊಳ್ಳಿ ಓಂ ಶಾಂತಿ.