
ಯೋಗ ದಿಂದ ಮಾನಸಿಕ ನೆಮ್ಮದಿ – ಶ್ರೀಕಾಂತಗೌಡ ಮಾಲಿ ಪಾಟೀಲ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ ,8 – ಪ್ರತಿಯೊಬ್ಬರು ದಿನನಿತ್ಯ ಯೋಗಾಭ್ಯಾಸ ಮಾಡುವದರಿಂದ ಆರೋಗ್ಯ ವೈದಿಯಾಗುತ್ತದೆ. ಮತ್ತು ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎಂದು ಯುವ ಮುಖಂಡ ಶ್ರೀಕಾಂತಗೌಡ ಮಾಲಿ ಪಾಟೀಲ ಹೇಳಿದರು .
ಮನುಷ್ಯನ ಇಂದಿನ ಒತ್ತಡ ಬದುಕಿನಲ್ಲಿ ಯೋಗವು ದೇಹ, ಮನಸ್ಸು ಮತ್ತು ಆತ್ಮದ ಏಕತೆಗೆ ಸಹಕಾರಿಯಾಗಿದೆ. ಈ ಪುರಾತನ ವಿಜ್ಞಾನ ಪದ್ಧತಿಯು ಕೇವಲ ವ್ಯಕ್ತಿಗಳ ಮೇಲೆ ಕೇಂದ್ರೀಕರಿಸುವುದಿಲ್ಲ, ಆದರೆ ಇಡೀ ಮನುಕುಲದ ಯೋಗ ಕ್ಷೇಮಕ್ಕೆ ಒತ್ತು ನೀಡುತ್ತದೆ ಎಂದು ಪ್ರಾಸ್ತಾವಿಕವಾಗಿ ಪತ್ರಕರ್ತ ಶ್ರೀಕಾಂತಗೌಡ ಮಾಲಿ ಪಾಟೀಲ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಹಾಗೂ ಸರಕಾರಿ ಆಯುರ್ವೇದಿಕ ಚಿಕಿತ್ಸಾಲಯ ಆರೋಗ್ಯ ಕ್ಷೇಮ ಕೇಂದ್ರ ಬಂಡಿ ಹಾಗೂ ನಿಸರ್ಗ ಗ್ರಾಮೀಣಾಭಿವೃದ್ದಿ ಮತ್ತು ಶಿಕ್ಷಣ ಸಂಸ್ಥೆ ಕೋಳಿಹಾಳ ಇವರುಗಳ ಸಹಯೋಗದಲ್ಲಿ ಪರಿಶಿಷ್ಟ ವರ್ಗ ವಿಶೇಷ ಘಟಕ ಯೋಜನೆಯಡಿಯಲ್ಲಿ ಪ್ರಾಯೋಜೀತ ಸಾಂಸ್ಕೃತಿ ಸಮೂಹ ಯೋಗ ನೃತ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಯೋಗವು ಒಂದೇ ಒಂದು ವಿಶೇಷ ದಿನ ಅಥವಾ ಸಂದರ್ಭಕ್ಕಾಗಿ ಅಲ್ಲ, ಆದರೆ ಜನರ ದೈನಂದಿನ ಜೀವನದ ಅವಿಭಾಜ್ಯ ಅಂಶವಾಗಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಕ್ಷಣಾ ವೇದೀಕೆ ಸ್ವಾಭಿಮಾನಿ ಸಂಘದ ಅಧ್ಯಕ್ಷ ಮಾಹಂತೇಶ ಶೆಟ್ಟರ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ ಆಸನಗಳನ್ನ ಅಭ್ಯಾಸ ಮಾಡುವದರಿಂದ ಮತ್ತು ಧ್ಯಾನದೊಂದಿಗೆ ಪೂರಕವಾಗಿ ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ ಮಾನಸಿಕ ನೆಮ್ಮದಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಜೊತೆಗೆ ನಿಮ್ಮ ನೃತ್ಯ ವೃತ್ತಿ ಜೀವನದ ಮೂಲಕ ನಿಮ್ಮನ್ನು ಪ್ರೇರೇಪಿಸುತ್ತದೆ ನೃತ್ಯಗಾರರು ತಮ್ಮದೇ ಆದ ಪ್ರದರ್ಶನಗಳನ್ನು ಆನಂದಿಸಲು ಕಲಿತಾಗ ಅವರು ತಮ್ಮ ಕಲೆಯನ್ನು ಸಂಪೂರ್ಣ ಹೊಸ ಮಟ್ಟಕ್ಕೆ ಕೊಂಡೊಯ್ಯಬಹುದು ನಿಮ್ಮ ದಿನಚರಿಯಲ್ಲಿ ನೀವೂ ಯೋಗವನ್ನು ಸಂಯೋಜಿಸಿದಾಗಶನೀವು ವ್ಯತ್ಯಾಸವನ್ನು ಅನುಭವಿಸ ಬಹುದು ಮತ್ತು ಆನಂದಿಸ ಬಹುದು ಮತ್ತು ನಿಮ್ಮ ಮೆಚ್ಚುಗೆಯ ಪ್ರೇಕ್ಷಕರು ಸಹ ಯೋಗಾಭ್ಯಾಸವು ದೇಹ ಮತ್ತು ಮನಸ್ಸನ್ನು ಅಭಿವೃದ್ದಿ ಪಡಿಸಲು ಸಹಾಯ ಮಾಡುತ್ತದೆ ಅನೇಕ ಆರೋಗ್ಯ ಪ್ರಯೋಜನೆಗಳನ್ನ ತರುತ್ತದೆ ಎಂದು ಹೇಳಿದರು ನಂತರ ಕಲಾವಿದ ಲೋಕೇಶ ಲಮಾಣಿ ಹಾಗೂ ಸಂಗಡಿಗರಿಂದ ಸಾಂಸ್ಕೃತಿ ಸಮೂಹ ಯೋಗನೃತ್ಯ ಕಾರ್ಯಕ್ರಮ ಸುಂದರವಾಗಿ ಮೂಡಿ ಬಂತು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಕಾಮಣ್ಣ ಹೋರಪೇಟೆ ಗ್ರಾಮ ಪಂಚಾಯತ ಸದಸ್ಯ ಶರಣಪ್ಪಅಂಗಡಿ, ಸಹಕಾರಿ ಸಂಘದ ಉಪಾಧ್ಯಕ್ಷ ಶರಣಪ್ಪ ರೊಟ್ಟಿ, ಯುವ ಮುಖಂಡ ಶರಣಪ್ಪ ಭದ್ರಗೌಡ್ರ, ಬಸವರಾಜ ಲಿಂಗಶೆಟ್ಟರ,ಬಸವರಾಜ ಜಿಗಳೂರು ಶಿವಶರಣಪ್ಪ ಕಾಡಪ್ಪನವರ,ಯೋಗ ಸೂಚಕ ಮಂಜುನಾಥ ಜಗತಾಪ,ಕೃಷ್ಣ ತಾಟಪ್ಪ ನವರ,ಯಮನೂರ ರಾಠೋಡ ಸೇರಿದಂತೆ ಮತ್ತು ಇತರರು ಭಾಗವಹಿಸಿದರು.