
ಯೋಗದಿಂದ ರೋಗ ದೂರ
ಶ್ರೀ ಸಿದ್ದರಾಮೇಶ್ವರ ಶ್ರೀಗಳು
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 2 ಪ್ರತಿಯೊಬ್ಬರು ಯೋಗಾಭ್ಯಾಸ ಮಾಡುವದರಿಂದ ರೋಗಗಳು ದೊರವಾಗುತ್ತವೆ ಇಂದಿನ ಕಾಲದಲ್ಲಿ ಮನುಷ್ಯನ ಒತ್ತಡ ಜೀವನದಲ್ಲಿ ಹಲವಾರು ರೋಗಗಳು ಬರುತ್ತವೆ ಅದಕ್ಕೆ ಪ್ರತಿನಿತ್ಯ ಯೋಗ ಮಾಡಬೇಕು ಎಂದು ಸಂಸ್ಥಾನ ಹಿರೇಮಠದ ಷ. ಬ್ರ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಬೇವೂರು ರಸ್ತೆಯಲ್ಲಿ ಬರುವ ಸಂಗಣ್ಣ ಟೆಂಗಿನಕಾಯಿ ಅವರ ಧ್ಯಾನ ಯೋಗ ಮಂದಿರ ಮತ್ತು ಸಾಯಿ ಪ್ಯಾಲೇಸ್ ಭಾಗ, 2 ಉದ್ಘಾಟನಾ ಸಮಾರಂಭ. ಮತ್ತು ಪೂಜ್ಯ ಶ್ರೀ ಚಿಕೇನಕೋಪ ಶಿವಶಾಂತವೀರ ಶರಣರು ಬಳಗಾನೂರ. ಶರಣರಮಠ.ಇವರಿಗೆ ತುಲಾಭಾರ ಮಹೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು ಯೋಗ ಹುಟ್ಟಿರುವದು ನಮ್ಮ ದೇಶದಲ್ಲಿ ಈಗ ಎಲ್ಲಾ ಕಡೆ ಅದರ ಮಹತ್ವ ಸಾರ್ವಜನಿಕರಿಗೆ ಪ್ರಚಲಿತವಾಗುತ್ತಿದೆ. ಯೋಗದಲ್ಲಿ ಪ್ರಾಣಾಯಾಮ ಮತ್ತು ಇನ್ನೂ ಹಲವಾರು ಆಸನಗಳಿವೆ ಪ್ರತಿ ನಿತ್ಯ ಯೋಗಾಭ್ಯಾಸ ಮಾಡುವದರಿಂದ ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ. ಹಲವಾರು ರೋಗಗಳು ದೂರವಾಗುವದರ ಜೊತೆಗೆ ಮಾನಸಿಕ ಒತ್ತಡ ಸ್ವಲ್ಪ ಕಡಿಮೆ ಯಾಗುತ್ತದೆ.
ನಮ್ಮ ತಾಲೂಕಿನಲ್ಲಿ ಸಂಗಣ್ಣ ಟೆಂಗಿನಕಾಯಿ ಅವರು ತಾಲೂಕಿನ ಜನರು ಆರೋಗ್ಯ ಆಯ್ಯುಷ ಪ್ರಾಪ್ತಿಯಾಗಬೇಕು ಎನ್ನುವ ಉದ್ದೇಶದಿಂದ ಈ ಧ್ಯಾನ ಯೋಗ ಮಂದಿರ ನಿರ್ಮಾಣ ಮಾಡಿದ್ದಾರೆ ಈಗಿನ ಕಾಲದಲ್ಲಿ ರೆಸ್ಟೋರೆಂಟ್. ಮನಿ. ಇನ್ನಿತರ ಕಟ್ಟಡಗಳು ನಿರ್ಮಾಣ ಮಾಡುತ್ತಾರೆ ಅಂತಹ ಸಂದರ್ಭದಲ್ಲಿ ಇಂತಹ ಒಳ್ಳೆಯ ಧ್ಯಾನ ಯೋಗ ಮಂದಿರ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಉಭಯ ಶ್ರೀಗಳಾದ 108ಷ.ಬ್ರ.ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಭೂ ಕೈಲಾಸ ಮೇಲುಗದುಗೆ ಇಟಗಿ-ಚಿಕ್ಕಮ್ಯಾಗೇರಿ. ಪರಮ್ಮಪೂಜ್ಯ ಶ್ರೀ ಚಿಕೇನಕೋಪ ಶಿವಶಾಂತವೀರ ಶರಣರು ಶ್ರೀ ಶರಣರಮಠ ಬಳಗಾನೂರ. ಪರಮ್ಮಪೂಜ್ಯ ಶ್ರೀ ನಿರಂಜನ ಮಹಾಸ್ವಾಮಿಗಳು ಹಿಮಾಲಯ ಧ್ಯಾನ ಯೋಗಿ ಕುಕನೂರು. ಇವರು ದಿವ್ಯ ಸಾನಿಧ್ಯವಹಿಸಿ ಆಶಿ೯ವಚನ ನೀಡಿದರು.
ನಂತರ ಚಿಕೇನಕೋಪ ಶಿವಶಾಂತವೀರ ಶ್ರೀಗಳಿಗೆ ತುಲಾಭಾರ ಸೇವೆ ನೇರವೇರಿತ್ತು ತುಲಾಭಾರ ಸೇವೆ ಸ್ವೀಕರಿಸಿ ಆಶಿ೯ವಚನ ನೀಡಿ ಮಾತನಾಡಿದ ಅವರು
ತೆಂಗಿನಕಾಯಿ ಬಂಧುಗಳು ಗುರುಲಿಂಗ ಜಂಗಮರಲ್ಲಿ ಬಲ್ಲಿದರಲ್ಲಿ ಒಬ್ಬರು ಸಹೃದಯತೆಯಿಂದ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ ಇಂತಹ ವಿಶಾಲ ಮನೋಭಾವನೆ ಅವಶ್ಯವಾಗಿ ಬೇಕು ತೆಂಗಿನಕಾಯಿ ಮನೆತನ ಸಂಸ್ಕಾರ ಸಂಸ್ಕೃತಿ ಶರಣ ಪರಂಪರೆಗೆ ತನ್ನದೇ ಆಗಿರತಕ್ಕಂತಹ ವಿಶೇಷ ಅರ್ಥವನ್ನು ಕೊಟ್ಟವರು ಆ ಪರಂಪರೆಯಲ್ಲಿ ಬೆಳೆದು ಬಂದವರು ಇದಕ್ಕೆಲ್ಲ ಗುರುಗಳ ಹಿರಿಯರ ಆಶೀರ್ವಾದ ತಾಯಿ ಅನುಪೂರ್ಣಮ್ಮ ತಂದೆ ಶಂಕರಪ್ಪನವರು ಆಶಿರ್ವಾದ ಮತ್ತು ಎಲ್ಲಾ ಹಿರಿಯರ ಕೃಪೆಯಿಂದ ಇವತ್ತು ಸಂಗಣ್ಣನವರ ಸಹೋದರರಾಗಲಿ ಮಕ್ಕಳಾಗಲಿ ಆ ನೆರಳಲ್ಲಿ ಬಾಳುವಂತ ಕಾರ್ಯವನ್ನು ಮಾಡಿದ್ದಾರೆ.
ಹಿರಿಯರೇ ನೆರಳಿನಲ್ಲಿ ಹಿರಿಯರ ಆಶ್ರಯದಲ್ಲಿ ಯಾವತ್ತೂ ಬೆಳಿತಾನೆ ಅವನು ದೊಡ್ಡವನಾಗುತ್ತಾನೆ ಈ ಪ್ರಸಂಗದಲ್ಲಿ ಹೇಳಿ ಇವತ್ತು ಈ ಮಹಾನಗರದಲ್ಲಿ ಸುಮಾರು ವಿಧಾಯಕವಾಗಿರತಕ್ಕಂತಹ ಕಾರ್ಯಗಳನ್ನು ಮಾಡಿದ್ದಾರೆ ಅವರಿಗೆ ಅವರ ಮನೆತನಕ್ಕೆ ಪರಮಪೂತರು ಚೆನ್ನವೀರ ಶರಣರ ಕೃಪೆ ಕೊಪ್ಪಳದ ಗವಿಸಿದ್ದೇಶ ಕೃಪೆ ಸದಾ ಇರಲಿ ಎಂದು ಹಾರೈಸಿ ಇಂತಹ ಸಂದರ್ಭದಲ್ಲಿ ಈ ತುಲಾಭಾರತ ಹಣ ಎಲ್ಲಿಗೆ ಸಲ್ಲುತ್ತದೆ ಅಂತಂದ್ರೆ ನಮ್ಮ ಹುಬ್ಬಳ್ಳಿಯಲ್ಲಿ ಅಂದರ ಕಲ್ಯಾಣಾಶ್ರಮ ಅನ್ನುವಂಥ ಸಂಸ್ಥೆ ಇದೆ ಸುಮಾರು 50 60 ಜನ ನನ್ನ ಮಕ್ಕಳು ಶಿಕ್ಷಣವನ್ನ ಪಡಿತಾರೆ ಆಶ್ರಯವನ್ನು ಪಡಿತಾರೆ ಅಂತಹ ಮಕ್ಕಳ ಶಿಕ್ಷಣಕ್ಕಾಗಿ ಅವರ ದಾಸೋಹಕ್ಕಾಗಿ ಎಂತಹ ಮಾದರಿಯ ಆಶ್ರಮಗಳಿಗೆ ತಮ್ಮದೇ ಆಗಿರತಕ್ಕಂತಹ ಸೇವೆಯನ್ನು ಸಂಗಣ್ಣ ಅವರು ನೀಡುತ್ತಾ ಬಂದಿದ್ದಾರೆ.
ಆತನ ನಮಗೆ ಆದಾನ ನೂರು ಮಡಿಯಾಗಿ ನಮಗೆ ಸಹಕಾರವನ್ನು ಫಲವನ್ನು ಕೊಡುತ್ತದೆ ಹಿಂದಿನ ಕಾಲದಲ್ಲಿ ಒಂದು ಊರಿಂದ ಒಂದು ಊರಿಗೆ ಹೋಗಬೇಕಾದರೆ ಅನಾಥ ಮಕ್ಕಳ ಶಿಕ್ಷಣ ಬದುಕಿಗೆ ಚೇತನವಾಗಿ ರಕ್ಷಣೆಯನ್ನು ನೀಡುತ್ತದೆ ಎನ್ನುವ ತನ್ನ ಹೇಳುತ್ತಾ ನಮ್ಮ ಸಂಸ್ಥೆಯಲ್ಲಿ ಸುಮಾರು 8ರಿಂದ 10 ಜನರು ಕೆ.ಎಸ್ ಪಾಸಾಗಿ ಸರಕಾರಿ ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಅಂದು ವಿದ್ಯಾರ್ಥಿಗಳು ಕಷ್ಟ ಪಟ್ಟು ವಿದ್ಯಾಭ್ಯಾಸ ಮಾಡಿ ವಿದ್ಯಾರ್ಥಿಗಳು ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಅಂತಹ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ ಅಂದ್ರೆ ಇಂತಹ ಸಹೃದಯ ದಾನಿಗಳಿಂದ ತುಲಾಭಾರ ಸೇವೆ ಬರುವಂತೆ ಹಣವನ್ನು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಕಾರ್ಯದಲ್ಲಿ ಸೇವೆ ಮಾಡಿರತಕ್ಕಂತ ಮಹನೀಯರಿಗೆ ಇಂತಹ ಕಾರ್ಯಕ್ರಮಕ್ಕೆ ಉಭಯ ಶ್ರೀಗಳು ಆಶೀರ್ವಾದ ಇರುತ್ತದೆ ತಾವೆಲ್ಲ ಸದ್ಭಕ್ತರು ಅವರೆಲ್ಲ ಅಭಿಮಾನಿಗಳು ಬಂಧು ಹಾರೈಸಿ ಅನ್ನುವಂಥ ಮಾತನ್ನು ಹೇಳುವುದರ ಮೂಲಕವಾಗಿ ಮಾಧ್ಯಮ ಮಿತ್ರರು ಕೂಡಾ ಈ ಕಾರ್ಯಕ್ಕೆ ಸಹಕಾರವನ್ನು ನೀಡಿದ್ದಾರೆ .
ಅವರ ಪ್ರೀತಿ .ಪ್ರೇಮ.ವಿಶ್ವಾಸ ದೊಡ್ಡದು.ಎಂದರು ತೆಂಗಿನಕಾಯಿಯವರು ಬಂಧುಗಳಿಗೆ ಅವರೆಲ್ಲರಿಗೊ ಮತ್ತು ಅವರ ಅಭಿಮಾನಿಗಳಿಗೆ ನಮ್ಮ ಶುಭ ಹಾರೈಕೆಗಳು ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ್. ಮುಖಂಡರಾದ ಬಸಲಿಂಗಪ್ಪ ಭೋತೆ.ಅಮರಪ್ಪ ಕಲಬುರ್ಗಿ. ಸಂಗಪ್ಪ ಕರೆಂಡಿ.ಶೇಖರಗೌಡ ಉಳ್ಳಾಗಡ್ಡಿ. ಅಂದಪ್ಪ ಜವಳಿ.ಬಸವರಾಜ ಕಜ್ಜಿ. ಅಮರೇಶ ಹುಬ್ಬಳ್ಳಿ.ಕೆ ಜಿ ಪಲ್ಲೇದ. ಬಿ ಎಂ ಶಿರೂರು. ಮತ್ತು ಪತಂಜಲಿ ಯೋಗ ಧ್ಯಾನ. ಶಿಬಿರದ ಕಾರಟಗಿ.ಗಂಗಾವತಿ.ಕೊಪ್ಪಳ.ಕುಷ್ಟಗಿ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಮತ್ತು ಹಿರಿಯರು. ಮಹಿಳೆಯರು ಹಾಗು ಇತರರು ಭಾಗವಹಿಸಿದರು.