
ರಸ್ತೆ ಅಪಘಾತ ಓರ್ವ ಸ್ಥಳದಲ್ಲೆ ಸಾವು
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 22- ತಾಲೂಕಿನ ಹಲಗೇರಿಯ ಕಾವೇರಿ ಪೆಟ್ರೋಲ್ ಬಂಕ್ ಬಳಿ ಅಪಘಾತ ಸ್ಥಳದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ ದಾರುಣ ಘಟನೆ ಜರುಗಿದೆ.
ಕೊಪ್ಪಳ ತಾಲೂಕಿನ ಹಲಗೇರಿಯ ಬಳಿಯಲ್ಲಿ ಸಂಬಂಧಿಕರ ಅಂತ್ಯ ಸಂಸ್ಕಾರ ಮುಗಿಸಿಕೊಂಡು ಮರಳಿ ಮನೆಗೆ ಹೋಗುತ್ತಿದ್ದ ವ್ಯಕ್ತಿ ಬಾರದ ಲೋಕಕ್ಕೆ ತೇರಳಿದ್ದಾನರೆ.
ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪದ್ದಾನೆ. ಮೃತ ವ್ಯಕ್ತಿ ಯಾಗಿದ್ದಾನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆರಾಳ್ ಗ್ರಾಮದ ನಿವಾಸಿ ರಾಜಾಸಾಭ್ ಮುಲ್ಲಾ(55) ಎನ್ನಲಾಗಿದೆ.
ಸಂಬಂಧಿಕರ ಅಂತ್ಯಕ್ರಿಯೆ ಮುಗಿಸಿಕೊಂಡು ಮರಳಿ ಊರಿಗೆ ಹೊರಟಿದ್ದ ರಾಜಾಸಾಬ್ ,ಬೈಕ್ ಸೈಡ್ ಗೆ ಹಚ್ಚಿ, ಮೂತ್ರ ವಿಸರ್ಜನೆ ಮಾಡಲು ಹೋಗಿದ್ದ ಸಮಯದಲ್ಲಿ ರಸ್ತೆ ಪಕ್ಕ ನಿಂತಿದ್ದ ರಾಜಾಸಾಬ್ ಗೆ ಡಿಕ್ಕಿ ಹೊಡೆದ್ದಾರೆ ಎನ್ನಲಾಗಿದೆ.
ಅಪಘಾತ ನಂತರ ಸ್ಥಳದಲ್ಲೇ ಬೈಕ್ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ, ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಈ ಘಟನೆ ಜರುಗಿದ್ದು ಹೆಚ್ಚಿನ ವಿವರ ಲಭ್ಯವಾಗಿಲ್ಲ.