
ರಸ್ತೆಯ ಗುಂಡಿಗೆ ತೇಪೆ ಕಾಮಗಾರಿ ಕಳಪೆ
ಕ್ರಮಕ್ಕೆ ಸಾರ್ವಜನಿಕರು ಆಗ್ರಹ
ಕರುನಾಡ ಬೆಳಗು ಸುದ್ದಿ
ಸುಭಾಶ ಮದಕಟ್ಟಿ
ಯಲಬುರ್ಗಾ, ೧೨- ಸರ್ಕಾರ ಪ್ರತಿ ವರ್ಷ ರಸ್ತೆ ಗುಂಡಿ ಮುಚ್ಚಲು ಹಾಗೂ ರಸ್ತೆ ಬದಿಯಲ್ಲಿ ಬೆಳೆದ ಗಿಡಗಂಟಿಗಳನ್ನು ತೆರವುಗೊಳಿಸಲು. ಯಲಬುರ್ಗಾ ಉಪ ವಿಭಾಗದ ಲೋಕೋಪಯೋಗಿ. ಇಲಾಖೆ ಕೋಟ್ಯಾಂತರ ಟೆಂಡರ್‌ಗಳನ್ನು ಕರೆದು ಗುತ್ತಿಗೆದಾರರಿಗೆ ನೀಡುತ್ತದೆ. ಆದರೆ, ಗುತ್ತಿಗೆದಾರರು ಕಾಟಾಚಾರಕ್ಕೆ ಎಂಬಂತೆ ಕಳಪೆ ಕಾಮಗಾರಿ ಮಾಡಿ ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿದ್ದಾರೆ.
ಯಲಬುರ್ಗಾ ತಾಲೂಕಿನ. SH. ಹಾಗೂ MDR ರಸ್ತೆಯ ಮೇಲೆ ಬಿದ್ದ ಗುಂಡಿಗಳನ್ನು ಮುಚ್ಚಲು ಹಾಗೂ ಗಿಡಗಂಟಿಗ ಳನ್ನು.ತೆರೆವಿಗಾಗಿ .ಟೆಂಡರ್ ಪಡೆದ ಗುತ್ತಿಗೆದಾರರು ಕಾಟಚಾರಕ್ಕೆ ಗುಂಡಿ ಮುಚ್ಚುವ ಕಾಮಗಾರಿ ಮಾಡಲಾಗಿದ್ದು ಕೆಲವು ಗುಂಡಿ ಮುಚ್ಚಿದ್ದಾರೆ.
ಕಳಪೆ ಡಾಂಬರ್ ಬಳಸಿ ಕಾಮಗಾರಿ ಮಾಡಿದ್ದಾರೆ. ಕಾಮಗಾರಿ ಮಾಡಿ 15 ದಿನ ಆಗಿಲ್ಲ. ತಾಲೂಕಿನ ಮುಧೋಳ ಗ್ರಾಮದ. ಸರ್ಕಾರಿ ಪ್ರೌಢಶಾಲೆ ಹತ್ತಿರದ ದೇಸಾಯಿ ಅವರ ಮನೆ ಮುಂದುಗಡೆ ಕಾಲಿನಿಂದ ತುಳಿದರೆ ರಸ್ತೆಗೆ ಹಾಕಿದ ಗುಂಡಿ ಕಿತ್ತು ಬರುತ್ತಿದೆ ರಸ್ತೆಗೆ ತೇಪೆ ಹಚ್ಚುವ ಕಾಮಗಾರಿಯನ್ನು. ಗುತ್ತಿಗೆದಾರ ಬಿಲ್ಲು ಎತ್ತುವ ಉದ್ದೇಶದಿಂದ ಕಾಟಾಚಾರಕ್ಕೆ ಕಾಮಗಾರಿಯನ್ನು ಮಾಡಿ ಬಿಲ್ ಎತ್ತುವ ಹುನ್ನಾರ ನಡೆಸಿದ್ದಾರೆ ಎಂದು ಈ ರಸ್ತೆಯ ಮೇಲೆ ದಿನಾಲೂ ಸಂಚರಿಸುವ ವಾಹನ ಚಾಲಕರು ದೂರಿದ್ದಾರೆ.ಸಂಕನೂರು. ಗ್ರಾಮದಿಂದ ಹಿಡಿದು. ಮ್ಯಾದನೇರಿ. ಗ್ರಾಮ ಹಾಗೂ. MDR. ರಸ್ತೆಯನ್ನು ವಿವಿಧ ಗ್ರಾಮಗಳಲ್ಲಿ. ರಸ್ತೆಗೆ ಬಿದ್ದ ಗುಂಡಿಗಳಿಗೆ ತೇಪೆ ಹಾಕುವ ಕಾಮಗಾರಿ ಬರದಿಂದ ನಡೆದಿದೆ ಜಿಲ್ಲಾ ಅತಿ ಮುಖ್ಯ ರಸ್ತೆ. ಹಾಗೂ ಗ್ರಾಮ ರಸ್ತೆ . ಕಳೆದ ಒಂದು ವರ್ಷಗಳ ಹಿಂದೆ ಡಾಂಬರ್ ಹಾಕಲಾಗಿದೆ.
ಕಾಮಗಾರಿ ಕಳಪೆ ಆಗಿದ್ದರಿಂದ ಗುಂಡಿಗಳು ಬಿದ್ದಿವೆ ಟಾರ್ ಕಿತ್ತು ಹೋಗಿದೆ. ಗುಂಡಿಗಳಿಗೆ ತೇಪೆ ಹಾಕುವ ಗುತ್ತಿಗೆ ಪಡೆದ SH. ರಸ್ತೆ ಹಾಗೂ. MDR ರಸ್ತೆಯನ್ನು ದುರಸ್ತಿ ಮಾಡಿ ರಸ್ತೆಯ ಬದಿಯಲ್ಲಿ ಬೆಳೆದಿರುವ ಜಾಲಿ ಗಿಡಗಳನ್ನು ತೆರವುಗೊಳಿಸಬೇಕು. ಆದರೆ, ಗುತ್ತಿಗೆದಾರರು ಸಂಪೂರ್ಣ ಕಾಮಗಾರಿಯನ್ನು ಮಾಡಿಲ್ಲ. ಈ ರಸ್ತೆಯ ಮೇಲೆ ಸುಮಾರು ಕಡೆ ರಸ್ತೆಯ ಗುಂಡಿಗಳಿಗೆ. ಡಾಂಬರ್ ಹಾಕದೆ ಹಾಗೆ ಬಿಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಇನ್ನೂ ಸುಮಾರು ಕಡೆ ರಸ್ತೆಯ ಮಧ್ಯ ಭಾಗದಲ್ಲಿ ಗಿಡ ಗಂಟೆಗಳನ್ನು ತೆಗೆಯುವ ಕೆಲಸ ಉಳಿದುಕೊಂಡಿವೆ.
ಕೆಲವೊಂದು ಕಡೆ ರಸ್ತೆಗೆ ಜಲ್ಲಿ ಕಲ್ಲು ಹಾಕಿ, ಡಾಂಬರ್ ಹಾಕಲಾಗಿದೆ. ಆದರೆ, ರಸ್ತೆಗೆ ಹಾಕಿದ ಡಾಂಬರ್ ಕೈಯಿಂದ ತೆಗೆದರೆ ಕಿತ್ತು ಹೋಗುತ್ತಿದೆ. ಇದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.ಜಿಲ್ಲಾ ಮಟ್ಟದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು , ಇತ್ತ ಕಡೆ ಗಮನಹರಿಸಿ ಕಳಪೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ, ಯಲಬುರ್ಗಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು, ಸಾರ್ವಜನಿಕರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ.