
ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು
ಕರುನಾಡ ಬೆಳಗು ಸುದ್ದಿ
ವಿಜಯನಗರ,22- ಅರ್ಹ ಮತದಾರರ ಸೇರ್ಪಡೆ ಮತ್ತು ಮತದಾರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ-2024ರನ್ವಯ ಜನವರಿ 22ರಂದು ಅಂತಿಮ ಮತದಾರ ಪಟ್ಟಿಯನ್ನು ಜಿಲ್ಲೆಯ 1234 ಮತಗಟ್ಟೆ ಕೇಂದ್ರಗಳಲ್ಲಿ ಪ್ರಚುರ ಪಡಿಸುವ ಕುರಿತಂತೆ ಜಿಲ್ಲೆಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಕಾರ ಅವರು ಜನವರಿ 22ರಂದು ಸಭೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯ ಮುಖಂಡರು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮತಗಟ್ಟೆವಾರು ಬಿಎಲ್‌ಓ ಅವರ ಮುಖಾಂತರ ಮತದಾರರ ಹೆಸರು ನೋಂದಣೆಯಾಗಿರುವ ಕುರಿತು ಹಾಗೂ ಯಾವುದೇ ತಪ್ಪುಗಳಿದ್ದರೆ ನೇರವಾಗಿ ಮತದಾರರ ನೋಂದಣಾಧಿಕಾರಿ ಕಚೇರಿಗೆ ಮಾಹಿತಿ ನೀಡಲು ತಿಳಿಸಿದರು.
ಅಂತಿಮ ಮತದಾರ ಪಟ್ಟಿ ಪ್ರಕಟಣೆ ನಂತರ ಸಹ ಯಾವುದೇ ಮತದಾರರ ನೋಂದಣಿ ಮಾಡಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ಆಯೋಗದ ವೆಬ್‌ಸೈಟ್‌ನಲ್ಲಿ ಹಾಗೂ ವೋಟರ್ ಹೆಲ್ಪಲೈನ್‌ದಲ್ಲಿ ನಿರಂತರ ನೋಂದಣೆ ಮಾಡಲು ಅವಕಾಶ ವಿರುತ್ತದೆ. ಅರ್ಹ ಮತದಾರರು ತಮ್ಮ ಹೆಸರು ಮತದಾರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಅನುರಾಧ ಜಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇದ್ದರು.