IMG-20240324-WA0062

ರಾಜಶೇಖರ್ ಅಂಗಡಿ ನಿಧನಕ್ಕೆ ಸಂತಾಪ ಸಭೆ

ಕರುನಾಡ ಬೆಳಗು ಸುದ್ದಿ 

ಕುಕನೂರು,24- ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ದ ರಾಜಶೇಖರ್ ಅಂಗಡಿ ಅವರ ನಿಧನಕ್ಕೆ ಇಲ್ಲಿಯ ಇಟಗಿ ಭೀಮಾಬಿಕಾ ದೇಗುಲ ದಲ್ಲಿ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಸಂತಾಪ ಸಭೆ ಜರುಗಿತು.

 

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ರವಿತೇಜ ಅಬ್ಬಿಗೇರಿ, ನಿವೃತ್ತಿ ಪ್ರಾಚಾಯ೯ ಕೆ.ಆರ್.ಕುಲಕರ್ಣಿ, ಪ್ರಾಚಾರ್ಯ ಫಕೀರಪ್ಪ ವಜ್ರಬಂಡಿ, ಸಾಹಿತಿಗಳಾದ ಗಂಗಾಧರ್ ಅವ ಟೇ, ಎಸ್.ಎಂ. ಹಿರೇಮಠ್, ಬಸವರಾಜ್ ಬಿನ್ನಾಳ ಮೊದಲಾದವರು ಮಾತನಾಡಿ, ರಾಜಶೇಖರ್ ಅಂಗಡಿ ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಿ ಬೆಳೆಸಿದ ಕೀರ್ತಿ ಅವರದು, ಪರಿಷತ್ತು ಸಂಕಷ್ಟ ಇದ್ದಾಗಲೂ ನೂರಾರು ರೂಪಾಯಿಗಳನ್ನು ತಕ್ಷಣವೇ ಜೋಡಿಸಿ ಸಮ್ಮೇಳನ, ಬಂದವರಿಗೆ ಆತಿಥ್ಯ ನೀಡುವ ಮೂಲಕ ದಾರಿದೀಪ ವಾಗಿದ್ದರೂ, ಯಾವುದೇ ಅಹಂಕಾರ ಇಲ್ಲದೆ ಸದಾ ಕ್ರಿಯಾ ಚಟುವಟಿಕೆ ಮೂಲಕ ಪರಿಷತ್ತು ಬೆಳವಣಿಗೆಗೆ ಸಹಕಾರಿ ಆಗಿದ್ದರು ಎಂದು ಸ್ಮರಿಸಿದರು.

 

ಪರಿಷತ್ತು ಸದಸ್ಯ ಭೀಮರೆಡ್ಡಿ ಶಾಡ್ಲ ಗೇರಿ ಮಾತನಾಡಿ, ರಾಜಶೇಖರ್ ಅಂಗಡಿ ಹೆಸರಿನಲ್ಲಿ ಸಭಾಂಗಣಕ್ಕೆ ಅಥವಾ ರಸ್ತೆಗೆ ಹೆಸರು ನಾಮಕರಣ ಮಾಡಬೇಕೆಂದು ತಿಳಿಸಿದರು.

 

ತಾಲೂಕು ಕಸಾಪ ಅಧ್ಯಕ್ಷ ಕಳಕಪ್ಪ ಕುಂಬಾರ ಅಧ್ಯಕ್ಷತೆ ವಹಿಸಿದ್ದರು.

 

ಸಭೆಯಲ್ಲಿ ಬಸವರಾಜ್ ಮೇಟಿ, ಶರಣಪ್ಪ ಕೊಪ್ಪದ, ಬಸವರಾಜ್ ಮೇಟಿ, ಅಶೋಕ್ ಮಾಡಿನೂರು, ಮೇಘರಾಜ ಜಿಡಗಿ, ರುದ್ರಪ್ಪ ಭಂಡಾರಿ, ಚನ್ನಯ್ಯ ಹಿರೇಮಠ್, ಪಾವ೯ತಿ ಗುತ್ತೇದಾರ್ ಮೊದಲಾದವರು ಉಪಸ್ಥಿತರಿದ್ದರು.

ಶಿಕ್ಷಕ ಬಸವರಾಜ್ ಉಪ್ಪಿನ ನಿರೂಪಿಸಿದರು. ಇದಕ್ಕೂ ಮುಂಚೆ ಮೌನಾಚರಣೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!