
ರಾಜ್ಯ ಪ್ರಶಸ್ತಿ : ಟೀ ಹೆಚ್ ಎನ್ ಬಸವರಾಜ್ ಗೆ ಸನ್ಮಾನ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೧೫- ಕೆಂಗಲ್ ಹನುಮಂತಯ್ಯ ರಾಜ್ಯ ಪ್ರಶಸ್ತಿ ಪುರಸ್ಕೃತ ಟಿ ಹೆಚ್ ಎಂ ಬಸವರಾಜ ಅವರನ್ನು ಕರ್ನಾಟಕ ರಾಜ್ಯ ಕ್ರಿಯ ಶಿಕ್ಷಕರ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಚಳಗುರ್ಕಿ ಅವರು ಮಾತನಾಡುತ್ತಾ, ಟಿ ಹೆಚ್ ಎಂ ಬಸವರಾಜ್ ರವರು ಕಳೆ ಮತ್ತು ಸಂಸ್ಕೃತಿ, ಕನ್ನಡ ಭಾಷಾ, ಅಭಿವೃದ್ಧಿ ಜೊತೆಗೆ ಹಲವಾರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಅಭಿನಂದನೆಯ ಎಂದರು.
ಇವರಿಗೆ ಭವಿಷ್ಯದಲ್ಲಿ ಮತ್ತಷ್ಟು ಪುರಸ್ಕಾರಗಳು ಲಭಿಸಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಎಚ್. ಟಿ. ನಿತೇಶ್,, ಎಚ್ ಆರ್ ಜೀವನ್ ಹಾಗೂ ಶಿವಲಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು.