WhatsApp Image 2024-02-08 at 4.03.50 PM

ರಾಜ್ಯಗಳ ಮೇಲೆ ರಾಜಕೀಯ ಹಸ್ತಕ್ಷೇಪ ನಿಲ್ಲಲಿ 

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,8- ಭಾರತದ ಒಕ್ಕೂಟ ಸ್ವರೂಪವನ್ನು ಬಲಗೊಳಿಸಲು, ರಾಜ್ಯಗಳ ಮೇಲೆ ಒಕ್ಕೂಟ ಸರ್ಕಾರದ ಹಸ್ತಕ್ಷೇಪಗಳನ್ನು ಈ ಕೂಡಲೇ ನಿಲ್ಲಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸ್ ವಾಧಿ ) ಜಿಲ್ಲಾ ಸಮಿತಿ ಒತ್ತಾಯಿಸಿದೆ, ದೇಶ ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಸವಿರುವಾದ ಮನವಿ ಪತ್ರವನ್ನು ಎಂದು ಜಿಲ್ಲಾಧಿಕಾರಿಗಳ ಮುಖಾಂತರ ಕಳಿಸಲಾಯಿತು.

ಈ ಸಂದರ್ಭದಲ್ಲಿ ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ ಸತ್ಯ ಬಾಬು ಮಾತನಾಡುತ್ತಾ ಭಾರತದ ಸಂವಿಧಾನದಂತೆ ದೇಶದ ಅತ್ಯಂತ ಒಕ್ಕೂಟದ ಸ್ವರೂಪವನ್ನು ಬಲಗೊಳಿಸಲು ಈಗ ಒಕ್ಕೂಟ ಸರ್ಕಾರ ರಾಜ್ಯ ಸರ್ಕಾರಗಳ ಮೇಲೆ ತನ್ನ ಅಧಿಕಾರ ದುರುಪಯೋಗ ಹಾಗೂ ಹಸ್ತಕ್ಷೇಪದ ಮೂಲಕ ಒಕ್ಕೂಟದ ಸ್ವರೂಪಕ್ಕೆ ಬಂಗು ಉಂಟು ಮಾಡು ಅದನ್ನು ಈ ಕೂಡಲೇ ನಿಲ್ಲಿಸಬೇಕು.

ಕರ್ನಾಟಕ ಹಾಗೂ ಕೇರಳ ಸರ್ಕಾರಗಳು ಒಕ್ಕೂಟ ಸರ್ಕಾರದ ಕಿರುಕುಳ ಹಾಗೂ ತಾರತಮ್ಯ ನೀತಿಯ ವಿರುದ್ಧ ನವ ದೆಹಲಿಯಲ್ಲಿ ನಡೆಸಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದೆ. ರಾಜ್ಯಗಳು ತಮ್ಮ ತರಿಗೆ ಹಾಗೂ ಸಂಪನ್ಮೂಲಗಳ ಪಾಲು ಪಡೆಯುವಲ್ಲಿ ಒಕ್ಕೂಟ ಸರ್ಕಾರ ಅಡ್ಡಿಯಾಗಬಾರದು. ಕರ್ನಾಟಕಕ್ಕೆ ಬರಗಾಲದ ಅನುದಾನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು.

ಒಕ್ಕೂಟ ಸರ್ಕಾರ ತನ್ನ ಮನಸ್ಸಿಗೆ ತೋಚಿದಂತೆ ರಾಜ್ಯ ಸರ್ಕಾರಗಳು ಸಾಲ ಪಡೆಯುವಂತೆ ಮಾಡುವುದನ್ನು ನಿಲ್ಲಿಸಬೇಕು. ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಯಿತು.

ಈ  ಕಾರ್ಯಕ್ರಮದಲ್ಲಿ ತಾಲೂಕ ಕಾರ್ಯದರ್ಶಿ ಜಯಚಂದ್ರ ಕುಮಾರಿ ಮತ್ತು ಮುಖಂಡರಾದ ಪಿಆರ್ ವೆಂಕಟೇಶ್, ಎಂ ತಿಪ್ಪೇಸ್ವಾಮಿ, ಎರಿಸ್ವಾಮಿ ತಾಲೂಕ ಸದಸ್ಯರಾದ ಹನುಮಂತಪ್ಪ, ತಿಪ್ಪೇರುದ್ರ, ಈರಮ್ಮ, ರುದ್ರಮ್ಮ, ಆಲಂಬಿ ಜೊತೆಗೆ ಹಲವಾರು ಮಂದಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!