
ರಾಜ್ಯದಲ್ಲಿ ಹೊಸದಾಗಿ 200 ಹಾಸ್ಟೆಲ್ ಮಂಜೂರು ಮಾಡಿ
ಮುಖ್ಯಮಂತ್ರಿಗಳಿಗೆ SFI ಆಗ್ರಹ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೦೯- ರಾಜ್ಯದಲ್ಲಿ ಹೊಸದಾಗಿ 200 ಹಾಸ್ಟೆಲ್ ಮಂಜೂರು ಮಾಡಿ, ಆಹಾರ ಭತ್ಯೆ ಹೆಚ್ಚಸಿ, ಸರಕಾರಿ ಶಾಲೆಗಳಿಗೆ ಡಿ, ಗ್ರೂಪ್ ಹುದ್ದೆ ಮಂಜೂರು ಮಾಡಲು SFI ಆಗ್ರಹಿಸಿದೆ.
ಈ ಕುರಿತು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ರಾಜ್ಯ ಸಮಿತಿಯು ಮುಖ್ಯಮಂತ್ರಿಗಳ ಜನತಾದರ್ಶನ ಮನವಿ ಸಲ್ಲಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ದೃಷ್ಟಿಯಿಂದ, ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣದ ಅನುಕೂಲಕ್ಕಾಗಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ, ಬಾಲಕ, ಬಾಲಕಿಯರ ವಸತಿ ನಿಲಯಗಳು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಇರಲಾರದೆ ತುಂಬಾ ಕಡಿಮೆ ಇರುತ್ತವೆ, ಹಾಸ್ಟೆಲ್ ಗಳ ಸಂಖ್ಯೆ ತುಂಬಾ ಕಡಿಮೆ ಇರುವುದರಿಂದ ರಾಜ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಹಾಸ್ಟೆಲ್ ಬೇಕೆಂದು, ಅರ್ಜಿ ಹಾಕಿ ಹಾಸ್ಟೆಲ್ ಸಿಗಲಾರದೆ ಹತ್ತಾರು ಸಾವಿರ ವಿದ್ಯಾರ್ಥಿಗಳು ಹಾಸ್ಟೆಲ್ ನಿಂದ ವಂಚಿತರಾಗಿದ್ದಾರೆ. ಅಂತಹ ವಿದ್ಯಾರ್ಥಿಗಳು ಪ್ರತಿನಿತ್ಯ 80 ರಿಂದ 100 ಕಿಲೋಮೀಟರ್ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬಂದು ಕಾಲೇಜ್ ಗೆ ಹೋಗಲು ತೊಂದರೆಯಾಗಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕು ಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಫೆಬ್ರುವರಿ 16, 2024ರಂದು ಮಂಡಿಸುವ ಬಜೆಟ್ ನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯದಲ್ಲಿ ಸುಮಾರು 200 ನೂತನ ಹಾಸ್ಟೆಲ್ ಗಳನ್ನು ಮಂಜೂರು ಮಾಡಿ, ಆಹಾರ ಭತ್ಯಯನ್ನು 2500 ಕ್ಕೆ ಹೆಚ್ಚಳ ಮಾಡಬೇಕು ಮತ್ತು ರಾಜ್ಯದಲ್ಲಿನ ಸರಕಾರಿ ಶಾಲೆಗಳಲ್ಲಿ ಡಿ.ಗ್ರೂಪ್ ಸಿಬ್ಬಂದಿ ಇರಲಾರದ ಕಾರಣ ಸರಕಾರಿ ಶಾಲೆಗಳಲ್ಲಿ ದಿನನಿತ್ಯ ಶಾಲೆಯ ಮೈದಾನದ ಕಸ ಬಳೆಯಲು ಹಾಗೂ ಶೌಚಾಲಯ ಸ್ವಚ್ಛತೆ ಮಾಡಲು ಶಿಕ್ಷಕರು ಇಲ್ಲವೇ ಶಾಲೆ ಮಕ್ಕಳು ಬಳಕೆ ಮಾಡುವವದನ್ನು ನಾವು ನೀವು ಎಲ್ಲರೂ ದಿನನಿತ್ಯ ನೋಡ್ತಾ ಇದ್ದೇವೆ ಇದನ್ನು ಬದಲಾಯಿಸಲು ರಾಜ್ಯದಲ್ಲಿರುವ 47,209, ಸರಕಾರಿ ಕಿರಿಯ, ಹಿರಿಯ, ಪ್ರೌಢಶಾಲೆ ಗಳಿಗೆ ಡಿ.ಗ್ರೂಪ್ ಸಿಬ್ಬಂದಿಯನ್ನು ನೇಮಕ ಮಾಡಲು ಬಜೆಟ್ ನಲ್ಲಿ ಹೊಸ ಹುದ್ದೆಗಳನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಅಮರೇಶ ಕಡಗದ ರಾಜ್ಯ ಪದಾಧಿಕಾರಿ ಗಣೇಶ ರಾಥೋಡ್, ಇತರರು ಇದ್ದರು