WhatsApp Image 2024-07-01 at 6.11.53 PM

ರಾಮಾಯಣ ಸರ್ವಶ್ರೇಷ್ಠ ಮಹಾಕಾವ್ಯ : ಶರಣಬಸಪ್ಪ ಬಿಳೆಯಲೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 1- ” ರಾಮಾಯಣ ಜಗತ್ತಿನ ಸರ್ವಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದಾಗಿದೆ ” ಎಂದು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಬಳ್ಳಾರಿ- ಕೊಪ್ಪಳದ ಅಧ್ಯಕ್ಷರಾದ ಪ್ರೊ.ಶರಣಬಸಪ್ಪ ಬಿಳೆಯಲೆ ಹೇಳಿದರು.

ಅವರು ಇಂದು ಸದ್ಭಾವನಾ ಸಂಸ್ಥೆ, ಗಂಗಾವತಿ, ಭಾರತ ಸಂಸ್ಕೃತಿ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ ರಾಮಾಯಣ ಪರೀಕ್ಷೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು.

“ಮಹರ್ಷಿ ವಾಲ್ಮೀಕಿ ರಚಿಸಿದ ಪ್ರಸ್ತುತ ರಾಮಾಯಣವು ನೈಜ ಘಟನೆಗಳನ್ನು ಆಧರಿಸಿದ್ದು ರಾಮಾಯಣದ ಕುರಿತಾದ ಹಲವಾರು ಸಾಕ್ಷಾಧಾರಗಳು ಭಾರತದ ಪ್ರತಿಯೊಂದು ಸ್ಥಳದಲ್ಲಿ ದೊರೆಯುತ್ತಿವೆ
ರಾಮಾಯಣ ಎಂದರೆ ರಾಮನ ಪಯಣ ರಾಮನ ಮಾರ್ಗ ರಾಮನ ಪಥ ಎಂದರ್ಥ ರಾಮನ ಮಾರ್ಗ ಯಾವ ರೀತಿಯಾಗಿತ್ತು ಎನ್ನುವುದನ್ನು ರಾಮಾಯಣದಲ್ಲಿ ಮಹರ್ಷಿ ವಾಲ್ಮೀಕಿಯವರು ಏಳು ಕಾಂಡಗಳಲ್ಲಿ ವಿವರಿಸುತ್ತಾರೆ ರಾಮಾಯಣದ ಏಳು ಕಾಂಡಗಳು 24,000 ಶ್ಲೋಕಗಳು ಐದುನೂರು ಉಪ ಅಧ್ಯಾಯಗಳನ್ನು ಒಳಗೊಂಡಿದೆ. ಬಾಲ ಕಾಂಡದಿಂದ ಪ್ರಾರಂಭವಾಗಿ ಉತ್ತರ ಕಾಂಡದವರೆಗೆ ಶ್ರೀರಾಮಚಂದ್ರರ ಹತ್ತು ಹಲವಾರು ಸಂಗತಿಗಳನ್ನು ವಿವರಿಸಲಾಗಿದೆ.

ವಿಶೇಷವಾಗಿ ಅಯೋದ್ಯಾಕಾಂಡದಲ್ಲಿ ರಾಮನ ವನವಾಸ,ದಶರಥನ, ಕೈಕೆಯಿ ,ಭರತ ಲಕ್ಷ್ಮಣ ಹಾಗೂ ಸೀತೆಯ ನಿರ್ಣಯಗಳನ್ನು ಸವಿಸ್ತಾರವಾಗಿ ವಿವರಿಸಲಾಗಿದೆ ಈ ಸಂದರ್ಭದಲ್ಲಿ ಅಯೋಧ್ಯೆಯಲ್ಲಾದ ಎಲ್ಲಾ ಘಟನಾವಳಿಗಳನ್ನು ನಮ್ಮ ಮನದ ಘಟನಾವಳಿಗಳಿಗೆ ಹೋಲಿಸಿಕೊಂಡು ವಾಲ್ಮೀಕಿ ಮಹರ್ಷಿಯವರು ಮನುಷ್ಯ ಸಹಜ ಭಾವನೆಗಳ ಏರಿಳಿತಗಳನ್ನು ಈ ಕಾಂಡದಲ್ಲಿ ವಿಶೇಷವಾಗಿ ಚಿತ್ರಿಸಿದ್ದಾರೆ
ಅರಣ್ಯ ಮತ್ತು ಕಿಷ್ಕಿಂದ ಕಾಂಡಗಳಲ್ಲಿ ಶ್ರೀರಾಮಚಂದ್ರ ಚಲಿಸಿದ ಮಾರ್ಗದಲ್ಲಿ ಬರುವ ಪ್ರತಿಯೊಂದು ಅರಣ್ಯದ ವರ್ಣನೆ, ಸಸಿಗಳ ಗುರುತಿಸುವಿಕೆ, ಹಾಗೂ ಪರಿಸರ ಮತ್ತು ವಾತಾವರಣವನ್ನು ವೈಜ್ಞಾನಿಕವಾಗಿ ವಿವರಿಸಲಾಗಿದೆ.

ಕಿಷ್ಕಿಂದ ಹಾಗೂ ಸುಂದರಕಾಂಡದಲ್ಲಿ ಈ ಪ್ರದೇಶಕ್ಕೆ ಸಂಬಂಧಪಟ್ಟಂತಹ ಕಾಂಡವಾಗಿರುವುದರಿಂದ ಹನುಮಂತ, ವಾಲಿ, ಸುಗ್ರೀವರ ನಡುವಿನ ಸಂಬಂಧಗಳನ್ನು ವಿವರಿಸಿದ್ದಾರೆ ಶ್ರೀರಾಮಚಂದ್ರ ಹಾಗೂ ಹನುಮಂತನ ನಡುವಿನ ಸಂಬಂಧವನ್ನು ಭಾವನಾತ್ಮಕವಾಗಿ ಸುಂದರವಾಗಿ ವಿವರಿಸಲಾಗಿದೆ.

ಒಟ್ಟಾರೆ ರಾಮಾಯಣದಲ್ಲಿ ಬರುವ ಪ್ರತಿಯೊಂದು ಕಾಂಡದಲ್ಲಿ ಶ್ರೀರಾಮರ ವ್ಯಕ್ತಿತ್ವ, ಹೃದಯವಂತಿಕೆ ಹಾಗೂ ಭಾವನೆಗಳನ್ನ ನಿಯಂತ್ರಿಸುವ ವಿಧಾನವನ್ನು ಶ್ರೀರಾಮಚಂದ್ರ ರನ್ನು ಉದಾರಣೆಯಾಗಿಸಿಕೊಂಡು ಸವಿಸ್ತಾರವಾಗಿ ವಿವರಿಸಲಾಗಿದೆ.

ರಾಮಾಯಣ ಸಾರ್ವತ್ರಿಕ ಮಹಾಕಾವ್ಯವಾಗಿದ್ದು ಎಲ್ಲಾ ಕಾಲಕ್ಕೂ ಎಲ್ಲಾ ಸಂದರ್ಭದಲ್ಲೂ ಕೂಡ ಅನ್ವಯಿಸುವಂತಹ ಶಾಶ್ವತ ಮೌಲ್ಯಗಳನ್ನು ರಾಮಾಯಣ ಪ್ರತಿನಿಧಿಸುತ್ತದೆ ವಿಶೇಷವಾಗಿ ಪ್ರೀತಿ, ಸ್ನೇಹ, ಸಹೋದರ ವಾತ್ಸಲ್ಯ, ಪಿತೃವಾಕ್ಯ ಪರಿಪಾಲನೆ, ಹಾಗೂ ಸಹೃದಯತೆ ವಿಶಾಲ ಮನಸ್ಸಿನ ಅವಶ್ಯಕತೆಗಳನ್ನು ವಿಶೇಷವಾಗಿ ಚಿತ್ರಿಸಲಾಗಿದೆ ಶ್ರೀರಾಮಚಂದ್ರ ಹಾಗೂ ಸೀತಾಮಾತೆಯ ನಡುವಿನ ಸಂಬಂಧವನ್ನು ಚಿತ್ರಿಸುತ್ತಲೇ ಶ್ರೀರಾಮಚಂದ್ರ ತನ್ನ ಸಹೋದರರಾದ ಲಕ್ಷ್ಮಣ ಭಾರತ ಹಾಗೂ ಶತ್ರುಘ್ನ ಜೊತೆಗಿನ ಸಹೋದರ ವಾತ್ಸಲ್ಯವನ್ನು ವಿವರಿಸಲಾಗಿದೆ ಇದರೊಂದಿಗೆ ಶ್ರೀರಾಮಚಂದ್ರ ತನ್ನ ಸಹಚರರಾದ ಹನುಮಂತ, ಸುಗ್ರೀವ, ವಿಭೀಷಣ, ಜಟಾಯು ಹಾಗೂ ಇತರ ಸಹಚರರೊಂದಿಗೆ ವರ್ತಿಸಿದ ರೀತಿಗಳನ್ನು ಭಾವನಾತ್ಮಕವಾಗಿ ವಿವರಿಸಲಾಗಿದೆ.

ಕುಟುಂಬದಲ್ಲಿನ ಪರಸ್ಪರ ವಾತ್ಸಲ್ಯ ಹಾಗೂ ಕುಟುಂಬದ ಸದಸ್ಯರ ಪರಸ್ಪರ ಪ್ರೀತಿ, ಗೌರವಗಳ ಮಹತ್ವದ ಬಗ್ಗೆ ರಾಮಾಯಣದಲ್ಲಿ ವಿಶೇಷವಾಗಿ ಚಿತ್ರಿಸಲಾಗಿದೆ.

ಒಟ್ಟಾರೆ ರಾಮಾಯಣವು ಮನುಕುಲದ ಏಳಿಗೆಗಾಗಿ ಮನಸ್ಸಿನ ಭಾವನೆಗಳ ಪಾತ್ರ ಬಹುಮುಖ್ಯವೆಂದು ವಿವರಿಸುತ್ತದೆ ಭಾರತದ ಆದರ್ಶ ಮೌಲ್ಯಗಳನ್ನು ಪ್ರತಿಯೊಂದು ಪಾತ್ರ ,ಕಥೆ, ಉಪಕಥೆಗಳಲ್ಲಿ ವಾಲ್ಮೀಕಿ ಮಹರ್ಷಿ ವಿವರಿಸುತ್ತಲೆ ವಸುದೈವ ಕುಟುಂಬಕಂ ಎನ್ನುವ ಸಂದೇಶವನ್ನು ಕೂಡ ರಾಮಾಯಣದ ಮೂಲಕ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಶ್ರೀರಾಮ ಹಾಗೂ ಸುಗ್ರೀವರ ಹಾಗೂ ಹನುಮಂತರ ಬೇಟಿಯ ಸ್ಥಳವಾಗಿರುವ ಕಿಷ್ಕಿಂಧೆಯ ಪ್ರದೇಶವನ್ನು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಪಡಿಸಿ ಹೆಚ್ಚಿನ ಜನರಿಗೆ ರಾಮಾಯಣದ ಮಹತ್ವವನ್ನು ಸಾರುವ ಅಂತಹ ಹಲವಾರು ಪಾರ್ಕ್ ಗಳನ್ನು ಹಾಗೂ ಸ್ಮಾರಕಗಳನ್ನು ಅಂಜನಾದ್ರಿಯ ಪ್ರದೇಶದಲ್ಲಿ ಸ್ಥಾಪಿಸಬೇಕು” ಎಂದು ವಿವರಿಸಿದರು.

ಸಭೆಯ ಅಧ್ಯಕ್ಷತೆಯನ್ನು ಶ್ರೀಮತಿ ಶಾಂತಾ ಸುಬ್ರಹ್ಮಣ್ಯ ರಾಯ್ಕರ್,ಮುಖ್ಯ ಅತಿಥಿಗಳಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀನಿವಾಸ ಅಂಗಡಿ, ಹಿರಿಯ ಉದ್ಯಮಿ ಶ್ರೀ ನಿವಾಸಶ್ರೇಷ್ಠಿ ಕೆಲೋಜಿ, ಸದ್ಭಾವನಾ ಸಂಸ್ಥೆಯ ಸುಬ್ರಹ್ಮಣ್ಯ ರಾಯ್ಕರ್, ರವೀಂದ್ರ ಹೂಲಗೇರಿ, ಶಿವಾನಂದ ತಿಮ್ಮಾಪುರ,ಅಜ್ಜಯ್ಯ, ಆನಂದ ಕೆಲೋಜಿ, ಉಪಸ್ಥಿತರಿದ್ದರು.

ಪ್ರಾಸ್ತಾವಿಕವಾಗಿ ಗುಂಡೂರು ಪವನ್ ಕುಮಾರ್,ನಿರೂಪಣೆಯನ್ನು ಗಾಯಿತ್ರಿ ವರ್ಣೆಕರ್ ನೆರವೇರಿಸಿದರು. ರಾಮಾಯಣ ಪರೀಕ್ಷೆಯಲ್ಲಿ ಪ್ರಥಮಸ್ಥಾನ ಮೀರಾ ಪಾನಘಂಟಿ,ವೀಣಾ,

Leave a Reply

Your email address will not be published. Required fields are marked *

error: Content is protected !!