c3e0d83f-e94b-4123-a387-5710db66c797

ರಾಯಚೂರಿನಲ್ಲಿ ಏಮ್ಸ್ ಗೆ ಆಗ್ರಹಿಸಿ ಕೊಪ್ಪಳದಲ್ಲಿ ಮನವಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, ೧೬- ಕಲ್ಯಾಣ ಕರ್ನಾಟಕ ಭಾಗದ ರಾಯಚೂರಿ ನಲ್ಲಿಯೇ ಏಮ್ಸ್ (ಆಲ್ ಇಂಡಿಯಾ ಮೆಡಿಕಲ್ ಸೈನ್ಸ್) ಸಂಸ್ಥೆ ಆರಂಭಿಸುವಂತೆ ಆಗ್ರಹಿಸಿ ಸುಮಾರು ೭೯೬ ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿ ಇಂದು ಕೊಪ್ಪಳದಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾ ಯುವ ಘಟಕ ದಿಂದ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಏಮ್ಸ ಆಪ್ಸತ್ರೆಗಾಗಿ ರಾಯಚೂರಿನಲ್ಲಿ ಸುಮಾರು ೨ ವರ್ಷ ಗಳಿಂದ ನಿರಂತರವಾಗಿ ಹೋರಾಟ ಮಾಡುತ್ತ ಬಂದಿ ರುವ ರಾಯಚೂರ ಏಮ್ಸ್ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಹೋರಾಟಕ್ಕೆ ಕೇಂದ್ರ ಸರ್ಕಾರ ಯಾವುದೇ ಕಿಮ್ಮತ್ತು ನೀಡುತ್ತಿಲ್ಲ. ಜನಪ್ರತಿ ನಿಧಿಳಿಗೆ ನಿರಂತರವಾಗಿ ಮನವಿ ಮಾಡುತ್ತ ಬಂದರೂ ಯಾವುದೇ ಪ್ರಗತಿ ಆಗಿರುವುದಿಲ್ಲ.

ಹೀಗಾಗಿ ಇದನ್ನು ಖಂಡಿಸಿ ರಾಯ ಚೂರು ಹೋರಾಟ ಸಮಿತಿ ಇಡೀ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಂದು ದಿ.೧೬ ರಂದು ಪ್ರತಿಭಟನೆ ಹಮ್ಮಿಕೊಂಡಿದ್ದು, ಆ ನಿಟ್ಟಿನಲ್ಲಿ ಕೊಪ್ಪಳದಲ್ಲೂ ಕೂಡ ರಾಯಚೂರಿಗೆ ಏಮ್ಸ್ ನೀಡುವಂತೆ ಬೆಂಬಲಿಸಿ ಮನವಿ ಅರ್ಪಿಸಲಾಯಿತು.

ಕೇದ್ರ ಸರ್ಕಾರ ತಕ್ಷಣ ಕ್ರಮಕೈಗೊಂಡು ರಾಯಚೂರಗೆ ಏಮ್ಸ್‌ ಘೋಶಿಸಬeಕು ಇಲ್ಲವಾದಲ್ಲಿ ಹೋರಾಟ ಹಂತಹಂತವಾಗಿ ತೀವ್ರಗೊಳಿಸುವುದಾಗಿ ಸಂಘಟಕರು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಯುವ ಘಟಕದ ಜಿಲ್ಲಾ ಅಧ್ಯಕ್ಷ ರಮೇಶ ತುಪ್ಪದ, ಜಿಲ್ಲಾ ಸಂಚಾಲಕ ಸಂತೋಷ ದೇಶಪಾಂಡೆ, ಶಿವ ಕುಮಾರ ಕುಕನೂರ, ಶರಣು ಡೊಳ್ಳಿನ, ಸೋಮನಗೌಡ, ಸುಧಾ ಕರ ಮುಜಗೊಂಡ, ನಿತೀಶ ಪುಲಸ್ಕರ, ಜಗದೀಶ ಗುತ್ತಿ, ಕರವೇ  ಯಲಬುರ್ಗಾ ಘಟಕದ ರಾಜ ಶೇಖರ ಶ್ಯಾಗೋಟಿ ಮತ್ತು ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!