
ರಾಷ್ಟ್ರೀಯ ಜಂತುಹುಳ ನಿವಾರಣ ಕಾರ್ಯಕ್ರಮ ಮನೆಮನೆ ತೆರಳಿ ಮಾತ್ರೆ ವಿತರಿಸಿ ಡಾ ಬಿ ಈರಣ್ಣ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ – ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾ ಮತ್ತು ಆರೋಗ್ಯ ಅಧಿಕಾರಿಗಳಿಗೆ ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮ 2024 ವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಟಿ ಎಚ್ ಓ ಡಾ ಬಿ ಈರಣ್ಣ ಅವರು ಮಕ್ಕಳ ಅಪೌಷ್ಟಿಕತೆ ಮತ್ತು ರಕ್ತ ಹೀನತೆಗೆ ಜಂತುಹುಳು ಬಾಧೆ ಕಾರಣವಾಗಿದೆ. ಇವುಗಳ ನಿವಾರಣೆಗಾಗಿ ಘನ ಸರ್ಕಾರ ಪ್ರತಿ 6 ತಿಂಗಳಿಗೊಮ್ಮೆ 1 ರಿಂದ 16 ವರ್ಷದ ಮಕ್ಕಳಿಗೆ ಅಲ್ಬೆಂಡಝೋಲ್ ಮಾತ್ರೆ ವಯಸ್ಸಿಗನುಗುಣವಾಗಿ ಉಚಿತವಾಗಿ ವಿತರಿಸಲಾಗುತ್ತಿದೆ.
ಪ್ರಸ್ತುತ ಅವಧಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇದ್ದುದರಿಂದ ಮನೆಮನೆಗೆ ತೆರಳಿ ಮಾತ್ರೆ ವಿತರಿಸಲು ಆಶಾ ಕಾರ್ಯಕರ್ತೆಯರಿಗೆ ಆದೇಶಿಸಿದರು.
ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಭೀಮ್ ರಾಜ್ ರವರು ಈ ಕಾರ್ಯಕ್ರಮ ಮೇ 13ರಿಂದ 27ರವರೆಗೆ ನಡೆಯಲಿದ್ದು ತಮ್ಮ ವ್ಯಾಪ್ತಿಯ ಮನೆಗಳಲ್ಲಿ 1-2 ವರ್ಷದವರಿಗೆ 200mg 2 ರಿಂದ16 ವರ್ಷದ ಒಳಗಿನ ಮಕ್ಕಳಿಗೆ 400 ಎಂ ಜೆ ಮಾತ್ರೆ ಚಪ್ಪರಿಸಲು ವಿತರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ರವರು ಜಂತುಹುಳು ಎಂದರೇನು, ಅದರ ವಿಧಗಳು, ಹರಡುವ ಬಗೆ, ಮಕ್ಕಳಲ್ಲಿ ಕಂಡುಬರುವ ಲಕ್ಷಣಗಳು ಉಂಟಾಗುವ ತೊಂದರೆಗಳು ಮತ್ತು ನಿವಾರಣೋಪಾಯಗಳ ಬಗ್ಗೆ ಮಾಹಿತಿ ನೀಡಿದರು.
ಎಸ್ ಟಿ ಎಲ್ ಎಸ್ ಆನಂದ ಅಬ್ಬಿಗೇರಿ ಈ ಕಾರ್ಯಕ್ರಮದ ಜೊತೆಗೆ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ ನಡೆಸಿ ಸಂಶಯಾಸ್ಪದ ಕ್ಷಯ ರೋಗಿಗಳನ್ನು ಗುರುತಿಸಿ ಫಾಲ್ಕನ್ ಟ್ಯೂಬ್ ನೀಡಿ ಇಲ್ಲಿಯೇ ಸಾರ್ವಜನಿಕ ಆಸ್ಪತ್ರೆಯಲ್ಲಿ. ವ್ಯವಸ್ಥೆಗೊಳಿಸಲ್ಪಟ್ಟ ಸಿಬಿ ನಾಟ್ ಗೆ ನಿಕ್ಷಯ ಐಡಿ ರಚಿಸಿ ಕಳುಹಿಸಿಕೊಡಲು ಕೋರಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಶೇಖರ್ ಎರಡು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವುದಾಗಿ ಭರವಸೆ ನೀಡಿ ವಂದನಾರ್ಪಣೆ ಮಾಡಿದರು.
ಪ್ರಾಯೋಗಿಕವಾಗಿ ಮಾನ್ಯ ಟಹೆಚ್ಓ ರವರು 29ನೇ ವಾರ್ಡಿನಲ್ಲಿ ಮಕ್ಕಳಿಗೆ ಮಾಹಿತಿ ನೀಡಿ ಪ್ರತ್ಯಕ್ಷವಾಗಿ ಮಾತ್ರೆ ಚಪ್ಪರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸದಸ್ಯ ಅಬ್ದುಲ್ ನಬಿ ಆಶಾಮೆಂಟರ್ ಸುಜಾತ ಎಸ್ ಟಿ ಎಸ್ ಗೋಪಾಲ್ ಟಿಬಿಎಚ್ ವಿ ಹುಲಿಗೆಪ್ಪ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.